ಈ 8 ಸಮಯದಲ್ಲಿ ಎಂದಿಗೂ ಮೌನವಾಗಿರಬೇಡಿ..- ಭಾಗ 1

ಅಗತ್ಯಕ್ಕಿಂತ ಹೆಚ್ಚು ಮಾತನಾಡದೇ, ಮೌನವಾಗಿರುವುದು ಉತ್ತಮ ಗುಣ. ಹಾಗಂತ ಎಲ್ಲ ಸಮಯದಲ್ಲೂ ನೀವು ಸುಮ್ಮನಿದ್ದರೆ, ನಿಮಗೆ ಯಾರೂ ಬೆಲೆ ಕೊಡುವುದಿಲ್ಲ. ಹಾಗಾಗಿ ಎಲ್ಲಿ ಮಾತನಾಡಬೇಕೋ, ಅಲ್ಲಿ ಸರಿಯಾಗಿ ಮಾತನಾಡಿ. ಇಂದು ನಾವು ಯಾವ 8 ಸಮಯದಲ್ಲಿ ಮೌನವಾಗಿರಬಾರದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯದ್ದು, ಎಲ್ಲಿ ಅನ್ಯಾಯ ನಡೆಯುತ್ತದೆಯೋ ಅಲ್ಲಿ ಮೌನವಹಿಸಬೇಡಿ. ಅನ್ಯಾಯದ ವಿರುದ್ಧ ದನಿ ಎತ್ತಿ. ದ್ರೌಪದಿಯ ವಸ್ತ್ರಾಪಹರಣ ನಡೆಯುವಾಗ, ದ್ರೋಣಾಚಾರ್ಯರು, ಭೀಷ್ಮ ಪಿತಾಮಹ ಸೇರಿ, ಹಿರಿಯರೆಲ್ಲ ಅಲ್ಲೇ ಇದ್ದರೂ ಕೂಡ, ಅವರು ಅದು ತಪ್ಪೆಂದು, ಅನ್ಯಾಯದ ವಿರುದ್ಧ ದನಿ ಎತತ್ತಿರಲಿಲ್ಲ. ಇದೇ ಕಾರಣಕ್ಕೆ ಮಹಾಭಾರತ ಯುದ್ಧ ನಡೆಯಿತು.

ನಮಗೆ ಪೂರ್ವ ಜನ್ಮದ ನೆನಪು ಯಾಕೆ ಇರೋದಿಲ್ಲಾ ಅಂತಾ ಗೊತ್ತಾ..?

ಎರಡನೇಯದಾಗಿ ನಿಮ್ಮ ಪ್ರತಿಷ್ಠೆಯ ಮಾತಾಗಿದ್ದಲ್ಲಿ, ನೀವು ನಿಮಗಾಗುವ ಅವಮಾನವನ್ನು ಸಹಿಸಬಾರದು. ಆ ವೇಳೆೇ ಮೌನ ಮುರಿಯಬೇಕು. ಯಾಕಂದ್ರೆ ನಿಮಗಾಗುವ ಅವಮಾನವನ್ನು ನೀವು ಸಹಿಸುತ್ತ ಹೋದಲ್ಲಿ, ನಿಮ್ಮ ಮಾತಿಗೆ ಎಲ್ಲೂ ಬೆಲೆ ಸಿಗುವುದಿಲ್ಲ. ಅಲ್ಲದೇ, ನಿಮ್ಮ ಬಗ್ಗೆ ಎಲ್ಲರೂ ತಮಾಷೆ ಮಾಡುತ್ತಾರೆ. ಹಾಗಾಗಿ ನಿಮಗೆ ಅವಮಾನವಾದಲ್ಲಿ, ಅಲ್ಲೇ ಅವಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸಿ.

ಈ 5 ಕೆಲಸಗಳನ್ನು ಮಾಡುವುದರಿಂದ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ..

ಮೂರನೇಯದಾಗಿ ಯಾರದ್ದಾದರೂ ರಕ್ಷಣೆ ಮಾಡಬೇಕೆಂದಲ್ಲಿ, ನೀವು ದನಿ ಎತ್ತಲೇಬೇಕು. ನಿಮ್ಮ ಎದುರಿಗೆ ಒಂದು ಮಗುವನ್ನು ಹಿಗ್ಗಾಮುಗ್ಗಾ ಥಳಿಸಲಾಗುತ್ತಿದೆ ಎಂದಿಟ್ಟುಕೊಳ್ಳಿ. ಆಗ ನೀವು ಆ ಮಗುವಿನ ರಕ್ಷಣೆಗಾಗಿ ಮದನಿ ಎತ್ತಬೇಕು. ಆ ಮಗು ತಪ್ಪು ಮಾಡಿದ್ದರೆ, ಅದಕ್ಕೆ ಬೈದು ಬುದ್ಧಿ ಹೇಳಬಹುದು. ಬಡಿದೇ ಬುದ್ಧಿ ಹೇಳುವ ಅವಶ್ಯಕತೆ ಇಲ್ಲವಲ್ಲ.

ನಾಲ್ಕನೇಯದಾಗಿ ಅಧಿಕಾರದ ಅವಧಿ ಬಂದಾಗ, ನೀವು ದನಿ ಎತ್ತಬೇಕು. ನಿಮಗೆ ಸಿಗುವ ಅಧಿಕಾರ, ಅಥವಾ ನಿಮಗೆ ಸಿಗಬೇಕಾದ ಹಕ್ಕು ಬೇರೆಯವರಿಗೆ ಸಿಗುವಾಗ, ನೀವು ಮೌನ ವಹಿಸಿದರೆ, ನಿಮ್ಮ ಚಾನ್ಸ್ ಕೈತಪ್ಪಿ ಹೋಗುತ್ತದೆ. ಹಾಗಾಗಿ ನಿಮಗೆ ಸಿಕ್ಕ ಉತ್ತಮ ಅವಕಾಶವನ್ನು ಬಳಸಿಕೊಳ್ಳುವ ಬುದ್ಧಿವಂತಿಕೆ ನಿಮ್ಮಲ್ಲಿರಬೇಕು.

ಇನ್ನುಳಿದ ವಿಷಯಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

About The Author