Movie News: ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಹೇಳಿಕೆ ನಟ ಕಮಲ್ ಹಾಸನ್ ಗೆ ದೊಡ್ಡ ಸಂಕಷ್ಟ ತಂದಿಟ್ಟಿದೆ. ಕಮಲ್ ಹಾಸನ್ ವಿರುದ್ಧ ಕನ್ನಡಿಗರ ಆಕ್ರೋಶ ಕಟ್ಟೆ ಒಡೆದಿತ್ತು. ಅಲ್ಲದೆ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದರು. ಆದರೆ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದು ಕಮಲ್ ಹಾಸನ್ ಉದ್ಧಟತನ ಮೆರೆದಿದ್ದು ಇದಕ್ಕೆ ಇದೀಗ ಕರ್ನಾಟಕ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಕಮಲ್ ನಟನೆಯ ಥಗ್ ಲೈಫ್ ಚಿತ್ರ ಜೂನ್ 5ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದ್ದರಿಂದ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಹಿನ್ನಡೆಯಾಗಿದೆ.
ಈ ವಿಚಾರಣೆ ವೇಳೆ ನಿರ್ಮಾಪಕರ ಪರ ವಕೀಲರಾದ ಧ್ಯಾನ್ ಚಿನ್ನಪ್ಪ ಕರ್ನಾಟಕದಲ್ಲಿ ನಾವು ಕಮಲ್ ಹಾಸನವರ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಬಹುಶಃ ಅವರಿಗೆ ಆತ್ಮಪ್ರತಿಷ್ಠೆ ಅಡ್ಡ ಬರುತ್ತಿರಬಹುದು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಜೂನ್ 10 ರಂದು ವಿಚಾರಣೆ ಮುಂದೂಡಿದ್ದಾರೆ.
ತಮ್ಮ ಪತ್ರದ ಮೂಲಕ ಕನ್ನಡದ ಪ್ರೀತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ..!
ನ್ಯಾಯಮೂರ್ತಿಗಳು ಹೇಳಿದ್ದನ್ನು ಕಮಲ್ ಹಾಸನ್ ಗೆ ತಿಳಿಸಿದ್ದೇವೆ. ಕಮಲ್ ಹಾಸನ್ ಬರೆದ ಪತ್ರವನ್ನು ಒಮ್ಮೆ ದಯವಿಟ್ಟು ಓದಿ ಕಮಲ್ ಹಾಸನ್ ನಟನೆಯ ರಿಲೀಸ್ ಗೆ ಭದ್ರತೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಧ್ಯಾನ್ ಚಿನ್ನಪ್ಪ ಅವರು ಕಮಲ್ ಹಾಸನ ಬರೆದಿರುವ ಪತ್ರ ಓದಿ ತಿಳಿಸಿದ್ದಾರೆ. ತಮಿಳಿನಂತೆ ಕನ್ನಡ ಕೂಡ ಶ್ರೀಮಂತ ಭಾಷೆ ಎಲ್ಲಾ ಭಾಷೆಗಳಿಗೂ ಸಮಾನತೆ ಇರಬೇಕೆಂದು ಬಯಸುತ್ತೇನೆ. ನಾವೆಲ್ಲರೂ ಒಂದೇ, ಒಂದೇ ಕುಟುಂಬವೆಂದು ಹೇಳಿದ್ದಾರೆ. ಕನ್ನಡಿಗರ ಭಾಷಾ ಪ್ರೇಮಕ್ಕೆ ನಾನು ಹೆಮ್ಮೆಪಡುತ್ತೇನೆ ಎಂದು ಪತ್ರ ಓದಿದ್ದಾರೆ.
ಕಮಲ್ ಹಾಸನ್ ಕ್ಷಮೆಯಾಚಿಸಿದರೆ ಎಲ್ಲಾ ಸರಿ ಹೋಗಲಿದೆ ನಿಜ. ಆದರೆ ಕಮಲ್ ಹಾಸನ್ಗೆ ಯಾವುದೇ ದುರುದ್ದೇಶವಿರಲಿಲ್ಲ. ಕನ್ನಡದ ಬಗ್ಗೆ ಅವರ ನಿಲುವನ್ನು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಚಿನ್ನಪ್ಪ ಹೇಳಿದ್ದಾರೆ. ತಮ್ಮ ಪತ್ರದ ಮೂಲಕ ಕನ್ನಡದ ಪ್ರೀತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಒಂದು ಪದ ಸೇರಿಸುವ ಒತ್ತಾಯ ಇರಬಾರದು ಎಂದು ವಾದಿಸಿದ್ದರು. ಇದಕ್ಕೆ ನ್ಯಾಯಮೂರ್ತಿಗಳು ಒತ್ತಾಯವಲ್ಲ ಬೀಟಿಂಗ್ ಅರೌಂಡ್ ದ ಬುಷ್ ಬೇಡ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಯಾವುದೇ ದುರುದ್ದೇಶ ಇಲ್ಲದಿರುವುದರಿಂದ ಕ್ಷಮೆ ಕೇಳುತ್ತಿಲ್ಲ..
ನಾನೇ ಕಮಲ್ ಹಾಸನ ಜೊತೆಗೆ ಮಾತನಾಡಿದ್ದೇನೆ ಇದಕ್ಕೂ ಮೀರಿ ಬೇರೆ ಹೇಳಬೇಕಿಲ್ಲ. ಅವರು ಕನ್ನಡದ ಬಗ್ಗೆ ಅಪಾರವಾದ ಗೌರವ ಹೊಂದಿದ್ದಾರೆ.ಇದಕ್ಕೂ ಮೀರಿ ಬೇರೆ ಹೇಳಬೇಕಿಲ್ಲ ಸಮಯ ಯೋಚನೆ ಮಾಡಲು ಪರೋಕ್ಷವಾಗಿ ಕಮಲ್ ಹಾಸನವರು ಮತ್ತೆ ನಿರಾಕರಿಸಿದ್ದಾರೆ ಯಾವುದೇ ದುರುದ್ದೇಶ ಇಲ್ಲದಿರುವುದರಿಂದ ಕ್ಷಮೆ ಕೇಳುತ್ತಿಲ್ಲ ಹಾಗಾಗಿ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡುವುದಿಲ್ಲ. ಈ ವೇಳೆ ಕಮಲ್ ಹಾಸನ್ ಆಗಿರಲಿ ಯಾರೇ ಆಗಲಿ ಜನರ ಭಾವನೆ ನೋಯಿಸಬಾರದು ಎಂದು ಜಡ್ಜ್ ತಾಕೀತು ಮಾಡಿದ್ದಾರೆ. ಬಳಿಕ ವಿಚಾರಣೆ ಒಂದು ವಾರ ಮುಂದೂಡುವಂತೆ ವಕೀಲರು ಮನವಿ ಮಾಡಿದ್ದರು, ಅಲ್ಲದೆ ವಾಣಿಜ್ಯ ಮಂಡಳಿಯೊಂದಿಗೆ ಈ ಬಗ್ಗೆ ಚರ್ಚಿಸುತ್ತೇವೆ ಎಂದು ಹೈಕೋರ್ಟಿಗೆ ಕಮಲ್ ಪರ ವಕೀಲರು ಸ್ಪಷ್ಟಣೆ ನೀಡಿದ್ದಾರೆ.
ಪ್ರತಿಭಟನೆ ಮಾಡುತ್ತಿರುವವರು ರಾಜಕೀಯ ಅಜೆಂಡಾ ಹೊಂದಿದ್ದಾರೆ..
ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ತಡೆಯೊಡ್ಡಿದ ಹಿನ್ನೆಲೆಯಲ್ಲಿ ಚಿತ್ರತಂಡ ಹೈಕೋರ್ಟ್ ಮೊರೆ ಹೋಗಿತ್ತು. ಏನೇ ಆದರೂ ಕ್ಷಮೆ ಕೇಳುವುದಿಲ್ಲ ಎಂದು ಕಮಲ್ ಮೊಂಡಾಟ ಮೆರೆದಿದ್ದರು. ನಾನು ಯಾವುದೇ ತಪ್ಪು ಮಾಡಿಲ್ಲ, ಕ್ಷಮೆಯಾಚಿಸುವುದಿಲ್ಲ, ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ರಾಜಕೀಯ ಅಜೆಂಡಾ ಇಟ್ಟುಕೊಂಡು ಮಾಡುತ್ತಿದ್ದಾರೆ ಎಂದಿದ್ದರು. ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ ಅವರ ಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಎಚ್ಚರಿಸಿತ್ತು.
ಕನ್ನಡ ಭಾಷೆ ತಮಿಳಿಂದ ಹುಟ್ಟಿದೆ ಅನ್ನೋಕೆ ಅವರೇನು ಇತಿಹಾಸಕಾರರಾ..?
ಇಂದು ಹೈಕೋರ್ಟ್ ನಲ್ಲಿ ಚಿತ್ರತಂಡ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕ್ಷಮೆ ಕೇಳಿದ್ರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ. ಯಾವುದೋ ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟಿದೆ ಅಂದ್ರೆ ಹೇಗೆ? ಕನ್ನಡ ಭಾಷೆ ತಮಿಳಿಂದ ಹುಟ್ಟಿದೆ ಅನ್ನೋಕೆ ಅವರೇನು ಇತಿಹಾಸಕಾರರಾ? ಈ ಹಿಂದೆ ಸಿ.ರಾಜಗೋಪಾಲಾಚಾರಿ ಕೂಡ ಕ್ಷಮೆಯನ್ನು ಕೇಳಿದ್ದರು. ಇವತ್ತಿನ ಪರಿಸ್ಥಿತಿ ನಿರ್ಮಾಣಕ್ಕೆ ನೀವೇ ಕಾರಣ, ಈ ರೀತಿ ಹೇಳಿಕೆ ನೀಡಬಾರದು. ಕಮಲ್ ಹಾಸನ್ ಸಾಮಾನ್ಯ ವ್ಯಕ್ತಿ ಅಲ್ಲ, ಪಬ್ಲಿಕ್ ಫಿಗರ್. ಅವರು ಮೊದಲು ಕ್ಷಮೆ ಕೇಳಲಿ, ಆಮೇಲೆ ಅರ್ಜಿ ಪರಿಗಣಿಸ್ತೇವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಕಮಲ್ ಪರ ವಕೀಲರು, ಥಗ್ ಲೈಫ್ ಸಿನಿಮಾದ ನಿರ್ಮಾಪಕರು, ಸಿನಿಮಾ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದ್ದಾರೆ. ಅಲ್ಲದೆ, ಫಿಲಂ ಚೇಂಬರ್ ಜೊತೆಗೆ ನಿರ್ಮಾಪಕರು ಚರ್ಚೆ ನಡೆಸಲು ಸಿದ್ಧವಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿದ್ದರು. ಹೀಗಾಗಿ ಅರ್ಜಿಯನ್ನು ಜೂನ್ 10ಕ್ಕೆ ಮುಂದೂಡಿ ನ್ಯಾಯಾಲಯ ಆದೇಶಿಸಿದೆ.