Spiritual: ನಮಗೆಲ್ಲಾ ಕಸ ಗುಡಿಸುವುದು ಎಂದರೆ, ಒಂದು ಸಾಮಾನ್ಯ ಕೆಲಸವೇ ಆಗಿರಬಹುದು. ಆದರೆ ಇದು ಮನೆಯ ನೆಮ್ಮದಿ ಚೆನ್ನಾಗಿರಲು ಮತ್ತು ಹಾಳು ಮಾಡುವುದನ್ನು ನಿರ್ಧರಿಸುವ ಕೆಲಸವಾಗಿದೆ. ಹಾಗಾಗಿ ಕಸ ಗುಡಿಸಲು ಕೂಡ ಕೆಲ ನಿಯಮ, ಸಮಯಗಳಿದೆ. ಹಾಗಾದರೆ ಯಾವ ಸಮಯದಲ್ಲಿ ಕಸ ಗುಡಿಸಬೇಕು, ಮತ್ತು ಯಾವ ಸಮಯದಲ್ಲಿ ಕಸ ಗುಡಿಸಬಾರದು ಅಂತಾ ತಿಳಿಯೋಣ ಬನ್ನಿ..
ರೋಗವನ್ನು ದೂರ ಮಾಡುವ ಶೀತಲಾದೇವಿಯ ಅಸ್ತ್ರವೇ ಪೊರಕೆ. ಈಕೆ ಒಂದು ಕೈಯಲ್ಲಿ ಪೊರಕೆ ಹಿಡಿದಿರುತ್ತಾಳೆ. ಮತ್ತು ಕತ್ತೆಯ ಮೇಲೆ ಕುಳಿತಿರುತ್ತಾಳೆ. ಹಾಗಾಗಿ ಪೊರಕೆ ಎಂದರೇ, ಬರೀ ಒಂದು ವಸ್ತುವಲ್ಲ. ಬದಲಾಗಿ, ಇದು ದೇವರ ಅಸ್ತ್ರಕ್ಕೆ ಸಮ. ಹಾಗಾಗಿ ಪೊರಕೆಯನ್ನು ಕಾಲಿನಿಂದ ತುಳಿಯಬಾರದು.
ಹಾಗಾದ್‌ರೆ ಯಾವ ಸಮಯದಲ್ಲಿ ಕಸ ಗುಡಿಸಬೇಕು ಎಂಬ ಪ್ರಶ್ನೆಗೆ ಉತ್ತರ, ಸೂರ್ಯಾಸ್ತದೊಳಗೆ 4 ಬಾರಿ ಮನೆಯಲ್ಲಿ ಕಸ ಗುಡಿಸಬೇಕು. ಒಂದು ಬೆಳಗ್ಗಿನ ಸಮಯ ಕಸ ಗುಡಿಸಿ, ನೆಲ ಒರೆಸಿ, ಮನೆ ಸ್ವಚ್ಛ ಮಾಡಿ, ದೇವರ ಪೂಜೆ ಮಾಡಬೇಕು. ಬಳಿಕ ಸೂರ್ಯಾಸ್ತವಾಗುವ ಮುನ್ನ, ಅಂದರೆ ಸಂಜೆ 5 ಗಂಟೆಯೊಳಗೆ ಕಸ ಗುಡಿಸಬೇಕು. ಆದರೆ ಸಂಜೆ 5 ಗಂಟೆಯ ಬಳಿಕ, ಕಸ ಗುಡಿಸದಿದ್ದರೆ ಉತ್ತಮ. ಅದರಲ್ಲೂ ಮುಸ್ಸಂಜೆ ಹೊತ್ತು ದೀಪ ಹಚ್ಚುವ ವೇಳೆ ಅಥವಾ ದೀಪ ಹಚ್ಚಿದ ಬಳಿಕ ಕಸ ಗುಡಿಸಲೇಬಾರದು.
ಹೀಗೆ ಮಾಡುವುದರಿಂದ ಮನೆಗೆ ದರಿದ್ರ ಆವರಿಸುತ್ತದೆ. ಮನೆಯ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುತ್ತದೆ. ಮನೆ ಮಂದಿಯ ಆರೋಗ್ಯ ಹಾಳಾಗುತ್ತದೆ. ನೆಮ್ಮದಿ, ಶಾಂತಿ ಹಾಳಾಗುತ್ತದೆ. ನೀವೇನಾದರೂ ಕತ್ತಲಾದ ಬಳಿಕವೂ ನಿಮ್ಮ ಮನೆಯಲ್ಲಿ ಕಸ ಗುಡಿಸಿ, ಸ್ವಚ್ಛ ಮಾಡುತ್ತಿದ್ದರೆ, ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶವಾಗಲು ನೀವು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣದಿಂದ, ಸಂಜೆ 5 ಗಂಟೆಯೊಳಗೆ ಕಸ ಗುಡಿಸಬಹುದು.

