Friday, May 9, 2025

Latest Posts

ಇಂಥ ಊಟವನ್ನು ಎಂದಿಗೂ ತಿನ್ನಬೇಡಿ: ಇದು ನಿಮ್ಮ ಅದೃಷ್ಟವನ್ನು ಕಸಿಯುತ್ತದೆ..

- Advertisement -

Spiritual: ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಬೆಳಿಗ್ಗೆ ಏಳುವ ರೀತಿಯಿಂದ ಹಿಡಿದು, ಊಟ, ತಿಂಡಿ, ಸ್ನಾನಾದಿಗಳನ್ನು ಮುಗಿಸಿ, ರಾತ್ರಿ ಮಲಗುವವರೆಗೂ, ಹೆಜ್ಜೆ ಹೆಜ್ಜೆಗೂ ತನ್ನದೇ ಆದ ಪದ್ಧತಿಗಳಿದೆ. ಅದೇ ರೀತಿ ನಾವು ಆಹಾರ ಸೇವಿಸುವಾಗ ಕೆಲ ಪದ್ಧತಿಗಳನ್ನು, ನಿಯಮಗಳನ್ನು ಆಚರಿಸಲೇಬೇಕು. ಇಲ್ಲವಾದಲ್ಲಿ, ನಾವೆಂದೂ ಉದ್ಧಾರವಾಗಲು ಸಾಧ್ಯವಾಗೋದಿಲ್ಲ. ಹಾಗಾದ್ರ ನಾವು ಎಂಥ ಆಹಾರಗಳನ್ನು ಸೇವಿಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕೈ ಕಾಲು ತೊಳೆಯದೇ ಊಟ ಮಾಡುವುದು. ಗಲೀಜು, ಧೂಳು ತಗುಲಿದ ಕೈ, ಕಾಲನ್ನು ಚೆನ್ನಾಗಿ ತೊಳೆಯದೇ, ಊಟ ಮಾಡುವುದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಆರೋಗ್ಯ ಹಾಳಾಗುವುದು ಎಂದರೆ, ಎಲ್ಲವೂ ಕಳೆದುಕೊಂಡಂತೆ, ಅದೃಷ್ಟವೇ ಹೋದಂತೆ. ಏಕೆಂದರೆ, ಆರೋಗ್ಯ ಕೈ ಕೊಟ್ಟರೆ, ನಿಮಗೆ ಇನ್ಯಾವ ಕೆಲಸವೂ ಮಾಡಲಾಗುವುದಿಲ್ಲ. ಹಾಗಾಗಿ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಕೈ ಕಾಲು ಸ್ವಚ್ಛವಾಗಿ ತೊಳೆದು, ಊಟ ಮಾಡಬೇಕು.

ಇನ್ನು ಟಿವಿ, ಮೊಬೈಲ್ ನೋಡಿಕೊಂಡು ಊಟ ಮಾಡುವುದು. ಅಂದರೆ ಒಂಟಿಯಾಗಿ ಕುಳಿತು ಊಟ ಮಾಡಿದಂತೆ. ಇತ್ತೀಚಿನ ದಿನಗಳಲ್ಲಿ ಹಲವರ ಮನೆಯಲ್ಲಿ ಈ ದೃಷ್ಯ ನಾವು ಕಾಣಬಹುದು. ತಟ್ಟೆಯಲ್ಲಿ ಊಟ, ಒಂದು ಕೈಯಲ್ಲಿ ಮೊಬೈಲ್, ಇನ್ನೊಂದು ಕೈ ತಟ್ಟೆಯಲ್ಲಿ, ಕಣ್ಣು ಟಿವಿಯ ಮೇಲೆ. ಹೀಗೆ ಮಾಡಿದಾಗ, ತಿಂದ ಆಹಾರ, ಸರಿಯಾಗಿ ದೇಹಕ್ಕೆ ತಾಕುವುದಿಲ್ಲ. ಆಗಲೇ ಆರೋಗ್ಯ ಸಮಸ್ಯೆ ಬರುತ್ತದೆ. ಇದೇ ಅದೃಷ್ಟ ಕಸಿದ ಹಾಗೆ.

ಮೂರನೇಯದಾಗಿ ಊಟ ಮಾಡುವಾಗ, ಮಧ್ಯದಲ್ಲಿ ಎದ್ದು ಹೋಗಿ, ಮತ್ತೆ ಬಂದು ಕುಳಿತು ಊಟ ಮಾಡಬಾರದು. ಹೀಗೆ ಮಾಡುವುದು ಅನ್ನಪೂರ್ಣೇಶ್ವರಿಗೆ ಅವಮಾನ ಮಾಡಿದಂತೆ. ಅಲ್ಲದೇ, ಇಂಥ ಊಟದಲ್ಲಿ, ಹುಳು ಹುಪ್ಪಟೆ ಬಂದು ಕೂರುತ್ತದೆ. ಅಂಥ ಆಹಾರ ತಿನ್ನುವುದರಿಂದ, ನಕಾರಾತ್ಮಕ ಶಕ್ತಿ ನಮ್ಮ ಮೈ ಸೇರುತ್ತದೆ.

ನಾಲ್ಕನೇಯದಾಗಿ, ಊಟ ಬಡಿಸಿ, ಸುಮಾರು ಹೊತ್ತಾದ ಮೇಲೆ ಬಂದು ಕುಳಿತು ಊಟ ಮಾಡುವುದು ಕೂಡ ತಪ್ಪು. ಇದು ಕೂಡ ದೇವರಿಗೆ ಅವಮಾನ ಮಾಡಿದಂತೆ. ಅಲ್ಲದೇ, ಇದರಲ್ಲೂ ಕೀಟಾಣುಗಳು ಬಂದು ಕೂರುತ್ತದೆ. ಇಂಥ ಆಹಾರ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ.

ಇಂಥ ಗುಣವಿದ್ದರೆ ಮಾತ್ರ ನೀವು ಶ್ರೀಮಂತರಾಗಲು ಸಾಧ್ಯ ಅಂತಾರೆ ಚಾಣಕ್ಯರು

ಶ್ರೀಕೃಷ್ಣ ಹೇಳಿದ 5 ಜೀವನ ಪಾಠಗಳನ್ನು ನೀವೂ ಕಲಿಯಿರಿ..

ಇಂಥ ವಿಷಯಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ ಎನ್ನುತ್ತಾರೆ ಚಾಣಕ್ಯರು..

- Advertisement -

Latest Posts

Don't Miss