ಬೆಳಗ್ಗಿನ ಉಪಹಾರಕ್ಕೆ ಈ ತಿಂಡಿಯನ್ನೊಮ್ಮೆ ಟ್ರೈ ಮಾಡಿ..

ಪ್ರತಿದಿನ ಬೆಳಿಗ್ಗೆ ಅದೇ ಇಡ್ಲಿ, ದೋಸೆ, ತಿಂದು ತಿಂದು ಬೇಜಾರು ಬಂದಿದ್ರೆ, ಬೆಳಗ್ಗಿನ ತಿಂಡಿಗೆ ನುಚ್ಚಿನುಂಡೆ ಮಾಡಬಹುದು. ಹಾಗಾಗಿ ನಾವಿಂದು ನುಚ್ಚಿನ ಉಂಡೆ ಮಾಡೋದು ಹೇಗೆ..? ಅದಕ್ಕೆ ಏನೇನು ಬೇಕು ಅಂತಾ ಹೇಳಲಿದ್ದೇವೆ..

ಒಂದು ಕಪ್ ತೊಗರಿಬೇಳೆ, ಅರ್ಧ ಕಪ್ ಕಡಲೆ ಬೇಳೆ, ಅರ್ಧ ಕಪ್ ಹೆಸರು ಬೇಳೆ, ಈ ಮೂರನ್ನು ಮೊದಲನೇಯ ದಿನ ರಾತ್ರಿ ನೆನೆಸಿಡಬೇಕು. ಚಿಟಿಕೆ ಅರಿಶಿನ, ಇಂಗು, 1 ಚಮಚ ಜೀರಿಗೆ, 1 ಕಪ್ ತೆಂಗಿನ ತುರಿ, 2ರಿಂದ 3 ಹಸಿಮೆಣಸಿನಕಾಯಿ, ಚಿಕ್ಕ ತುಂಡು ಶುಂಠಿ, ಬೇಕಾದಷ್ಟು ಕೊತ್ತಂಬರಿ ಸೊಪ್ಪು, ಒಂದು ಚಮಚ ತುಪ್ಪ ಅಥವಾ ಎಣ್ಣೆ.

ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಲಾಭ ಕೇಳಿದ್ರೆ ನೀವೂ ಇದನ್ನ ತಿಂತೀರಾ..

ರಾತ್ರಿ ನೆನೆಸಿದ್ದ ಕಾಳುಗಳನ್ನು ಮಿಕ್ಸಿಗೆ ಹಾಕಿ ಕೊಂಚ ಗಟ್ಟಿಯಾಗಿ, ತರಿತರಿಯಾಗಿ ರುಬ್ಬಿಕೊಳ್ಳಬೇಕು. ಇದಾದ ಬಳಿಕ, ಶುಂಠಿ, ಹಸಿಮೆಣಸಿನಕಾಯಿ, ಜೀರಿಗೆ, ಇಂಗು ಇವಿಷ್ಟನ್ನು ರುಬ್ಬಿಕೊಳ್ಳಿ. ಈಗ ಇವೆಲ್ಲದರ ಜೊತೆಗೆ ಉಪ್ಪು, ಕೊತ್ತೊಂಬರಿ ಸೊಪ್ಪು, ಕೊಬ್ಬರಿ ತುರಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇಡ್ಲಿ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ, ಈ ಮಿಶ್ರಣವನ್ನ ಉಂಡೆಯಾಕಾರದಲ್ಲಿ ರೆಡಿ ಮಾಡಿ ಇಟ್ಟು, ಇಡ್ಲಿ ಬೇಯಿಸಿದಷ್ಟೇ ಹೊತ್ತು ಬೇಯಿಸಿ. ನೀವು ಹೆಚ್ಚು ಹೊತ್ತು ಬೇಯಿಸಿದ್ರೆ,  ಅದು ಗಟ್ಟಿಯಾಗಿ, ರುಚಿ ಹಾಳಾಗುತ್ತದೆ.

ಈಗ ನುಚ್ಚಿನುಂಡೆ ರೆಡಿ.. ಕೊಬ್ಬರಿ ಚಟ್ನಿ, ಮಜ್ಜಿಗೆ ಹುಳಿಯೊಂದಿಗೆ  ನೀವು ನುಚ್ಚಿನುಂಡೆಯನ್ನ ಸೇವಿಸಬಹುದು.

About The Author