National News: ಹೆಣ್ಣು ಮಕ್ಕಳಿಗೆ ಆಭರಣಗಳನ್ನು ಧರಿಸುವುದು ಇಷ್ಟ ಅಂತಾ ಎಲ್ಲರಿಗೂ ಗೊತ್ತು. ಸರ, ಬಳೆ, ಗೆಜ್ಜೆ, ಬಿಂದಿ, ಕಿವಿಯೋಲೆ, ಮೂಗುತಿ, ಡಾಬು, ಹೀಗೆ ಹಲವು ಆಭರಣಗಳನ್ನು ಹೆಣ್ಣು ಧರಿಸುತ್ತಾಳೆ. ಆದರೆ ಮುಗೂತಿ ಧರಿಸುವಾಗ ಆ ಮುಗೂತಿ ಆಕೆಯ ಮೂಗಲ್ಲಿ ಹೋಗಿಬಿಟ್ಟರೆ ಏನು ಗತಿ..? ಇಂಥದ್ದೇ ಒಂದು ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಮುಗೂತಿ ಧರಿಸಿದವರು, ಆಗಾಗ ಅದರ ಬಟನ್ ಗಟ್ಟಿ ಮಾಡಿಕೊಳ್ಳುತ್ತಿರುತ್ತಾರೆ. ಏಕೆಂದರೆ, ಬಟನ್ ಮುಗಿನೊಳಗೆ ಹೋದರೆ, ಪ್ರಾಣಕ್ಕೆ ಕುತ್ತು ತರಬಹುದು ಅಂತಾ ಎಲ್ಲ ಹೆಣ್ಣು ಮಕ್ಕಳಿಗೂ ಗೊತ್ತಿರುತ್ತದೆ. ಹಾಗಾಗಿ ಪದೇ ಪದೇ ಮುಗೂತಿ ಬಟನ್ ಗಟ್ಟಿ ಮಾಡಿಕೊಳ್ಳುವ ಅಭ್ಯಾಸವಿರುತ್ತದೆ. ಆದರೂ ಕೆಲವೊಮ್ಮೆ ಎಡವಟ್ಟಾಗಿಬಿಡುತ್ತದೆ.
ಕೊಲ್ಕತ್ತಾ ನಿವಾಸಿ 35 ವರ್ಷದ ವರ್ಷಾ ಸಾಹು ಎಂಬಾಕೆ ಹೀಗೆ ನಿರ್ಲಕ್ಷ್ಯ ವಹಿಸಿದ್ದ ಕಾರಣಕ್ಕೆ, ಅವರ ಮುಗೂತಿಯ ಒಳಗಿನ ತಿರಗಣೆ ಮೂಗಲ್ಲಿ ಹೋಗಿ, ಶ್ವಾಸಕೋಷ ತಲುಪಿತ್ತು. ಈಕೆ ತನ್ನ ಸ್ನೇಹಿತೆಯರೊಂದಿಗೆ ಮಾತನಾಡುವಾಗ, ತಿರಗಣೆ ಲೂಸ್ ಆಗಿದೆ ಎಂದು ಅರಿಯದೇ, ಜೋರಾಗಿ ಉಸಿರನ್ನು ಒಳತೆಗೆದುಕೊಂಡಿದ್ದಾರೆ. ಈ ವೇಳೆ ಮೂಗಿನೊಳಗೆ ಹೋಗಿರುವ ಮುಗೂತಿ, ಶ್ವಾಸಕೋಶಕ್ಕೆ ಹೋಗಿದೆ.
ಆದರೆ ಈ ಬಗ್ಗೆ ವರ್ಷಾಗೆ ಅರಿವೇ ಇರಲಿಲ್ಲ. ಆಕೆ ಮುಗೂತಿ ಹೊಟ್ಟೆಯೊಳಗೆ ಹೋಗಿದೆ. ಹೊಟ್ಟೆ ಕ್ಲಿನ್ ಆದಾಗ ಹೊರಬರುತ್ತದೆ ಅಂತಾ ತಿಳಿದುಕೊಂಡಿದ್ದಾರೆ. ಆದರೆ ಸ್ವಲ್ಪ ಸಮಯದ ಬಳಿಕ ವರ್ಷಾಗೆ ಉಸಿರಾಡಲು ಕಷ್ಟವಾಯಿತು. ಆಗ ಮುಗೂತಿ ಶ್ವಾಸಕೋಶದೊಳಗೆ ಹೋಗಿದೆ ಅಂತಾ ಗೊತ್ತಾಗಿದೆ. ಬಳಿಕ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು, ಆಪರೇಷನ್ ಮೂಲಕ ಮೂಗುತಿ ಹೊರಗೆ ತೆಗೆಯಲಾಗಿದೆ.