Saturday, July 5, 2025

Latest Posts

ನಿಮ್ಮ ಹಣೆಬರದಲ್ಲಿರುವ ಈ 5 ವಿಚಾರವನ್ನು ಯಾರೂ ಬದಲಾಯಿಸಲಾಗುವುದಿಲ್ಲ..

- Advertisement -

ಸಾವಿನ ಕಾಲವನ್ನ ತಪ್ಪಿಸಬಹುದು. ಆದರೆ ನೋವಿನ ಕಾಲವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹಿರಿಯರು ಹೇಳಿದ್ದನ್ನ ನೀವು ಕೇಳಿರುತ್ತೀರಿ. ಅದೇ ರೀತಿ ನಮ್ಮ ಹಣೆಬರಹದಲ್ಲಿರುವ ಕೆಲ ವಿಷಯಗಳನ್ನು ಯಾರೂ ಬದಲಾಯಿಸಲು ಸಾಧ್ಯವೇ ಇಲ್ಲವಂತೆ. ಈ ಬಗ್ಗೆ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮೊದಲನೇಯ ವಿಷಯ ರೋಗ. ಓರ್ವ ಮನುಷ್ಯನಿಗೆ ಯಾವುದಾದರೂ ರೋಗ ಬರಲೇಬೇಕೆಂದರೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹಾಗಂತ ರೋಗ ಬಂದವರೆಲ್ಲ ಸಾಯುತ್ತಾರೆ ಎಂದಲ್ಲ. ಆ ರೋಗವನ್ನು ಹಲವು ವರ್ಷಗಳವರೆಗೆ ಅನುಭವಿಸಿ, ಅನುಭವಿಸಿ ಸಾಯಬಹುದು. ಯಾಕಂದ್ರೆ ಅವರ ಆಯಸ್ಸು ಹೆಚ್ಚಿರಬಹುದು. ಹಾಗಾಗಿ ಮನುಷ್ಯ ಎಷ್ಟೇ ಉತ್ತಮ ಆಹಾರವನ್ನು ತಿಂದರೂ, ಯೋಗಾದಿಗಳನ್ನು ಮಾಡಿದರೂ, ಅವನಿಗೆ ರೋಗ ಬರಬೇಕೆಂದರೆ, ರೋಗ ಬಂದೇ ಬರುತ್ತದೆ.

ಎರಡನೇಯ ವಿಷಯ ದುಃಖ. ನೀವು ಹುಟ್ಟಾದಿಗಿನಿಂದ, ಸಾಯುವವರೆಗೂ ಇಷ್ಟು ದುಃಖವನ್ನು ಅನುಭವಿಸಲೇಬೇಕು ಎಂದಿದ್ದರೆ, ಅಷ್ಟೇ ದುಃಖವನ್ನು ನೀವು ಅನುಭವಿಸಿಯೇ, ಅನುಭವಿಸುತ್ತೀರಿ. ಜೊತೆಗೆ ಸುಖವನ್ನ ಕೂಡ. ಹಾಗಾಗಿ ನಿಮ್ಮ ಹಣೆಬರಹದಲ್ಲಿರುವ ಸುಖ-ದುಃಖವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ.

ಮೂರನೇಯ ವಿಷಯ ಜ್ಞಾನ. ನಿಮ್ಮ ಬಳಿ ಇರುವ ಜ್ಞಾನವನ್ನು ಯಾರೂ ಕಸಿಯಲು ಸಾಧ್ಯವಿಲ್ಲ. ಆಸ್ತಿಯನ್ನ ಬೇಕಾದರೂ ಕದಿಯಬಹುದು. ಜ್ಞಾನ ಕದಿಯಲು ಸಾಧ್ಯವಿಲ್ಲ. ಹಾಗಾಗಿ ಆಸ್ತಿಯ ಬದಲು ಜ್ಞಾನ ಸಂಪಾದಿಸು ಎಂದು ಹಿರಿಯರು ಹೇಳಿದ್ದನ್ನ ನೀವು ಕೇಳಿರುತ್ತೀರಿ. ಹಾಗಾಗಿ ನಿಮ್ಮ ಹಣೆಬರಹದಲ್ಲಿರುವ ಜ್ಞಾನವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ.

ನಾಲ್ಕನೇಯ ವಿಷಯ ಕರ್ಮ. ನಿಮ್ಮ ಕೈಯಿಂದ ಒಂದು ಉತ್ತಮ ಕರ್ಮವಾಗಲೇಬೇಕು ಎಂದರೆ, ಅದು ಯಾರು ಅಡ್ಡಿ ಬಂದರೂ ಪೂರ್ಣಗೊಳ್ಳುತ್ತದೆ. ಅದೇ ರೀತಿ ನೀವು ಬಯಸದಿದ್ದರೂ, ನಿಮಗೆ ಮನಸ್ಸಿಲ್ಲದಿದ್ದರೂ, ನಿಮ್ಮಿಂದ ಕೆಟ್ಟ ಕಾರ್ಯವೊಂದು ಆಗಬೇಕು ಎಂದಿದ್ದರೆ, ಅದು ಆಗೇ ಆಗುತ್ತದೆ. ಹಾಗಾಗಿ ನಿಮ್ಮ ಹಣೆಬರಹದಲ್ಲಿ ಆಗಲೇಬೇಕಾದ ಕರ್ಮವನ್ನ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ.

ಐದನೇಯ ವಿಷಯ ಸಾವು. ಮನುಷ್ಯನಿಗೆ ಸಾವು ಯಾವಾಗ ಬೇಕಾದರೂ ಬರಬಹುದು. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಅನಾರೋಗ್ಯದಿಂದ ಸಾವನ್ನಪ್ಪುವ ಪರಿಸ್ಥಿತಿ ಬಂದರೆ, ವೈದ್ಯರು ಎಷ್ಟೇ ಕಷ್ಟಪಟ್ಟರೂ, ಎಂಥದ್ದೇ ಚಿಕಿತ್ಸೆ ಕೊಟ್ಟರೂ, ಆ ವ್ಯಕ್ತಿಯನ್ನು ಬದುಕಿಸಲು ಆಗೋದಿಲ್ಲಾ. ಅದೇ ರೀತಿ ಅಪಘಾತವಾಗಿಯೇ ಸಾಯಬೇಕು ಅಂದ್ರೆ, ಎಷ್ಟೇ ಹುಷಾರಾಗಿ ಗಾಡಿ ಚಲಾಯಿಸಿದರೂ, ಸಾವು ಬಂದೇ ಬರತ್ತೆ. ಹಾಗಾಗಿ ಸಾವನ್ನ ತಡೆಯುವ ಶಕ್ತಿ ಆ ದೇವರಲ್ಲಿಯೂ ಇಲ್ಲ. ಕಾಲನ ಕರೆ ಬಂದಾಗ, ಎಲ್ಲರೂ ಹೋಗಲೇಬೇಕು.

ವಿದ್ಯಾರ್ಥಿಗಳು ಈ 4 ವಿಚಾರಗಳನ್ನ ತಿಳಿಯಲೇಬೇಕು ಎನ್ನುತ್ತಾನೆ ಶ್ರೀಕೃಷ್ಣ..

ಇಂಥ ಚಟ ನಿಮಗಿದ್ದರೆ, ಲಕ್ಷ್ಮೀ ನಿಮ್ಮ ಮನೆಗೆ ಬರಲು ಸಾಧ್ಯವೇ ಇಲ್ಲ.. ಭಾಗ 2

ಇಂಥ ಚಟ ನಿಮಗಿದ್ದರೆ, ಲಕ್ಷ್ಮೀ ನಿಮ್ಮ ಮನೆಗೆ ಬರಲು ಸಾಧ್ಯವೇ ಇಲ್ಲ.. ಭಾಗ 1

- Advertisement -

Latest Posts

Don't Miss