Saturday, June 21, 2025

Latest Posts

ಹೆಸರು ಬೇಳೆಯಿಂದ ಆರೋಗ್ಯಕರ ದೋಸೆ ಮಾಡೋದು ಹೇಗೆ..?

- Advertisement -

Recipe: ಹೆಸರು ಬೇಳೆ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ನಾನ್‌ವೆಜ್ ತಿನ್ನದವರಿಗೆ ಹೆಸರು ಬೇಳೆ ತುಂಬಾ ಉತ್ತಮ. ಹಾಗಾಗಿ ನಾವಿಂದು ಹೆಸರು ಬೇಳೆಯ ಆರೋಗ್ಯಕರ ದೋಸೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: 1 ಕಪ್ ತೊಳೆದು ನೆನೆಸಿದ ಹೆಸರು ಬೇಳೆ, ಕೊಂಚ ಶುಂಠಿ, 2 ಹಸಿಮೆಣಸು, ಅರ್ಧ ಕಪ್ ಕೊತ್ತೊಂಬರಿ ಸೊಪ್ಪು, 1 ಕಪ್ ಪಾಲಕ್ ಸೊಪ್ಪು, 1 ಸ್ಪೂನ್ ಚಾಟ್ ಮಸಾಲೆ, ಜೀರಿಗೆ ಪುಡಿ, ತುಪ್ಪ, ಉಪ್ಪು.

ಹೆಸರು ಬೇಳೆಯನ್ನು ತೊಳೆದು, 1 ಗಂಟೆ ನೆನೆಸಿಟ್ಟುಕೊಳ್ಳಬೇಕು. ಬಳಿಕ ಮಿಕ್ಸಿ ಜಾರ್‌ಗೆ, ಹೆಸರು ಬೇಳೆ, ಶುಂಠಿ, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಪಾಲಕ್ ಸೊಪ್ಪು, ಇವಿಷ್ಟನ್ನು ಹಾಕಿ, ಗ್ರೈಂಡ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ಉಪ್ಪು, ಚಾಟ್ ಮಸಾಲೆ, ಜೀರಿಗೆ ಪುಡಿ, ನೀರು ಹಾಕಿ ಮಿಕ್ಸ್ ಮಾಡಿದ್ರೆ, ದೋಸೆ ಹಿಟ್ಟು ರೆಡಿ. ನೀವು ಇದಕ್ಕೆ ಬೇಕಾದರೆ, ಈರುಳ್ಳಿ, ಕ್ಯಾರೇಟ್‌ನಂಥ ತರಕಾರಿ ಬಳಸಬಹುದು. ಈಗ ತುಪ್ಪ ಬಳಸಿ, ದೋಸೆ ಮಾಡಿದರೆ, ಆರೋಗ್ಯಕರ ಹೆಸರುಬೇಳೆಯ ದೋಸೆ ರೆಡಿ.

ಪ್ರೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆ..?

ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು..?

ಗ್ರೀನ್ ಟೀ, ಲೆಮನ್ ಟೀ ಸೇವನೆ ಆರೋಗ್ಯಕ್ಕೆ ಕೆಟ್ಟದ್ದೋ, ಒಳ್ಳೆಯದೋ..?

- Advertisement -

Latest Posts

Don't Miss