ನವದೆಹಲಿ: ಮಂಡ್ಯ ಜಿಲ್ಲೆಯ ರೈತರ ಬೆಳೆಗಳಿಗೆ ಕೆಆರ್ ಎಸ್ ಅಣೆಕಟ್ಟಿನಿಂದ ನೀರು ಹರಿಸುವಂತೆ ಕೇಂದ್ರ ಜಲಶಕ್ತಿ ಸಚಿವರಿಗೆ ಸಂಸದೆ ಸುಮಲತಾ ಮನವಿ ಮಾಡಿದ್ದಾರೆ. ಈ ಮೂಲಕ ರೈತರಿಗೆ ತಾವು ನೀಡಿದ್ದ ಮಾತು ಉಳಿಸಿಕೊಳ್ಳೋದಕ್ಕೆ ಸಂಸದೆ ಪ್ರಾಮಾಣಿಕ ಪ್ರಯತ್ನ ಮಾಡ್ತಿದ್ದಾರೆ.
ಮಂಡ್ಯ ಜಿಲ್ಲೆಯ ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಈ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಕೆಆರ್ ಎಸ್ ಅಣೆಕಟ್ಟಿನಿಂದ 2 ಟಿಎಂಸಿ ನೀರನ್ನು ರೈತರ ಜಮೀನುಗಳಿಗೆ ನೀರು ಹರಿಸುವಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್ ಗೆ ಮನವಿ ಮಾಡಿದ್ದಾರೆ. ಅಲ್ಲದೆ ರಾಜ್ಯದ ಕೇಂದ್ರ ಸಚಿವರಾದ ಡಿ.ವಿ ಸದಾನಂದಗೌಡ, ಪ್ರಹ್ಲಾದ್ ಜೋಶಿಯವರಿಗೂ ಈ ಬಗ್ಗೆ ಕೇಂದ್ರದಲ್ಲಿ ಒತ್ತಡ ಹೇರಲು ಸಂಸದೆ ಸುಮಲತಾ ಮನವಿ ಮಾಡಿದ್ದಾರೆ. ಈ ಮೂಲಕ ಆಡಿದ ಮಾತು ಉಳಿಸಿಕೊಂಡು ರೈತರ ಕಷ್ಟ ನಿವಾರಿಸಲು ಸುಮಲತಾ ಅಂಬರೀಶ್ ಪ್ರಯತ್ನಿಸುತ್ತಿದ್ದಾರೆ.
ಸಂಸದೆ ಸುಮಲತಾಗೆ ಸಿಟ್ಟುಬಂದಿದ್ದ್ಯಾಕೆ ಗೊತ್ತಾ…?ಮಿಸ್ ಮಾಡದೇ ಈ ವಿಡಿಯೋ ನೋಡಿ