Thursday, December 12, 2024

Latest Posts

ಊಟವಾದ ಬಳಿಕ ಈ ತಪ್ಪು ಎಂದಿಗೂ ಮಾಡಬೇಡಿ..

- Advertisement -

ನಾವೆಲ್ಲ ಆರೋಗ್ಯವಾಗಿರಬೇಕು ಅಂತಾನೇ, ಆರೋಗ್ಯಕರ ಊಟವನ್ನ ಮಾಡುತ್ತೇವೆ. ಆದರೆ ನೀವು ಒಳ್ಳೆ ಊಟ ತಿಂದು, ಬಳಿಕ ಕೆಲ ತಪ್ಪುಗಳನ್ನ ಮಾಡಿದ್ರೆ, ನಿಮ್ಮ ಆರೋಗ್ಯ ಸರಿಯಾಗಿ ಇರಲು ಸಾಧ್ಯವಿಲ್ಲ. ಮತ್ತು ನೀವು ಆರೋಗ್ಯಕರ ಊಟ ಮಾಡಿಯೂ ಪ್ರಯೋಜನವಿಲ್ಲ. ಹಾಗಾಗಿ ನಾವಿಂದು ಊಟವಾದ ಬಳಿಕ ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ತಪ್ಪು, ಊಟವಾದ ತಕ್ಷಣ ಹಣ್ಣು ತಿನ್ನೋದು. ಹಣ್ಣು ನಮ್ಮ ಆರೋಗ್ಯಕ್ಕೆ ಅತ್ಯುತ್ತಮ ಅಂತಾ ಎಲ್ಲರಿಗೂ ಗೊತ್ತು. ಆದ್ರೂ ಕೂಡ ನೀವು ಊಟವಾದ ತಕ್ಷಣ, ಹಣ್ಣಿನ ಸೇವನೆ ಮಾಡಬಾರದು. ಯಾಕಂದ್‌ರೆ ಹೀಗೆ ಊಟವಾದ ತಕ್ಷಣ ಹಣ್ಣುಗಳನ್ನ ತಿಂದ್ರೆ, ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಿ, ಗ್ಯಾಸ್ ಪ್ರಾಬ್ಲಮ್ ಆಗುತ್ತದೆ. ಹಾಗಾಗಿ ನೀವು ಹಣ್ಣು ತಿನ್ನಬೇಕಂದ್ರೆ, ಬೆಳಿಗ್ಗೆ ತಿಂಡಿಯಾದ ಮೇಲೆ ಮತ್ತು ಮಧ್ಯಾಹ್ನ ಊಟಕ್ಕೂ ಒಂದು ಗಂಟೆ ಮುನ್ನ ತಿನ್ನಿ..

ಎರಡನೇಯ ತಪ್ಪು ಟೀ ಕುಡಿಯುವುದು. ಭಾರತದಲ್ಲಿ ತುಂಬಾ ಜನರಿಗೆ ಊಟವಾದ ತಕ್ಷಣ, ಬಿಸಿ ಬಿಸಿ ಚಾ ಕುಡಿಯುವ ಅಭ್ಯಾಸವಿದೆ. ಕೆಲವರಂತೂ ಊಟದ ಜೊತೆಗೇ ಟೀ ಕುಡಿಯುತ್ತಾರೆ. ಇದೊಂದು ರೀತಿಯ ಚಟವಿದ್ದ ಹಾಗೆ. ಯಾಕಂದ್ರೆ ಹೀಗೆ ಊಟವಾದ ತಕ್ಷಣವೇ ಟೀ ಕುಡಿದರೆ, ಜೀರ್ಣಕ್ರಿಯೆ ಸಮಸ್ಯೆ ಬರತ್ತೆ. ನೀವು ಎಷ್ಟೇ ಆರೋಗ್ಯಕರ ಊಟ ಮಾಡಿದ್ರೂ , ಚಹಾದಲ್ಲಿರುವ ಆ್ಯಸಿಡ್ ಆ ಆಹಾರವನ್ನ ಜೀರ್ಣವಾಗಲು ಬಿಡುವುದಿಲ್ಲ.

ಮೂರನೇಯ ತಪ್ಪು ಊಟವಾದ ತಕ್ಷಣ ನೀರು ಕುಡಿಯುವುದು. ಇದು ನಿಮಗೆ ವಿಚಿತ್ರವೆನ್ನಿಸಬಹುದು. ಇದೇನಪ್ಪಾ ಊಟವಾದ ಬಳಿಕ ನಾವು ನೀರೂ ಕುಡಿಯಬಾರದಾ ಅಂತಾ. ಆದ್ರೆ ಇದು ನಿಜ. ನಿಮ್ಮ ಜೀರ್ಣಕ್ರಿಯೆ ಸರಿಯಾಗಿ ಇರಬೇಕು. ನೀವು ಆರೋಗ್ಯವಾಗಿರಬೇಕು ಅಂದ್ರೆ, ಊಟವಾದ ತಕ್ಷಣ ನೀರು ಕುಡಿಯಬಾರದು. ಬದಲಾಗಿ ಊಟವಾದ 1 ಗಂಟೆ ಬಳಿಕ ನೀರು ಕುಡಿಯಬೇಕು.

ನಾಲ್ಕನೇಯ ತಪ್ಪು ಊಟವಾದ ತಕ್ಷಣ ಸ್ನಾನ ಮಾಡುವುದು ಅಥವಾ ನಿದ್ರೆ ಮಾಡುವುದು. ಊಟವಾದ ತಕ್ಷಣ ನಿದ್ದೆ ಮಾಡಿದರೆ, ನೀವು ಊಟ ಮಾಡಿದ್ದು ಸರಿಯಾಗಿ ಜೀರ್ಣವಾಗುವುದಿಲ್ಲ. ಅಲ್ಲದೇ ದೆೇಹದ ಬೊಜ್ಜು ಕೂಡ ಹೆಚ್ಚಾಗುತ್ತದೆ. ಇನ್ನು ಊಟವಾದ ತಕ್ಷಣ ಸ್ನಾನ ಮಾಡಿದರೆ, ಬಾಡಿ ಟೆಂಪ್ರೆಚರ್ ನಿಧಾನ ಮಾಡತ್‌ತೆ. ಇದರಿಂದ ಜೀರ್ಣಕ್ರಿಯೆ ಕೂಡ ನಿಧಾನವಾಗತ್ತೆ. ಹೀಗಾದಾಗವಲೇ ನಮ್ಮ ಆರೋಗ್ಯ ಹಾಳಾಗತ್ತೆ.

ಬ್ರೇನ್ ಶಾರ್ಪ್ ಮಾಡಲು ಮತ್ತು ಚುರುಕಾಗಲು ಈ 10 ಟಿಪ್ಸ್ ನೆನಪಿಡಿ.. ಭಾಗ 2

ಈ 6 ಹಸಿರು ತರಕಾರಿ ಸೇವನೆಯಿಂದ ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ..

ಬ್ರೇನ್ ಶಾರ್ಪ್ ಮಾಡಲು ಮತ್ತು ಚುರುಕಾಗಲು ಈ 10 ಟಿಪ್ಸ್ ನೆನಪಿಡಿ.. ಭಾಗ 1

- Advertisement -

Latest Posts

Don't Miss