Sunday, September 8, 2024

Latest Posts

ಮೆಕ್ಸಿಕನ್ ಭೇಲ್ ರೆಸಿಪಿ

- Advertisement -

Recipe: ನೀವು ಚರ್ಮುರಿ ಬಳಸಿ, ಇಂಡಿಯನ್ ಭೇಲ್‌ಪುರಿ ಮಾಡಿ ತಿಂದಿರುತ್ತೀರಿ. ಆದರೆ ಮೆಕ್ಸಿಕನ್ ಭೇಲ್ ಎಂದಾದರೂ ತಿಂದಿದ್ದೀರಾ. ಇದನ್ನು ತಯಾರು ಮಾಡೋದು ತುಂಬಾ ಸುಲಭ. ಹಾಗಾದರೆ ಇದನ್ನು ಹೇಗೆ ತಯಾರು ಮಾಡೋದು ಅಂತಾ ತಿಳಿಯೋಣ ಬನ್ನಿ..

ಗ್ಯಾಸ್ ಆನ್ ಮಾಡಿ ಪ್ಯಾನ್ ಇರಿಸಿ, ಒಂದು ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಮೂರು ಸ್ಪೂನ್ ಈರುಳ್ಳಿ ಸೇರಿಸಿ ಹುರಿಯಿರಿ. ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಅರ್ಧ ಕಪ್ ಟೊಮೆಟೋ ಪ್ಯೂರಿ ಸೇರಿಸಿ. ಇದು ಕೊಂಚ ಕುದಿಬಂದ ಬಳಿಕ, ಇದಕ್ಕೆ 1 ಸ್ಪೂನ್ ಟೊಮೆಟೋ ಸಾಸ್, 1 ಸ್ಪೂನ್ ಖಾರದಪುಡಿ, ಅರ್ಧ ಸ್ಪೂನ್ ಜೀರಿಗೆ ಪುಡಿ, ಅರ್ಧ ಸ್ಪೂನ್ ಸಕ್ಕರೆ,1 ಸ್ಪೂನ್ ವಿನೇಗರ್, ಇವೆಲ್ಲವನ್ನೂ ಹಾಕಿ ಮಿಕ್ಸ್ ಮಾಡಿ, 2 ನಿಮಿಷ ಬೇಯಿಸಿ. ಈಗ ಮೆಕ್ಸಿಕನ್ ಸಾಸ್ ರೆಡಿ.

ಈ ಟೊರ್‌ಟಿಲ್ಲಾಸ್ ಎಂಬ ಸಾಮಗ್ರಿ ಇದ್ದರೆ ಅದನ್ನು ಬಳಸಿ. ಇಲ್ಲವೆಂದಲ್ಲಿ, ನೀವೇ ಮೈದಾ ಹಿಟ್ಟನ್ನ ಬಳಸಿ, ಚಪಾತಿ ಶೇಪ್‌ನಲ್ಲಿ ಲಟ್ಟಿಸಿ, ಚೌಕಾಕಾರದಲ್ಲಿ ಕತ್ತರಿಸಿ, ಎಣ್ಣೆಯಲ್ಲಿ ಕರಿಯಿರಿ.

ಈಗ ಭೇಲ್ ರೆಡಿ ಮಾಡಲು ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಬೇಯಿಸಿದ ಕಾರ್ನ್, ಇದ್ದರೆ ರೆಡ್ ಮತ್ತು ಎಲ್ಲೋ ಪೆಪ್ಪರ್, ಬೇಯಿಸಿದ ಆಲೂಗಡ್ಡೆ, 2 ಟೇಬಲ್ ಸ್ಪೂನ್ ನೆನೆಸಿ, ಬೇಯಿಸಿದ ಕಿಡ್ನಿಬೀನ್ಸ್, ಕೊತ್ತೊಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಎರಡು ಹಸಿಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಇವನ್ನೆಲ್ಲ ಮಿಕ್ಸ್ ಮಾಡಿ. ಇದಕ್ಕೆ ಟೊರ್‌ಟಿಲ್ಲಾಸ್ ಸೇರಿಸಿ. ಕೊನೆಗೆ ಎರಡು ಸ್ಪೂನ್ ಸಾಸ್ ಕೂಡ ಮಿಕ್ಸ್ ಮಾಡಿ. ಇದನ್ನು ಚೀಸ್‌ನೊಂದಿಗೆ ಸವಿಯಿರಿ.

ಮಕ್ಕಳು ಹೆಚ್ಚು ಫೋನ್ ಬಳಕೆ ಮಾಡಿದ್ದಲ್ಲಿ ಈ ಅಪಾಯಕಾರಿ ಸಮಸ್ಯೆ ತಪ್ಪಿದ್ದಲ್ಲ..

ಗರ್ಭಿಣಿಯರು ಜೀರಿಗೆ ನೀರು ಕುಡಿಯುವುದರಿಂದ ಎಷ್ಟೆಲ್ಲ ಉತ್ತಮ ಪ್ರಯೋಜನವಿದೆ ಗೊತ್ತಾ..?

ದೇಹದಲ್ಲಿ ಬರುವ ಬೆವರಿನ ವಾಸನೆ ತಡೆಯಲು ಈ ಕ್ರಮ ಅನುಸರಿಸಿ..

- Advertisement -

Latest Posts

Don't Miss