Saturday, May 17, 2025

Latest Posts

ಮನೆಯಲ್ಲಿ ಈ ಗಿಡಗಳನ್ನು ಎಂದಿಗೂ ನೆಡಬೇಡಿ..

- Advertisement -

Spiritual :ನಮ್ಮ ಮನೆಯ ಅಂದ ಹೆಚ್ಚಿಸಲು ನಾವು ಅನೇಕ ಗಿಡಗಳನ್ನು ಬೆಳೆಸುತ್ತೇವೆ. ಕೆಲವು ಹೂವು, ಹಣ್ಣಿನ ಗಿಡ, ಇನ್ನು ಕೆಲವು ತರಕಾರಿ ಗಿಡ. ಹಲವು ಗಿಡ ಮರಗಳನ್ನು ನಾವು ಬೆಳೆಸುತ್ತೇವೆ. ಆದರೆ ಕೆಲವು ತರಕಾರಿ, ಹಣ್ಣುಗಳ ಗಿಡವೇ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಅಂಥ ಗಿಡ ಮರಗಳನ್ನು ನಾವು ನೆಡಬಾರದು. ಹಾಗಾದ್ರೆ ಯಾವ ಗಿಡಗಳನ್ನು ನೆಡಬಾರದು ಅಂತಾ ತಿಳಿಯೋಣ ಬನ್ನಿ..

ಬೋರೆಹಣ್ಣಿನ ಗಿಡ. ಬೋರೆಹಣ್ಣಿನ ಗಿಡ ಮನೆಯಂಗಳದಲ್ಲಿ ನೆಟ್ಟರೆ, ಅದರಿಂದ ನಿಮ್ಮ ಆರ್ಥಿಕ ಸ್ಥಿತಿ ಹಾಳಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ನೆಮ್ಮದಿ, ಆರೋಗ್ಯ ಹಾಳಾಗಲು ಈ ಗಿಡ ನೆಡುವುದೇ ಕಾರಣವಾಗಿದೆ.

ಎಕ್ಕೆ ಗಿಡ. ಎಕ್ಕೆ ಗಿಡದಲ್ಲಿ ನೇರಳೆ ಬಣ್ಣದ ಹೂವಾಗುತ್ತದೆ. ಅಲ್ಲದೇ, ಇದರ ಎಲೆಯಿಂದ ಹಾಲು ಬರುತ್ತದೆ. ಇಂಥ ಗಿಡ ಹೆಚ್ಚಾಗಿ ಗಿಡ ಗಂಟಿಗಳಲ್ಲಿ ಕಂಡುಬರುತ್ತದೆ. ಇವು ಕೆಲವು ಆರೋಗ್ಯ ಸಮಸ್ಯೆಗಳಿಗೆ ಉಪಯೋಗವಾಗುವಂಥದ್ದು. ಹಾಗಾಗಿ ಕೆಲವರು ಈ ಗಿಡವನ್ನು ಮನೆಯಲ್ಲಿ ನೆಡುತ್ತಾರೆ. ಆದರೆ ಇದನ್ನು ಮನೆಯಲ್ಲಿ ನೆಡುವುದರಿಂದ, ಮನೆಗೆ ಒಳ್ಳೆಯದಲ್ಲ.

ಪಾಪಸ್ ಕಳ್ಳಿ. ಪಾಪಸ್ ಕಳ್ಳಿ ಗಿಡ ನಿಮ್ಮ ಮನೆಯ ಬಳಿ ಬೆಳೆದಿದ್ದರೆ, ಅದನ್ನ ಕತ್ತರಿಸಿ ಹಾಕಿ. ಏಕೆಂದರೆ, ಇದರಲ್ಲಿ ಮುಳ್ಳಿದೆ. ಆ ಮುಳ್ಳಿನಿಂದಲೇ, ಅದರ ಸುತ್ತಲೂ ನಕಾರಾತ್ಮಕತೆ ಪಸರಿಸುತ್ತದೆ. ಹಾಗಾಗಿ ಗುಲಾಬಿ ಗಿಡ ಬಿಟ್ಟು, ಮುಳ್ಳಿರುವ ಯಾವುದೇ ಗಿಡಗಳಿದ್ದರೂ, ಅದು ಮನೆಗೆ ಒಳ್ಳೆಯದಲ್ಲ.

- Advertisement -

Latest Posts

Don't Miss