Saturday, September 21, 2024

Latest Posts

ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 1

- Advertisement -

ಪ್ರೀತಿ ಪಾತ್ರರಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಹೀಗೆ ಹಲವರಿಗೆ ಕೆಲವರು ಊಟಕ್ಕೆ ಕರೆದಿರುತ್ತಾರೆ. ಪ್ರೀತಿಯಿಂದ ಕರೆದಿದ್ದಾರೆಂದು ಅವರೂ ಊಟಕ್ಕೆ ಬರುತ್ತಾರೆ. ಆದ್ರೆ ಆಮೇಲೆ ಅವರಿಗೆ ಯಾಕಾದ್ರೂ ನಾವು ಅವರ ಮನೆಗೆ ಊಟಕ್ಕೆ ಹೋದ್ನೋ ಅಂತಾ ಅನ್ನಿಸಿರುತ್ತದೆ. ಹಾಗಾಗಿ ನಿಮಗೆ ಹೀಗನ್ನಿಸಬಾರದು ಅಂತಾದ್ರೆ ನೀವು 6 ರೀತಿಯ ಜನರ ಮನೆಗೆ ಎಂದಿಗೂ ಊಟಕ್ಕೆ ಹೋಗಬಾರದು. ಯಾರು ಆ 6 ರೀತಿಯ ಜನ ಅಂತಾ ತಿಳಿಯೋಣ ಬನ್ನಿ..

ಮೊದಲನೇಯವರು ಕೊಲೆಗಡುಕರು. ಯಾರಾದರೂ ಕೊಲೆ ಮಾಡಿದ್ದಾರೆಂಬ ನಿಮಗೆ ಗೊತ್ತಿದ್ದೂ ನೀವು ಅವರ ಮನೆಗೆ ಊಟಕ್ಕೆ ಹೋದರೆ, ಅವರ ಪಾಪದಲ್ಲಿ ನಿಮಗೂ ಪಾಲಾಗುತ್ತದೆ. ನೀವು ಡರೆಕ್ಟ್ ಆಗಿ ಕೊಲೆ ಮಾಡದಿದ್ದರೂ, ಕೊಲೆಯ ಪಾಪ ನಿಮಗೆ ಸುತ್ತಿಕೊಳ್ಳುತ್ತದೆ.

ಯಾರಿಗೆ ಈ ಗುಣಗಳಿರುತ್ತದೆಯೋ, ಅಂಥವರು ನಾಯಕರಾಗುತ್ತಾರೆ..

ಎರಡನೇಯವರು ವೇಶ್ಯೆ. ನಿಮಗೆ ಮನೆಗೆ ಊಟಕ್ಕೆ ಕರೆದ ಮಹಿಳೆ ವೇಶ್ಯೆ ಎಂದು ಗೊತ್ತಿದ್ದರೂ, ನೀವು ಆಕೆಯ ಮನೆಗೆ ಊಟಕ್ಕೆ ಹೋದ್ರೆ, ಆಕೆ ಮಾಡಿದ ಪಾಪದಲ್ಲಿ ನಿಮಗೂ ಪಾಲಿರುತ್ತದೆ. ಎಷ್ಟೋ ಜನ ತಮ್ಮ ಪತ್ನಿಯರಿಗೆ ಮೋಸ ಮಾಡಿ, ವೇಶ್ಯೆಯ ಬಳಿ ಬಂದಿರುತ್ತಾರೆ. ಅವರಿಗೆ ಸಹಾಯ ಮಾಡುವ ವೇಶ್ಯೆ, ಅವರ ಪಾಪದಲ್ಲಿ ಭಾಗಿಯಾಗುತ್ತಾಳೆ. ಆ ರೀತಿ ಪಾಪದ ಹಣ ಸಂಪಾದಿಸಿ, ಮಾಡಿದ ಅಡುಗೆಯನ್ನ ನೀವು ತಿಂದರೆ, ಆ ಪಾಪದಲ್ಲಿ ನೀವೂ ಭಾಗಿಯಾದಂತೆ.

ಕಾಫಿ ಕುಡಿಯೋಕ್ಕೂ ಮುನ್ನ ಈ ವಿಷಯವನ್ನ ಗಮನದಲ್ಲಿಡಿ..

ಮೂರನೇಯವರು ಒತ್ತಡದಲ್ಲಿರುವವರು. ಎಷ್ಟೇ ಶ್ರೀಮಂತರಿದ್ದರೂ, ಟೆನ್ಶನ್ ಅನ್ನೋದು ಯಾರಿಗೂ ಬಿಡದ ಭೂತ. ಹಾಗಾಗಿ ನೀವು ಯಾರ ಮನೆಗೆ ಊಟಕ್ಕೆ ಹೋಗುತ್ತೀರೋ, ಅವರಿಗೆ ಟೆನ್ಶನ್ ಇದ್ದಲ್ಲಿ, ಅವರು ಆ ಟೆನ್ಶನ್ನನ್ನು ಎಲ್ಲರೆದುರು ತೋರಿಸಿಕೊಳ್ಳುತ್ತಿದ್ದಲ್ಲಿ. ಅಂಥವರ ಮನೆಗೆ ಹೋಗುವುದನ್ನು ತಪ್ಪಿಸಿ. ಯಾಕಂದ್ರೆ ಅಂಥ ಮನೆಯಲ್ಲಿ ಊಟ ಮಾಡಿದರೂ ಮಾಡಿದ ಹಾಗೆ ಆಗೋದಿಲ್ಲಾ.  ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss