ತಾನು ಶ್ರೀಮಂತನಾಗಬೇಕು. ತನ್ನ ಬಳಿಕ ಸಾಕೆನ್ನುವಷ್ಟು ದುಡ್ಡಿರಬೇಕು. ತನಗೆ ಬೇಕಾದ್ದನ್ನ ಚಿಟಿಕೆ ಹೊಡೆಯುವುದರಲ್ಲಿ ಕೊಂಡುಕೊಳ್ಳುವ ಅರ್ಹತೆ ತನಗಿರಬೇಕು ಅನ್ನೋದು ಹಲವರ ಆಸೆ. ಆದ್ರೆ ನಾವು ಮಾಡುವ ಕೆಲ ತಪ್ಪಿನಿಂದಲೇ ಲಕ್ಷ್ಮೀ ನಮ್ಮನ್ನು ಬಿಟ್ಟು ಹೋಗುತ್ತಾಳೆ. ಹಾಗಾಗಿ ನಾವಿಂದು ಯಾವ ತಪ್ಪು ಮಾಡುವುದರಿಂದ ಬಡತನ ಬರುತ್ತದೆಂದು ಚಾಣಕ್ಯರು ಹೇಳಿದ್ದಾರೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ..
ಎಷ್ಟೋ ಕೇಸ್‌ನಲ್ಲಿ ಅಪ್ಪ ಚೆನ್ನಾಗಿ ಮಾಡಿಟ್ಟ ಆಸ್ತಿಯನ್ನು ಮಗ ಖಾಲಿ ಮಾಡಿ ಮುಗಿಸಿದ ಅನ್ನೋ ಮಾತನ್ನ ನಾವು ನೀವು ಕೇಳಿರ್ತೀವಿ. ಅದ್ಯಾಕೆ ಅಂತಾ ಹೇಳಿದ್ರೆ, ಅಪ್ಪನಿಗಿದ್ದ ಶಿಸ್ತು, ಸ್ವಚ್ಛತೆ, ಬುದ್ಧಿವಂತಿಕೆ, ಸಯಮಪಾಲನೆ ಬಗ್ಗೆ ಮಗನಿಗೆ ಅರಿವಿರುವುದಿಲ್ಲ. ಯಾಕಂದ್ರೆ ಅವನಿಗೆ ಕಷ್ಟ ಅಂದ್ರೇನು ಅಂತಾ ಗೊತ್ತೇ ಇರೋದಿಲ್ಲ. ಅಪ್ಪ ಮಾಡಿಟ್ಟಿರುವ ಆಸ್ತಿ ಖರ್ಚು ಮಾಡೋದಷ್ಟೇ ಗೊತ್ತಿರುತ್ತದೆ. ಹಾಗಾಗಿ ಮಕ್ಕಳಿಗೆ ಬಡತನದ ಪಾಠ ಕಲಿಸಬೇಕಾಗುತ್ತದೆ.
ಯಾರಿಗೆ ಈ ಗುಣಗಳಿರುತ್ತದೆಯೋ, ಅಂಥವರು ನಾಯಕರಾಗುತ್ತಾರೆ..
ಮೊದಲನೇಯದಾಗಿ ಸಮಯದ ಬಗ್ಗೆ ಹೇಳಿಕೊಡಿ. ನೀವೆಷ್ಟೇ ಶ್ರೀಮಂತರಾದ್ರೂ, ಮಕ್ಕಳಿಗೆ ಸಮಯದ ಬೆಲೆ ಹೇಳಿಕೊಡಿ. ಇಂದು ಬೇಡ ನಾಳೆ ಕೆಲಸ ಮಾಡೋಣವೆಂದು ಕುಳಿತರೆ, ಆ ಕೆಲಸ ಮಾಡಲು ಅಸಾಧ್ಯವಾಗುತ್ತದೆ. ಹಾಗಾಗಿ ನಾಳೆ ನಾಳೆ ಎಂದು ನಿಮ್ಮ ಮಕ್ಕಳು ಮಾಡುವ ಕೆಲಸವನ್ನು ಮುಂದೂಡಿದರೆ, ಅವರಿಗೆ ಸಮಯದ ಬಗ್ಗೆ ತಿಳಿಸಿ ಹೇಳಿ, ಆಲಸ್ಯ ಬಿಟ್ಟು ಕೆಲಸ ಮಾಡಲು ಹೇಳಿ.
ಎರಡನೇಯದಾಗಿ ಶಿಸ್ತಿನ ಬಗ್ಗೆ ಹೇಳಿಕೊಡಿ. ಸೋಮಾರಿತನ ಬಿಟ್ಟರೆ ಮಾತ್ರ, ನೀವು ಉದ್ಧಾರವಾಗುತ್ತಿಯ. ಇಲ್ಲವಾದಲ್ಲಿ ನಿನಗೆ ಯಶಸ್ಸು ಸಿಗಲು ಸಾಧ್ಯವಿಲ್ಲ. ಮಾಡುವ ಕೆಲಸವನ್ನು ಅದೇ ಸಮಯದಲ್ಲಿ ಮಾಡಿ ಮುಗಿಸು. ಆಲಸ್ಯ ಬಿಟ್ಟು, ನಿದ್ದೆ ಕಡಿಮೆ ಮಾಡು ಎಂದು ಶಿಸ್ತಿನ ಪಾಠ ಮಾಡಿ.
ಕಾಫಿ ಕುಡಿಯೋಕ್ಕೂ ಮುನ್ನ ಈ ವಿಷಯವನ್ನ ಗಮನದಲ್ಲಿಡಿ..
ಮೂರನೇಯದಾಗಿ ಸ್ವಚ್ಛತೆಯ ಪಾಠ ಹೇಳಿ. ಅವರು ಉಪಯೋಗಿಸುವ ಕೋಣೆ, ಧರಿಸುವ ಬಟ್ಟೆ, ದೇಹ ಎಲ್ಲವೂ ಸ್ವಚ್ಛವಿದ್ದಾಗ ಮಾತ್ರ, ನಿನಗೆ ಗೌರವ ಸಿಗುತ್ತದೆ. ಲಕ್ಷ್ಮೀ ಒಲಿಯುತ್ತಾಳೆ. ಸರಸ್ವತಿ ಆಶೀರ್ವದಿಸುತ್ತಾಳೆಂದು ಹೇಳಿಕೊಡಿ. ಸ್ವಚ್ಛತೆ ಇಲ್ಲದಿದ್ದಲ್ಲಿ, ಗೌರವೂ ಸಿಗುವುದಿಲ್ಲ, ಯಶಸ್ಸು ಸಿಗುವುದಿಲ್ಲವೆಂದು ತಿಳಿಸಿ ಹೇಳಿ.
ನಾಲ್ಕನೇಯದಾಗಿ ಬುದ್ಧಿವಂತಿಕೆ ಉಪಯೋಗಿಸಲು ಹೇಳಿ. ಓದುವಾಗ, ಬರೆಯುವಾಗ, ಸುತ್ತಾಡಲು ಹೋಗುವಾಗ, ಹಣ ಖರ್ಚು ಮಾಡುವಾಗ, ನೀವು ಹೇಗೆ ಬುದ್ಧಿವಂತಿಕೆ ಉಪಯೋಗಿಸಿ, ಅವಶ್ಯಕತೆ ಇದ್ದಷ್ಟೇ ಬಳಸುತ್ತೀರಿ ಅನ್ನೋ ಬಗ್ಗೆ ಹೇಳಿಕೊಡಿ. ಹೀಗೆ ಶಿಸ್ತು, ಸಮಯಪಾಲನೆ, ಬುದ್ಧಿವಂತಿಕೆ, ಸ್ವಚ್ಚತೆಯನ್ನ ಯಾರು ಸರಿಯಾಗಿ ಅರಿತುಕೊಳ್ಳುತ್ತಾರೋ, ಅಂಥವರಷ್ಟೇ ಉದ್ಧಾರವಾಗಲು ಸಾಧ್ಯ.