ನಾಚಿಕೆ ಮತ್ತು ಅಹಂಕಾರ, ಇವೆರಡು ಅಗತ್ಯಕ್ಕಿಂತ ಹೆಚ್ಚಿರಬಾರದು ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ಅಹಂಕಾರ ಹೆಚ್ಚಾದ್ರೂ ನಾವು ಕೆಲವು ಉತ್ತಮ ಅವಕಾಶಗಳನ್ನ ಕಳೆದುಕೊಳ್ಳುತ್ತೇವೆ. ಅದೇ ರೀತಿ ನಾಚಿಕೆ ಹೆಚ್ಚಾದ್ರೂ, ಹಲವು ಅವಕಾಶ ನಮ್ಮ ಕೈ ತಪ್ಪಿ ಹೋಗತ್ತೆ. ಹಾಗಾಗಿ ನಾವಿಂದು ಯಾವ 4 ವಿಷಯಗಳ ಬಗ್ಗೆ ನಾವೆಂದೂ ನಾಚಿಕೆ ಪಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ (OIL PULLING) ಏನು ಲಾಭ..?
ಮೊದಲನೇಯ ವಿಷಯ, ಹಳೆಯ ಬಟ್ಟೆಗಳನ್ನು ಧರಿಸಲು ಎಂದಿಗೂ ನಾಚಿಕೊಳ್ಳಬೇಡಿ. ಆ ಬಟ್ಟೆ ನಿಮ್ಮ ಮೈ ಮುಚ್ಚುವಂತಿದ್ದರೆ ಸಾಕು. ಆದ್ರೆ ಅದು ಹಳೆಯ ಬಟ್ಟೆ ಎಂದು ಅದರ ಬಗ್ಗೆ ನಾಚಿಕೆ ಪಡಬೇಡಿ. ಹೇಳುವವರು, ಅವರು ನೋಡು ಹಳೆ ಬಟ್ಟೆ ಹಾಕಿದ್ದಾರೆ. ಹಾಕಿರುವ ಬಟ್ಟೆಯೇ ಹಾಕಿದ್ದಾರೆ ಎಂದು ಹೇಳಬಹುದು. ಆದ್ರೆ ಅಂಥವರ ಮಾತಿನ ಬಗ್ಗೆ ನೀವೆಂದೂ ಗಮನ ಹರಿಸಬೇಡಿ. ಯಾಕಂದ್ರೆ ಹಳೆಯ ಬಟ್ಟೆ ನಿಮ್ಮ ಗುಣದ ಬಗ್ಗೆ, ಟ್ಯಾಲೆಂಟ್ ಬಗ್ಗೆ ವಿವರಿಸಲ್ಲ. ಹಳೆಯ ಬಟ್ಟೆ ಅಥವಾ, ಚೀಪ್ ಕ್ವಾಲಿಟಿ ಬಟ್ಟೆ ಅಥವಾ ಬ್ರ್ಯಾಂಡೆಡ್ ಅಲ್ಲದ ಬಟ್ಟೆ ಧರಿಸುವುದರಿಂದ ನೀವು ಬಡವರಾಗುವುದಿಲ್ಲ. ನಿಮ್ಮ ಗುಣ ಉತ್ತಮವಾಗಿರಬೇಕಷ್ಟೇ.
ಎರಡನೇಯ ವಿಷಯ, ಬಡ ಸ್ನೇಹಿತರಿದ್ದಾರೆಂದು, ನಾಚಿಕೆ ಪಡಬೇಡಿ. ಎಷ್ಟೋ ಜನ ತನಗೆ ಬಡ ಸ್ನೇಹಿತನಿದ್ದಾನೆ. ಅವನನ್ನು ಇವರಿಗೆ ತೋರಿಸಿದರೆ, ಇವರು ನನ್ನನ್ನು ದೂರ ಮಾಡುತ್ತಾರೆ ಎಂದು, ಬಡ ಸ್ನೇಹಿತರಿಗೆ ಮರ್ಯಾದೆ ನೀಡುವುದಿಲ್ಲ. ಅವರನ್ನ ದೂರ ಮಾಡುತ್ತಾರೆ. ಆದ್ರೆ ಆ ಸ್ನೇಹಿತನ ಗುಣ ಉತ್ತಮವಾಗಿದ್ರೆ, ಅವನಿಗೆ ಸಹಾಯ ಮಾಡುವ, ಕಾಳಜಿ ಮಾಡುವ ಗುಣವಿದ್ರೆ, ಅದುವೇ ಅವನ ಶ್ರೀಮಂತಿಕೆ. ಅವನ ಬಡತನ ಅವನಿಂದ ಆ ಗುಣಗಳನ್ನು ಕದಿಯಲು ಆಗುವುದಿಲ್ಲ. ಹಾಗಾಗಿ ಬಡವನಾದರೂ ಉತ್ತಮ ಗೆಳೆಯನನ್ನು ಕಳೆದುಕೊಳ್ಳಬೇಡಿ.
ಪುರಿ ಜಗನ್ನಾಥದಲ್ಲಿ ದೇವರ ಮೂರ್ತಿಗೇಕೆ ಕೈ ಇಲ್ಲ..?
ಮೂರನೇಯ ವಿಷಯ, ವಯಸ್ಸಾದ ತಂದೆ ತಾಯಿಯನ್ನ ಇತರರಿಗೆ ಪರಿಚಯಿಸಲು ಎಂದಿಗೂ ಹಿಂಜರಿಯಬೇಡಿ. ಎಷ್ಟೋ ಜನ ವಿದ್ಯೆ ಕಲಿತು ಬೇರೆ ಊರಿಗೆ ಕೆಲಸಕ್ಕೆ ಹೋದಾಗ, ಅಥವಾ ವಿದೇಶಕ್ಕೆ ಹೋದಾಗ, ಅಲ್ಲಿಗೆ ತಮ್ಮ ಅಪ್ಪ ಅಮ್ಮನನ್ನು ಕರೆಸಲು ಬಯಸೋದಿಲ್ಲ. ಯಾಕಂದ್ರೆ ಅವರ ತಂದೆ ತಾಯಿಗೆ ವಯಸ್ಸಾಗಿರತ್ತೆ. ನಮ್ಮ ಹಾಗೆ ನಮ್ಮ ಅಪ್ಪ ಅಮ್ಮ ಪಾಶ್ ಆಗಿ ಇರೋದಿಲ್ಲ. ಅವರು ಇಲ್ಲಿ ಬಂದರೆ ನಮಗೆ ಅವಮಾನವಾಗುತ್ತದೆ ಎಂದು ಮಕ್ಕಳು ಭಾವಿಸುತ್ತಾರೆ. ಆದರೆ ನೀವು ಇಂದು ಉತ್ತಮ ಸ್ಥಾನದಲ್ಲಿರಲು ಕಾರಣ, ನಿಮ್ಮ ಪೋಷಕರು. ಹಾಗಾಗಿ ಅವರನ್ನು ಎಂದಿಗೂ ದೂರವಿಡಬೇಡಿ. ಗೌರವಿಸಿ.
ನಾಲ್ಕನೇಯ ವಿಷಯ, ಸಾಮಾನ್ಯ ಜೀವನ ನಡೆಸಲು ನಾಚಿಕೆ ಪಡಬೇಡಿ. ನೀವು ಕಷ್ಟಪಟ್ಟು, ಇಷ್ಟಪಟ್ಟು ಕೆಲಸ ಮಾಡಿದರೆ, ಚೆನ್ನಾಗಿ ಹಣ ಸಂಪಾದನೆ ಮಾಡಬಹುದು. ಹಾಗೆ ಹಣ ಸಂಪಾದಿಸಿ, ಸೆಟಲ್ ಆದ ಮೇಲೆ, ಆರಾಮವಾಗಿ ಜೀವನ ಸಾಗಿಸಬಹುದು. ಅಲ್ಲಿಯವರೆಗೆ ಸಾಮಾನ್ಯ ಜೀವನ ನಡೆಸಲು ಯಾವುದೇ ಮುಜುಗರ ಪಡಬೇಡಿ.
ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಬೇಕು ಅಂದ್ರೆ ಈರುಳ್ಳಿಯನ್ನ ಹೀಗೆ ಬಳಸಿ..