Wednesday, January 22, 2025

Latest Posts

Moodalapalya : ಸಿಲಿಂಡರ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಕಾರಣ ಇಬ್ಬರಿಗೆ ಗಾಯ..!

- Advertisement -

ಬೆಂಗಳೂರು : ಸಿಲಿಂಡರ್ ರೀ ಫಿಲಿಂಗ್(Cylinder Re Filling) ಮಾಡುವಾಗ ಗ್ಯಾಸ್ ಲೀಕ್(Gas leak) ಆಗಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಮೂಡಲಪಾಳ್ಯ ದಲ್ಲಿ ನಡೆದಿದೆ. ಬೆಂಗಳೂರಿನ ಮೂಡಲಪಾಳ್ಯ ಸರ್ಕಲ್(Moodalapalya Circle)ನಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಹೊತ್ತಿಕೊಂಡ ಕಾರಣ ಇಬ್ಬರಿಗೆ ಗಾಯಗಳಾಗಿವೆ. ಭಾರತ್ ಭವಾನಿ ಗ್ಯಾಸ್ ಏಜೆನ್ಸಿ(Bharat Bhawani Gas Agency)ಯಲ್ಲಿ ಅಕ್ರಮವಾಗಿ ಸಿಲಿಂಡರ್ ರೀ ಫೀಲಿಂಗ್ ಮಾಡುವಾಗ ಘಟನೆ ಸಂಭವಿಸಿದ್ದು, ಪಕ್ಕದಲ್ಲಿ ಹತ್ತಾರು ಸಿಲಿಂಡರ್ ಗ್ಯಾಸ್ ಗಳು ಇದ್ದವು, ಕೂದಲೆಳೆಯ ಅಂತರದಲ್ಲಿ ಬಾರಿ ಅವಾಂತರ ತಪ್ಪಿದ್ದು, ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ(The firefighters) ದೌಡಾಯಿಸಿದ್ದಾರೆ. ಏಕಾಏಕಿ ಸಿಲಿಂಡರ್ ಲೀಕ್ ಆದಕಾರಣ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

- Advertisement -

Latest Posts

Don't Miss