Sunday, September 15, 2024

Latest Posts

‘ನಾನು ನಾನಾಗೇ ಇರ್ತೀನಿ, ಜನರ ಪರ ಇರ್ತೀನಿ’- ಸಂಸದೆ ಸುಮಲತಾ

- Advertisement -

ಮಂಡ್ಯ: ನಾನು ಯಾರ ಬಗ್ಗೆಯೂ ಮಾತನಾಡೋದಿಲ್ಲ, ಜನ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ ಅವುಗಳ ಮೇಲೆ ನಾನು ಗಮನ ಹರಿಸ್ತೀನಿ ಅಂತ ಸುಮಲತಾ ಮತ್ತೆ ಪ್ರಬುದ್ಧತೆ ಮೆರೆದಿದ್ದಾರೆ.

ಮಂಡ್ಯದ ಕೀಲಾರ ಗ್ರಾಮಕ್ಕೆ ಭೇಟಿ ನೀಡಿದ್ದ ಸಂಸದೆ ಸುಮಲತಾ ಅಂಬರೀಶ್, ಚುನಾವಣೆ ಸಂದರ್ಭದಲ್ಲೂ ನಾನು ಯಾರ ಬಗ್ಗೆ ಕೂಡ ಕೀಳಾಗಿ ಮಾತನಾಡಿಲ್ಲ.ಈಗಲೂ ಸಹ ನಾನು ಯಾರ ಬಗ್ಗೆ ಸಹ ಮಾತನಾಡಲ್ಲ. ನನಗೆ ಜನ ಜವಾಬ್ದಾರಿ ಕೊಟ್ಟಿದ್ದಾರೆ. ಕೆಲಸ ಮಾಡಿಕೊಂಡು ಹೋಗ್ತೀನಿ ಅಂತ ಹೇಳಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಬರ, ನೀರಿನ ಸಮಸ್ಯೆ ಹೆಚ್ಚಿದೆ. ಅದನ್ನು ಬಗೆಹರಿಸುವತ್ತ ಗಮನ ಹರಿಸಬೇಕು. ಇದು ರಾಜಕಾರಣ ಮಾಡೋ ಸಮಯ ಅಲ್ಲ. ಟೀಕೆಗಳಿಗೆ ಉತ್ತರ ಕೊಡುತ್ತಾ ಸಮಯ ಹರಣ ಮಾಡಲ್ಲ ಎಂದರು. ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ವಿಚಾರವಾಗಿ ಕೂಡ ನಾನು ಪ್ರತಿಕ್ರಿಯೆ ಕೊಡಲ್ಲ. ಅವರ ಕೆಲಸವನ್ನ ಅವ್ರು ಮಾಡ್ತಿದ್ದಾರೆ ಅಂತ ಸುಮಲತಾ ನೇರವಾಗಿ ಉತ್ತರಿಸಿದ್ರು.

ಸಾರ್ವಜನಿಕರ ಕರೆ ಸ್ವೀಕರಿಸದ ವಿಚಾರಕ್ಕೆ ಉತ್ತರಿಸಿಕೋ ಸಂಸದೆ, ಸಭೆಗಳು ಅಥವಾ ದೆಹಲಿಯಲ್ಲಿ ಇದ್ದಾಗ ಫೋನ್ ಪಿಕ್ ಮಾಡಿಲ್ಲ. ಮುಂದೆ ಮಂಡ್ಯದಲ್ಲಿ ಕಚೇರಿ ಮಾಡಿ ಜನರ ಸಮಸ್ಯೆ ಆಲಿಸಲು ಸಿಬ್ಬಂದಿ ನೇಮಕ ಮಾಡ್ತೀನಿ. ಈಗಾಗಲೇ ಮಂಡ್ಯದಲ್ಲಿ ನನ್ನ ಮನೆ ಇದೆ. ಪ್ರತಿ ತಾಲೂಕಿಗೂ ಭೇಟಿ ನೀಡಿ ವಾರಕ್ಕೆ 3 ದಿನ ಮಂಡ್ಯದಲ್ಲೇ ಇರ್ತೀನಿ ಅಂತ ಹೇಳಿದ್ರು. ಹಾಗೇ ಸುಮಲತಾ ಬಿಜೆಪಿ ಅಥವಾ ಕಾಂಗ್ರೆಸ್ ಸೇರುವ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ, ನಾನು ನಾನಾಗೇ ಇರ್ತೀನಿ. ಜನರ ಪರ ಇರ್ತೀನಿ ಅಂತ ಸುಮಲತಾ ಹೇಳಿದ್ದಾರೆ.

ಮಂಡ್ಯ ಜನರಿಗಾರಿ ಹೊಸ ನಿರ್ಧಾರ!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=89TCkowA-4Q

- Advertisement -

Latest Posts

Don't Miss