Spiritual News: ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಕೆಲವರು ಕೆಲವು ಪದ್ಧತಿಗಳನ್ನು ಅನುಸರಿಸುತ್ತಾರೆ. ಆ ಪದ್ಧತಿಗಳಿಗೆ ಅದರದ್ದೇ ಆದ ಮಹತ್ವವಿದೆ. ಅದರಲ್ಲಿ ದೇವರ ಕೋಣೆಯಲ್ಲಿ ಕೆಲವೇ ಕೆಲವು ದೇವರ ವಿಗ್ರಹ ಮತ್ತು ಫೋಟೋ ಇಡುವುದು ಕೂಡಾ ಒಂದು. ಹಾಗಾಗಿ ಇಂದು ನಾವು ದೇವರಕೋಣೆಯಲ್ಲಿ ಯಾವ ಮೂರ್ತಿಯನ್ನಿರಿಸಬಾರದು..? ಯಾಕೆ ಇರಿಸಬಾರದು ಅಂತಾ ತಿಳಿಯೋಣ ಬನ್ನಿ..
ಕಾಳಿ ವಿಗ್ರಹ: ಕಾಳಿ ದೇವಿ ದುರ್ಗೆಯ ಪ್ರತಿರೂಪವಾಗಿದ್ದಾರೆ. ಆದರೆ ಆಕೆ ಭಯಂಕರವಾಗಿ ಕಾಣುತ್ತಾಳೆ. ಹಾಗಾಗಿ ನೀವು ಕಾಳಿ ಮೂರ್ತಿ ಅಥವಾ ಕಾಳಿ ಫೋಟೋವನ್ನ ಮನೆಯಲ್ಲಿರಿಸಿದರೆ, ಅದಕ್ಕೆ ಪದ್ಧತಿ ಪ್ರಕಾರ ಪೂಜೆ, ನೈವೇದ್ಯವೆಲ್ಲ ಆಗಬೇಕು. ಇಲ್ಲವಾದಲ್ಲಿ ನಿಮಗೆ ತೊಂದರೆಯಾಗುತ್ತದೆ. ಮನೆಯಲ್ಲಿ ನೆಮ್‌ಮದಿ ಹಾಳಾಗುತ್ತದೆ. ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ. ಹಾಗಾಗಿ ಮಹಾಕಾಳಿ ಫೋಟೋ ಅಥವಾ ಮೂರ್ತಿಯನ್ನು ಮನೆಯಲ್ಲಿರಿಸಬೇಡಿ.
ಶನಿ ವಿಗ್ರಹ: ಶನಿದೇವನನ್ನು ಭಕ್ತಿಯಿಂದ ಪೂಜಿಸಿದರೆ, ಪ್ರಾರ್ಥಿಸಿದರೆ, ಅವನು ನಮ್ಮನ್ನು ಕಷ್ಟದಿಂದ ಪಾರು ಮಾಡುತ್ತಾನೆಂಬ ನಂಬಿಕೆ ಇದೆ. ಆದರೆ ಶನಿದೇವರ ಫೋಟೋ ಅಥವಾ ಮೂರ್ತಿಯನ್ನು ಮನೆಯಲ್ಲಿರಿಸುವುದು ಅಷ್ಟು ಉತ್ತಮವಲ್ಲ. ಅದಕ್ಕೆ ಸ್ವಲ್ಪ ಲೋಪವಾದರೂ ಕೂಡ, ಅದರಿಂದ ಮನೆಯ ಪರಿಸ್ಥಿತಿ ಹಾಳಾಗುತ್ತದೆ. ಮನೆ ಒಡೆಯನ ನೆಮ್ಮದಿ ಹಾಳಾಗುತ್ತದೆ. ಆರೋಗ್ಯಬಾಧೆ ಬರುವ ಸಾಧ್ಯತೆ ಇದೆ. ಹಾಗಾಗಿ ನಿಮಗೆ ಶನಿಯ ಮೇಲೆ ಭಕ್ತಿ ಇದ್ದರೆ, ಪ್ರತಿದಿನ ಶನಿಸ್ತೋತ್ರ, ಹನುಮಾನ್ ಚಾಲೀಸಾವನ್ನ ಭಕ್ತಿಯಿಂದ ಹೇಳಿದರೆ ಸಾಕು. ನಿಮ್ಮೆಲ್ಲ ಕಷ್ಟಗಳು ಪರಿಹಾರವಾಗುತ್ತದೆ.
ಕಾಲ ಭೈರವನ ವಿಗ್ರಹ: ಶಿವನ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜಿಸಬಹುದು. ಆದರೆ ಅವನದ್ದೇ ಅಂಶವಾದ ಭೈರವನಾಥ, ಅಥವಾ ಕಾಲ ಭೈರವನ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜಿಸುವುದು ಉತ್ತಮವಲ್ಲ. ಹಾಗಾಗಿ ನಿಮ್ಮ ಬಳಿ ಈ ದೇವರ ಮೂರ್ತಿ ಇದ್‌ದರೂ, ಅದನ್ನು ನದಿಗೆ ಬಿಡಿ. ಅಥವಾ ದೇವಸ್ಥಾನಕ್ಕೆ ಕೊಟ್ಟುಬಿಡಿ.
2028ಕ್ಕೆ ಮತ್ತೆ Congress ಸರ್ಕಾರ ಬರುತ್ತಾ.? Siddaramaiah ಸರ್ಕಾರ 5 ವರ್ಷ ಇರಲ್ವಾ.?
2024ಕ್ಕೆ Narendra Modi ಪ್ರಧಾನಿ ಆಗ್ತಾರಾ.? ಆಗಲ್ವಾ.? ನಮೋಗೆ ಸ್ತ್ರೀ ಕಂಟಕ ಇದೆಯಾ.?