Monday, October 6, 2025

Latest Posts

ಇಂಥ ವ್ಯಕ್ತಿಗಳು ಎಷ್ಟು ದುಡಿದರೂ ಉದ್ಧಾರವಾಗಲು ಸಾಧ್ಯವಿಲ್ಲ..

- Advertisement -

Spiritual Story: ದುಡಿಮೆ ಅನ್ನುವುದು ಮನುಷ್ಯನಿಗೆ ಬಹುಮುಖ್ಯವಾದುದು. ಪ್ರತೀ ಮನುಷ್ಯ ತಾನು ಬದುಕುವ ಸಲುವಾಗಿ ದುಡಿಯಲೇಬೇಕು. ಆದರೆ ಕೆಲವು ವ್ಯಕ್ತಿಗಳು ಎಷ್ಟೇ ದುಡಿದರೂ ಅವರು ಉದ್ಧಾರವಾಗಲು ಸಾಧ್ಯವೇ ಇಲ್ಲ. ಅವರು ಸೇವಿಂಗ್ಸ್ ಮಾಡಲು ಅಸಾಧ್ಯ. ಹಾಗಾದ್ರೆ ಎಂಥ ವ್ಯಕ್ತಿಗಳಿಗೆ ಲಕ್ಷ್ಮೀ ಒಲಿಯುವುದಿಲ್ಲ ಅಂತಾ ತಿಳಿಯೋಣ ಬನ್ನಿ..

ಸ್ವಚ್ಛವಿಲ್ಲದವರು. ಧರಿಸುವ ಬಟ್ಟೆ, ದೇಹವನ್ನು ಯಾರು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲವೋ, ಅಂಥವರು ಎಷ್ಟು ದುಡಿದರೂ ವೇಸ್ಟ್. ಏಕೆಂದರೆ, ಯಾರು ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲವೋ, ಅವರಿಗೆ ಅನಾರೋಗ್ಯ ಕಾಡುತ್ತದೆ. ಯಾರು ಬಟ್ಟೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲವೋ, ಅಂಥವರಿಗೆ ಸರಿಯಾಗಿ ಕೆಲಸ ಸಿಗುವುದಿಲ್ಲ. ಅಲ್ಲದೇ, ಲಕ್ಷ್ಮೀ ದೇವಿಯ ಕೃಪೆ ಕೂಡ ಅಂಥವರ ಮೇಲಿರುವುದಿಲ್ಲ. ಇನ್ನು ಮನೆ ಸ್ವಚ್ಛವಾಗಿ ಇರದಿದ್ದಲ್ಲಿ, ಆರ್ಥಿಕ ಸಮಸ್ಯೆ ತಾಂಡವವಾಡುತ್ತದೆ.

ಹೆಣ್ಣಿಗೆ ಹಿಂಸಿಸುವವರು. ಹೆಣ್ಣನ್ನು ದೇವಿಯ ರೂಪದಲ್ಲಿ ನೋಡುವ ದೇಶ ನಮ್ಮ ಭಾರತ. ಹೆಣ್ಣು ಲಕ್ಷ್ಮೀ, ದುರ್ಗೆ, ಸರಸ್ವತಿ ಎಂದು ಪೂಜಿಸುತ್ತಾರೆ. ಹಾಗಾಗಿ ಹಿಂದೂ ಧರ್ಮದಲ್ಲಿ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರ ಮನಸ್ಸನ್ನು ನೋಯಿಸಬಾರದು. ಹಿಂಸಿಸಬಾರದು ಅಂತಾ ಹೇಳಲಾಗುತ್ತದೆ. ಹಾಗೇನಾದರೂ ಹೆಣ್ಣನ್ನು ಹಿಂಸಿಸಿದರೆ, ಅಥವಾ ಅವಳ ಮನಸ್ಸಿಗೆ ನೋವಾಗುವಂತೆ ನಡೆದುಕೊಂಡರೆ, ಅಂಥವರ ಆರ್ಥಿಕ ಸ್ಥಿತಿ ಸದಾ ಹೀನಾಯವಾಗಿಯೇ ಇರುತ್ತದೆ.

 ಸೋಮಾರಿಗಳು. ನೀವು ಜೀವನದಲ್ಲಿ ಉದ್ಘಾರವಾಗಬೇಕು ಅಂದ್ರೆ, ಮೊದಲು ತ್ಯಜಿಸಬೇಕಾದ್ದು ಉದಾಸೀನತೆ. ಸೋಮಾರಿಗಳು ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ. ಏಕೆಂದರೆ, ಸೋಮಾರಿಗಳ ಬಳಿ ಲಕ್ಷ್ಮೀ ದೇವಿ ಇರಲು ಇಚ್ಛಿಸುವುದಿಲ್ಲ. ಸೋಮಾರಿಗಳು ಸ್ವಚ್ಛವಾಗಿ ಇರುವುದಿಲ್ಲ, ಅವರು ಇನ್ನೊಬ್ಬರ ಮೇಲೆ ಅವಲಂಬಿತರಾಗಿರುತ್ತಾರೆ. ಹಾಗಾಗಿ, ಸೋಮಾರಿಗಳು ಎಷ್ಟೇ ದುಡಿದರೂ ಅವರ ಬಳಿ ಹಣ ನಿಲ್ಲುವುದಿಲ್ಲ. ಮತ್ತು ಅವರು ಸಾಕಷ್ಟು ದುಡಿಯಲು ಸಾಧ್ಯವಿಲ್ಲ.

ಹಣೆಗೆ ಯಾವ ತಿಲಕವಿಡಬೇಕು..? ಇದರಿಂದ ಏನು ಪ್ರಯೋಜನ..?

ನಿಮ್ಮ ಪರ್ಸ್‌ನಲ್ಲಿ ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಇಟ್ಟುಕೊಳ್ಳಬೇಡಿ

ಚಾಣಕ್ಯರ ಪ್ರಕಾರ ಅಪ್ಪಿತಪ್ಪಿಯೂ ನಾವು ಈ ಕೆಲಸ ಮಾಡಬಾರದಂತೆ..

- Advertisement -

Latest Posts

Don't Miss