Health Tips: ಹಲವರು ಯಾವಾಗ ಬೇಸಿಗೆ ಬರತ್ತೋ..? ಅದ್ಯಾವಾಗ ಮಾವಿನ ಹಣ್ಣನ್ನು ತಿನ್ನುತ್ತೇವೋ ಅಂತಾ ಕಾಯುತ್ತಿರುತ್ತಾರೆ. ಇದರೊಂದಿಗೆ ಮಾವಿನ ಹಣ್ಣಿನ ತರಹೇವಾರಿ ರೆಸಿಪಿ ಕೂಡಾ ಮಾಡುತ್ತಾರೆ. ಆದರೆ ಮಾವಿನ ಹಣ್ಣಿನೊಂದಿಗೆ ಕೆಲ ಪದಾರ್ಥಗಳನ್ನು ಸೇರಿಸಿ ತಿನ್ನುವಂತಿಲ್ಲ. ಅದ್ಯಾವ ಪದಾರ್ಥಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಆಯುರ್ವೇದದ ನಿಯಮದ ಪ್ರಕಾರ, ಫ್ರೂಟ್ ಸಲಾಡ್ ಮಾಡಿ ತಿನ್ನುವುದು ನಿಷಿದ್ಧವಿದೆ. ಅಂದರೆ, ಎರಡು ಮೂರು ಹಣ್ಣುಗಳನ್ನು ಸೇರಿಸಿ ತಿನ್ನಬಾರದು. ಹಾಗೆ ತಿಂದರೆ, ಅದು ಆರೋಗ್ಯಕ್ಕೆ ಉತ್ತಮವಲ್ಲ. ಹಾಗಾಗಿ ಒಂದು ಬಾರಿ ಒಂದೇ ಹಣ್ಣನ್ನು ಸೇವಿಸಬೇಕು. ಅದೇ ರೀತಿ ಮಾವಿನಹಣ್ಣಿನೊಂದಿಗೆ ಯಾವುದೇ ಹಣ್ಣು ಸೇರಿಸಿ ತಿನ್ನಬಾರದು. ಮಾವಿನ ಹಣ್ಣನ್ನಷ್ಟೇ ತಿನ್ನಬೇಕು. ಮಾವಿನ ಹಣ್ಣಿನ ಜೊತೆ ನೀವು ಬೇರೆ ಹಣ್ಣನ್ನು ಸೇರಿಸಿ ತಿಂದ್ರೆ, ಅಜೀರ್ಣ ಸಮಸ್ಯೆ, ವಾಯು ಉತ್ಪತ್ತಿ ಸೇರಿ ಹಲವು ಹೊಟ್ಟೆ ಸಮಸ್ಯೆ ಉದ್ಭವಿಸುತ್ತದೆ.
ಮ್ಯಾಂಗೋ ಮಿಲ್ಕ್‌ಶೇಕ್ ಅಂದ್ರೆ ಹಲವರಿಗೆ ಇಷ್ಟವಾಗತ್ತೆ. ಆದರೆ ಮಾವಿನ ಹಣ್ಣಿನೊಂದಿಗೆ ಹಾಲನ್ನು ಬೆರೆಸಿ ಸೇವಿಸಬಾರದು. ಇದರಿಂದ ನಿಮ್ಮ ನಾಲಿಗೆಗೆ ರುಚಿ ಸಿಗಬಹುದು. ಆದರೆ ನಿಮ್ಮ ದೇಹದ ಆರೋಗ್ಯಕ್ಕೆ ಇದು ಉತ್ತಮವಲ್ಲ. ಹೀಗೆ ಮಾವಿನ ಜೊತೆ ಹಾಲು ಅಥವಾ ಹಾಲಿನ ಪ್ರಾಡಕ್ಟ್ ಸೇರಿಸಿ ತಿಂದರೆ, ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಏರುಪೇರಾಗುತ್ತದೆ.
ಖಾರಾ, ಮಸಾಲೆಯುಕ್ತ ಪದಾರ್ಥದೊಂದಿಗೆ ಮಾವಿನ ಹಣ್ಣಿನ ಸೇವನೆ ಮಾಡುವಂತಿಲ್ಲ. ನಾವು ಮಾವಿನ ಹಣ್ಣನ್ನು ಮಸಾಲೆ ಪದಾರ್ಥಕ್ಕೆ ಸೇರಿಸುವುದಿಲ್ಲ. ಆದರೆ ಮಸಾಲೆಪದಾರ್ಥಗಳ ಸೇವನೆ ಮಾಡಿದ ಬಳಿಕ, ಮಾವಿನ ಹಣ್ಣಿನ ಸೇವನೆ ಖಂಡಿತ ಮಾಡುತ್ತೇವೆ. ಆಯುರ್ವೇದದಲ್ಲಿ ಇದನ್ನು ತಪ್ಪು ಆಹಾರ ಸೇವನೆ ಎನ್ನಲಾಗಿದೆ. ಏಕೆಂದರೆ ಹೀಗೆ ಮಾಡುವುದರಿಂದ, ದೇಹದಲ್ಲಿ ಪಿತ್ತದೋಷ ಉಂಟಾಗುತ್ತದೆ.
ಇಂಥ ಪದಾರ್ಥದೊಂದಿಗೆ ಅಥವಾ ಮಾವಿನ ಹೆಣ್ಣಿನ ಸೇವನೆಯ ಬಳಿಕ ಇಂಥ ಪದಾರ್ಥಗಳನ್ನು ಸೇವಿಸಿದರೆ, ನಿಮ್ಮ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಅಲ್ಲದೇ, ಮಾವಿನಹಣ್ಣಿನಲ್ಲಿ ಇರುವ ಆರೋಗ್ಯಕರ ಗುಣಗಳು ಕೂಡ ಹೊರಟು ಹೋಗುತ್ತದೆ. ಹಾಗಾಗಿ ಮಾವಿನ ಹಣ್ಣಿನೊಂದಿಗೆ ಇಂಥ ಪದಾರ್ಥಗಳ ಸೇವನೆ ಮಾಡಬೇಡಿ.
ಚೈಲ್ಡ್ ಹುಡ್ ಅಸ್ತಮಾ ಬಗ್ಗೆ ಗಾಬರಿ ಇದೆಯಾ..? ಈ ಬಗ್ಗೆ ವೈದ್ಯರೇ ಸಲಹೆ ಕೊಟ್ಟಿದ್ದಾರೆ ನೋಡಿ..
ಲಂಗ್ ಟ್ರಾನ್ಸಪ್ಲಾಂಟ್ ಅಂದ್ರೇನು..? ಈ ಆಪರೇಷನ್ ಆದವರು ಎಷ್ಟು ವರ್ಷ ಬದುಕುತ್ತಾರೆ..?