Spiritual: ದಾನ ಎಂದರೆ ಮಹತ್ವವಾದ ಕಾರ್ಯ. ದಾನವೆಂದರೆ, ಒಬ್ಬರ ಕಷ್ಟಕ್ಕೆ ಸ್ಪಂದಿಸುವುದು. ಹಾಗಾಗಿ ದಾನ ಮಾಡುವಾಗ, ಶುದ್ಧ ಮನಸ್ಸಿನಿಂದ, ನಿಯತ್ತಾಗಿ ದುಡಿದ ಹಣದಲ್ಲಿ ದಾನ ಮಾಡಬೇಕು ಅಂತಾ ಹೇಳುತ್ತಾರೆ. ಪರಿಶ್ರಮದಿಂದ ದುಡಿದ ಹಣದಲ್ಲಿ ಕೊಂಚ ದಾನ ಮಾಡಿದರೂ, ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಆದರೆ ದಾನ ಮಾಡುವಾಗ ನಾವು ಕೆಲ ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ಯಾವುದು ಆ ತಪ್ಪುಗಳು ಅಂತಾ ತಿಳಿಯೋಣ ಬನ್ನಿ..
ದಾನ ಮಾಡುವಾಗ ಉತ್ತಮವಾದ ವಸ್ತುವನ್ನೇ ನೀವು ದಾನ ಮಾಡಬೇಕು. ಹಳೆಯ ಬಟ್ಟೆ, ಹಳಸಿದ ಆಹಾರ, ಎಂಜಿಲು ಮಾಡಿದ ಆಹಾರ, ಮುರಿದ ವಸ್ತುಗಳು ಇವನ್ನೆಲ್ಲ ದಾನ ಮಾಡಿದರೆ, ಯಾವ ಉಪಯೋಗವೂ ಇಲ್ಲ. ಹಾಗಾಗಿ ಉತ್ತಮ ಆಹಾರ, ಉತ್ತಮ ವಸ್ತುಗಳು, ಧರಿಸಬಹುದಾದ ಬಟ್ಟೆಗಳನ್ನೇ ದಾನ ಮಾಡಬೇಕು ಎಂದು ಗರುಡ ಪುರಾಣ ಹೇಳುತ್ತದೆ.
ಇನ್ನು ಹಣವಿದ್ದವರು, ಬಡವರಿಗೆ ದಾನ ಮಾಡಬೇಕು. ಅದನ್ನು ಬಿಟ್ಟು ಶ್ರೀಮಂತರು, ಉಳ್ಳವರಿಗೇ ದಾನ ಮಾಡಿದರೆ, ಅದರಿಂದೇನೂ ಪ್ರಯೋಜನವಾಗುವುದಿಲ್ಲ. ಬಡವರು ದಾನಮ ಮಾಡುವ ಮುನ್ನ ಯೋಚಿಸಬೇಕು. ದಾನ ಮಾಡಿ ತನಗೆ ಉಳಿಯುವಂತಿದ್ದರೆ ಮಾತ್ರ ದಾನ ಮಾಡಬೇಕು. ಏಕೆಂದರೆ, ದಾನ ಮಾಡಿ ದರಿದ್ರನಾಗಬೇಡ ಎಂದು ಹಿರಿಯರು ಹೇಳಿದ್ದಾರೆ.
ಇನ್ನು ದಾನ ಮಾಡುವ ಯೋಗ್ಯತೆ ಇದ್ದವರು ಎಂದಿಗೂ ಕಂಜೂಸುತನ ತೋರಿಸಬಾರದು. ತನ್ನಲ್ಲಿರುವ ಹಣದಲ್ಲಿ ಕೊಂಚವಾದರೂ ಪೂರ್ತಿ ಮನಸ್ಸಿನಿಂದ ದಾನ ಮಾಡಬೇಕು. ದಾನ ಮಾಡಿ, ನಾನು ದಾನ ಮಾಡಿದೆ ಎಂದು ಅಹಂ ತೋರಿಸಿದರೆ, ಅಥವಾ ಡಂಗುರ ಸಾರಿದರೆ, ಅದರಿಂದ ಯಾವುದೇ ಪುಣ್ಯ ಲಭಿಸುವುದಿಲ್ಲ.