ಮನುಷ್ಯ ಎಂದ ಮೇಲೆ ಕಷ್ಟ ಸುಖಗಳು ಬರೋದು ಕಾಮನ್. ಖುಷಿಯನ್ನ ನಮ್ಮವರೊಂದಿಗೆ ಹಂಚಿಕೊಂಡ್ರೆ ನಮ್ಮ ಖುಷಿ ಹೆಚ್ಚತ್ತೆ. ಹಾಗಂತ, ನಿಮ್ಮ ಖುಷಿ ನೋಡಿ ಎಲ್ಲರೂ ಖುಷಿ ಪಡ್ತಾರೆಂದು ತಿಳಿಯಬೇಡಿ. ಯಾಕಂದ್ರೆ ಒಬ್ಬರ ಖುಷಿ ನೋಡಿ ಇನ್ನೊಬ್ಬರು ಹೊಟ್ಟೆ ಉರಿ ಪಟ್ಟುಕೊಳ್ಳಬಹುದು. ಇನ್ನು ದುಃಖವನ್ನು ಇನ್ನೊಬ್ಬರ ಬಳಿ ಹೇಳಿಕೊಂಡ್ರೆ ನಿಮ್ಮ ಮನಸ್ಸಿಗೆ ಸಮಾಧಾನವಾಗತ್ತೆ ಅನ್ನೋದು ನಿಜ.
ಆದ್ರೆ ನಿಮ್ಮ ದುಃಖ ಕೇಳಿ ಇನ್ನೊಬ್ಬರೂ ಸಂಕಟ ಪಡುತ್ತಾರೆ. ಸಮಾಧಾನ ಮಾಡುತ್ತಾರೆ, ಸ್ಪಂದಿಸುತ್ತಾರೆಂದು ತಿಳಿಯಬೇಡಿ. ಯಾಕಂದ್ರೆ ಇಂದು ನಿಮ್ಮ ದುಃಖ ಕಂಡು ನಿಮ್ಮ ಎದುರಿಗೆ ನಿಮ್ಮನ್ನು ಸಂತೈಸಿದ ಹಾಗೆ ನಟಿಸಿದವರು, ನಾಳೆ ನಿಮ್ಮ ದುಃಖವನ್ನು ಬೇರೆಯವರ ಬಳಿ ಹೇಳಿ, ನಿಮ್ಮ ತಮಾಷೆಯೂ ಮಾಡಬಹುದು. ಹಾಗಾಗಿ ಕೆಲವರ ಬಳಿ, ನಿಮ್ಮ ದುಃಖವನ್ನು ಹೇಳಿಕೊಳ್ಳಬೇಡಿ ಎಂದು ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ದೀಪಾವಳಿಯ ದಿನ ಲಕ್ಷ್ಮೀಯ ಜೊತೆ ವಿಷ್ಣುವಿನ ಪೂಜೆ ಯಾಕೆ ಮಾಡಲಾಗುವುದಿಲ್ಲ..?
ಮೊದಲನೇಯದಾಗಿ, ನಿಮ್ಮನ್ನು ಆಳುವವರ ಬಳಿ ನಿಮ್ಮ ದುಃಖವನ್ನು ಹೇಳಬೇಡಿ ಎಂದಿದ್ದಾರೆ ಚಾಣಕ್ಯರು. ನಿಮ್ಮನ್ನು ಆಳುವವರು ನಿಮ್ಮ ಸುಖ ದುಃಖವನ್ನು ಅರಿಯಬೇಕು. ನಿಮ್ಮ ಕಷ್ಟಗಳನ್ನು ತಿಳಿದು ನಿಮಗೆ ಸ್ಪಂದಿಸಬೇಕು. ಆದ್ರೆ ರಾಜರು, ಪ್ರಜೆಗಳ ದುಃಖ ಕೇಳಲು ಮಂತ್ರಿಯನ್ನು ನೇಮಿಸಿರುತ್ತಾನೆ. ಮಂತ್ರಿಗೆ ಅವಶ್ಯಕತೆ ಇರುವಷ್ಟು ಧನವನ್ನು ನೀಡಿ, ಪ್ರಜೆಗಳ ದುಃಖ ಪರಿಹರಿಸಲು ಹೇಳುತ್ತಾನೆ. ಕುಳಿತಲ್ಲೇ, ಆಡಳಿತ ನಡೆಸುತ್ತಾನೆ. ಅವನಿಗೆ ಪ್ರಜೆಗಳ ಕಷ್ಟದ ಬಗ್ಗೆ ಚಿಂತೆ ಇರುವುದಿಲ್ಲ.
ಎರಡನೇಯದಾಗಿ, ವೇಶ್ಯೆಗೆ ತನ್ನ ಕಷ್ಟವನ್ನು ಹೇಳಬಾರದು. ವೇಶ್ಯೆ ತನ್ನ ದೇಹವನ್ನ ಮಾರಿ ಬದುಕೋದು ದುಡ್ಡಿಗಾಗಿ. ಹಾಗಾಗಿ ಆಕೆಯ ಬಳಿ ಹೋದವರು, ಅವರ ಕಷ್ಟವನ್ನು ಆಕೆಗೆ ಹೇಳಿಕೊಂಡರೆ, ಆಕೆ ನಕ್ಕು ನಿಮ್ಮನ್ನು ದೂರ ತಳ್ಳುತ್ತಾಳೆ ವಿನಃ, ನಿಮ್ಮ ಕಷ್ಟಕ್ಕೆ ಸ್ಪಂದಿಸುವುದಿಲ್ಲ.
ಪತ್ನಿ, ಮಿತ್ರ ಮತ್ತು ಕೆಲಸಗಾರನ ನಿಯತ್ತು ತಿಳಿಯುವುದು ಹೇಗೆ..?
ಮೂರನೇಯದಾಗಿ, ಚಿಕ್ಕ ಮಕ್ಕಳಿಗೆ ನಿಮ್ಮ ಕಷ್ಟವನ್ನು ಹೇಳಬೇಡಿ. ಚಿಕ್ಕ ಮಕ್ಕಳಿಗೆ ದೊಡ್ಡವರ ಕಷ್ಟ ಗೊತ್ತಾದಾಗಲೇ, ಅವರು ಸರಿಯಾಗಿ ಜೀವನಪಾಠ ಕಲಿಯುತ್ತಾರೆಂಬುದು ನಿಜ. ಆದರೆ ಯಾವ ಕಷ್ಟವನ್ನು ಹೇಳಬೇಕೋ ಅದನ್ನಷ್ಟೇ ಹೇಳಿ. ಯಾಕಂದ್ರೆ ಬೇರೆ ಕಷ್ಟಗಳ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಮತ್ತು ಅದನ್ನು ಅವರಿಗೆ ಹೇಳಿ ಅವರ ಮನಸ್ಸನ್ನು ಗೊಂದಲಮಯ ಮಾಡುವುದು ತಪ್ಪು.




