Thursday, February 13, 2025

Latest Posts

ಡಿವೋರ್ಸ್ ಮತ್ತು ಹೊಸ ಲವ್ ಬಗ್ಗೆ ನಟ ನಾಗಚೈತನ್ಯ ಹೇಳಿದ್ದೇನು..?

- Advertisement -

ಕೆಲ ತಿಂಗಳ ಹಿಂದಷ್ಟೇ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಡಿವೋರ್ಸ್ ಪಡೆದು ದೂರವಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಸಮಂತಾ ಒಬ್ಬರೇ, ಈ ಬಗ್ಗೆ ಹೇಳಿಕೆ ಕೊಟ್ಟಿದ್ದರು. ನಾಗ ಚೈತನ್ಯ ಇಲ್ಲಿವರೆಗೆ ಈ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದ್ರೆ ಸಿನಿಮಾ ಪ್ರಮೋಷನ್‌ ವೇಳೆ ನಡೆದ ಸಂದರ್ಶನವೊಂದರಲ್ಲಿ, ಈ ಬಗ್ಗೆ ಕೇಳಿದಾಗ, ಚೈತನ್ಯ ರಿಪ್ಲೈ ಕೊಟ್ಟಿದ್ದಾರೆ.

ಬಾಲಿವುಡ್‌ನಲ್ಲಿ ತಮ್ಮ ಚೊಚ್ಚಲ ಚಿತ್ರವಾದ ಲಾಲ್‌ ಸಿಂಗ್ ಚಡ್ಡಾ ಸಿನಿಮಾ ಪ್ರಮೋಷನ್‌ಗೋಸ್ಕರ ಚೈ ಮುಂಬೈ ರೌಂಡ್ ಹೊಡೆಯುತ್ತಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ನಾಗ್ ಮತ್ತು ಸ್ಯಾಮ್‌ ಡಿವೋರ್ಸ್ ಬಗ್ಗೆ ಮತ್ತು ನಾಗ್ ಹೊಸ ಲವ್ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇತ್ತಿಚಿಗಷ್ಟೇ ನಾಗ್ ನಟಿ ಶೋಭಿತಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು. ಇದರ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಈ ಬಗ್ಗೆಯೂ ನಾಗ್ ಇಂಡೈರೆಕ್ಟ್ ಹೇಳಿಕೆ ನೀಡಿದ್ದಾರೆ.

ನೀವು ಶೋಭಿತಾರನ್ನು ಲವ್ ಮಾಡ್ತಿರೋದು ನಿಜಾನಾ ಎಂದು ಕೇಳಿದ್ದಕ್ಕೆ, ಮುಗುಳ್ನಗೆ ನಕ್ಕ ಚೈ, ಮನುಷ್ಯ ಪ್ರೀತಿ ಮಾಡಬೇಕು. ಅದರಿಂದ ನಾವು ಆರೋಗ್ಯವಾಗಿರುತ್ತೇವೆ. ಒಬ್ಬರ ಪ್ರೀತಿ ನಮ್ಮನ್ನು ಜೀವನದಲ್ಲಿ ಮುಂದೆ ಹೋಗುವಂತೆ ಮಾಡುತ್ತದೆ. ಒಂದು ಪಾಸಿಟಿವ್ ಎನರ್ಜಿ ಕೊಡುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಚೈ- ಶೋಭಿತಾ ಜೊತೆ ಲವ್‌ನಲ್ಲಿ ಬಿದ್ದಿರಬಹುದು ಅಂತಾ ಅವರ ಫ್ಯಾನ್ಸ್ ಅಂದಾಜು ಮಾಡಿದ್ದಾರೆ.

ಇನ್ನು ಸಮಂತಾ ಬಗ್ಗೆ ಮಾತನಾಡಿದ ಚೈ, ನಮ್ಮ ಡಿವೋರ್ಸ್ ಆಗಿರಬಹುದು. ಆದ್ರೆ ನಾನು ಅವರನ್ನು ಗೌರವಿಸುತ್ತೇನೆ. ನನ್ನ ಮತ್ತು ಅವರ ಬಗ್ಗೆ ಹರಡುತ್ತಿರುವ ಗಾಸಿಪ್ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಬಂದಿದ್ದ ಸಮಂತಾಗೆ, ಕರಣ್ ಕೆಲವು ಪರ್ಸನಲ್ ಪ್ರಶ್ನೆಗಳನ್ನ ಕೇಳಿದ್ದರು. ಅದರಲ್ಲಿ ನಿಮ್ಮನ್ನು ಮತ್ತು ಚೈನನ್ನು ಈಗ ಒಂದೇ ಕೋಣೆಯಲ್ಲಿಟ್ಟರೆ ಏನು ಮಾಡುತ್ತೀರಿ ಎಂದು ಕರಣ್ ಕೇಳಿದ್ದರು. ಆಗ ಸಮಂತಾ, ಆ ಕೋಣೆಯಲ್ಲಿ ಯಾವುದೇ ಚೂಪಾದ ವಸ್ತು ಇರದಂತೆ ನೋಡಿಕೊಳ್ಳಿ ಎಂದು ಹೇಳಿದ್ದರು. ಇದಕ್ಕೆ ಸುಮಾರು ನೆಟ್ಟಿಗರು ಮತ್ತು ಅಕ್ಕಿನೇನಿ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದರು.

- Advertisement -

Latest Posts

Don't Miss