Friday, April 25, 2025

Latest Posts

ಉಚ್ಚಾಟನೆ ಬಳಿಕವೂ ನಾನ್‌ ರೆಬಲ್..!‌ ಗೇಟ್‌ಪಾಸ್‌ ನಂತರ ಯತ್ನಾಳ್‌ ಶಪಥ ಎಂಥದ್ದು..?

- Advertisement -

Political News: ನಮಗೆ ಪಂಚಮ ಶನಿಯಿಂದ ಎರಡೂವರೆ ವರ್ಷ ಸ್ಪಲ್ಪ ತೊಂದರೆಯಿತ್ತು. ಸನಾತನ ಹಿಂದೂ ಧರ್ಮದ ಪ್ರಕಾರ ನಾಳೆಯಿಂದ ಹೊಸ ವರ್ಷ, ಭವಿಷ್ಯ ಉಜ್ವಲವಾಗುವ ದಿನಗಳು ಪ್ರಾರಂಭವಾಗುತ್ತವೆ. ಅದರಂತೆಯೇ ನಾಳೆಯಿಂದಲೇ ರಾಜ್ಯಾದ್ಯಂತ ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಪ್ರಾರಂಭಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗುಡುಗಿದ್ದಾರೆ.

ಬೆಂಗಳೂರಿನಲ್ಲಿಂದು ಶನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿರುವ ಅವರು, ಬಿಜೆಪಿಯಲ್ಲಿನ ಕುಟುಂಬ ರಾಜ್ಯಕಾರಣದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ರಾಜ್ಯವನ್ನು ಸುತ್ತಾಟ ಮಾಡುತ್ತೇನೆ. ಅಲ್ಲದೆ ಭಾರತೀಯ ಜನತಾ ಪಾರ್ಟಿಯ ಮೂಲ ಸಿದ್ದಾಂತಗಳನ್ನು ಉಳಿಸುವ ಪ್ರಯತ್ನ ಮಾಡುತ್ತೇನೆ. ಮುಖ್ಯವಾಗಿ ನಾನು ಇದೇ ಪಕ್ಷವನ್ನು ರಿಪೇರಿ ಮಾಡ್ತೀನಿ, ವಾಪಸ್‌ ಬಿಜೆಪಿಯಲ್ಲಿಯೇ ಬರ್ತೀನಿ. ಆದರೆ ನಾನು ಯಾವುದೇ ಹೊಸ ಪಕ್ಷವನ್ನು ಕಟ್ಟುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನೂ ಬಿಜೆಪಿಯನ್ನು ಕೆಲವರು ತಮ್ಮ ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಂಡಿರುವುದನ್ನು ಕಿತ್ತು ಹಾಕಿ, ಸನಾತನ ಹಿಂದೂ ಧರ್ಮ ಉಳಿಯುವಂತಹ, ಹಿಂದೂಗಳ ರಕ್ಷಣೆ ಮಾಡುವ ಕೆಲಸವನ್ನು ನಾನು ಕರ್ನಾಟಕ ರಾಜ್ಯದಲ್ಲಿ ಮಾಡುತ್ತೇನೆ. ಅಲದೆ ನಾನು ಯಾವುದೇ ಕಾರಣಕ್ಕೂ ಉಚ್ಚಾಟನೆಯನ್ನು ವಾಪಸ್‌ ಪಡೆಯುವಂತೆ ಹೈಕಮಾಂಡ್‌ಗೆ ಮನವಿ ಮಾಡುವುದಿಲ್ಲ. ಅದನ್ನು ನಮ್ಮ ತಂಡದವರು ಮಾಡುತ್ತಾರೆ, ನನ್ನದು ನ ದೈನಂ ನ ಫಲಾಯನಂ ಸಿದ್ದಾಂತ ಎಂದು ಮಾರ್ಮಿಕವಾಗಿಯೇ ಅವರು ಹೇಳಿದ್ದಾರೆ. ಯಾರ ಬಳಿಯೂ ನನ್ನ ಉಚ್ಚಾಟನೆ ವಾಪಸ್‌ಗೆ ಮನವಿ ಮಾಡಿಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಈ ಹಿಂದೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರು ತಮ್ಮ ವಿಶ್ವಾಸ ಮತ ಕಳೆದುಕೊಂಡಾಗಲೂ ಒಂದೇ ಮಾತನ್ನು ಹೇಳಿದ್ದರು. ನ ದೈನಂ ಫಲಾಯನಂ ಎಂಬುದಾಗಿ ನಾನೂ ಸಹ ಅದೇ ಮಾತಿಗೆ ಅಂಟಿಕೊಂಡವನಾಗಿದ್ದೇನೆ. ಆಗ ಅವರು ಮಿತ್ರಪಕ್ಷಗಳ ಮೇಲೆ ಆರೋಪಿಸಲಿಲ್ಲ, ಬದಲಿಗೆ ಬಂದದ್ದನ್ನು ಸ್ವೀಕರಿಸಿದ್ದರು. ಅದರಂತೆಯೇ ನಾನೂ ಸಹ ಹೈಕಮಾಂಡ್‌ ಮುಂದೆ ಕೈಕಟ್ಟಿ ನಿಲ್ಲುವುದಿಲ್ಲ, ಜನರ ಮೂಲಕವೇ ಮತ್ತೆ ಬಿಜೆಪಿಗೆ ಬರುತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು 100ಕ್ಕೆ ನೂರರಷ್ಟು ಬಿಜೆಪಿಗೆ ವಾಪಸ್‌ ಬರ್ತೀನಿ, ನಾನು ಭ್ರಷ್ಟಾಚಾರ ಮಾಡಿಲ್ಲ, ಕುಟುಂಬ ರಾಜಕಾರಣ ನಡೆಸಿಲ್ಲ, ಹಿಂದೂಪರ ಕೆಲಸ ಮಾಡಿದ್ದೇನೆ, ಹಿಂದುಗಳ ರಕ್ಷಣೆ ಮಾಡಿದ್ದೇನೆ ಎಂದು ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ಕುಟುಂಬದಿಂದ ರಾಜಕಾರಣ ಹಾಳು..
ಇನ್ನೂ ಯಡಿಯೂರಪ್ಪ ಕುಟುಂಬದಿಂದ ರಾಜ್ಯದ ರಾಜಕಾರಣ ಹಾಳಾಗಿದೆ, ಈಗ ವಾಜಪೇಯಿ, ಅಡ್ವಾಣಿ ಹಾಗೂ ದೀನ ದಯಾಳ್‌ ಉಪಾದ್ಯಾಯ್‌ ತತ್ವ ಸಿದ್ದಾಂತಗಳು ಬಿಜೆಪಿಯಲ್ಲಿ ಇಲ್ಲ. ಕೇವಲ ಕುಟುಂಬ ರಾಜಕಾರಣ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅಲ್ಲದೆ ಮುಖ್ಯಮಂತ್ರಿಯಾಗಿದ್ದಾಗ ಹಿಂದುಗಳ ರಕ್ಷಣೆ ಮಾಡಲಿಲ್ಲ, ವೀರ ಸಾರ್ವಕರ್‌ ಫೋಟೋಗೆ ಅಪಮಾನ ಮಾಡಿದ್ರು, ಸ್ವಂತ ಜಿಲ್ಲೆಯಲ್ಲಿ ಹಿಂದೂಗಳನ್ನು ಉಳಿಸುವ ಕೆಲಸ ಮಾಡದ ಮಾಜಿ ಸಿಎಂ ಮಗನಿಗೆ ರಾಜ್ಯದಲ್ಲಿ ಭವಿಷ್ಯ ಇಲ ಎಂದು ಕಿಡಿಕಾರಿದ್ದಾರೆ.

ಹೈಕಮಾಂಡ್‌ ಭ್ರಮೆಯಿಂದ ಹೊರ ಬರಲಿ..

ಇನ್ನೂ ನನ್ನ ಉಚ್ಚಾಟನೆ ಮಾಡಲು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರೇ ಕಾರಣರಾಗಿದ್ದಾರೆ. ಹೈಕಮಾಂಡ್‌ ನಾಯಕರು ಅವರ ಮಾತು ಕೇಳಿದ್ದಾರೆ, ಅಲ್ಲದೆ ಇವರ ಬೆಂಬಲಕ್ಕೆ ಸಾಮಾನ್ಯ ವೀರಶೈವ ಲಿಂಗಾಯತರು ಯಾರೂ ಇಲ್ಲ. ಆ ಭ್ರಮೆಯಿಂದ ದಿಲ್ಲಿ ನಾಯಕರು ಹೊರಬರಬೇಕು. ಕೆಲ ಪೇಯ್ಡ್‌ ಸ್ವಾಮೀಜಿಗಳನ್ನು ಹೊರತುಪಡಿಸಿದರೆ ಅವರ ಜೊತೆ ಯಾರೂ ಇಲ್ಲ ಇದನ್ನು ಹೈಕಮಾಂಡ್‌ನವರು ತಿಳಿಯಬೇಕಿದೆ ಎಂದು ಕುಟುಕಿದ್ದಾರೆ. ಅಲ್ಲದೆ ಮೂರು ಬಾರಿ ಉಚ್ಚಾಟನೆಯಾಗಿರುವುದಕ್ಕೆ ನಾನು ಲಕ್ಕಿ, ನನ್ನ ಫೆವರೇಟ್‌ ನಂಬರ್‌ ಕೂಡ ಮೂರೇ ಆಗಿದೆ. ಆದರೆ ನನ್ನ ಉಚ್ಚಾಟನೆಗೆ ಕಾರಣರಾದವವರು ನಾಶವಾಗುತ್ತಾರೆ ಎಂದು ಶಾಪ ನಡೆಸಿದ್ದಾರೆ.

ಅಭಿಮಾನಿಗಳು ಹೊಸ ಪಕ್ಷ ಕಟ್ಟಿ ಅಂತಿದ್ದಾರೆ..
ಅಂದಹಾಗೆ ನನಗೆ ರಾಜ್ಯದಲ್ಲಿ ಜನಬೆಂಬಲ ಇದೆ, ಹೀಗಾಗಿ ದಿನಾಲೂ ನೂರಾರು ಫೋನ್‌ಗಳನ್ನು ಮಾಡಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಪೋರ್ಟ್‌ ಮಾಡುತ್ತಿದ್ದಾರೆ. ನೂತನ ಪಕ್ಷ ಕಟ್ಟುವಂತೆ ಸಲಹೆಗಳನ್ನು ನೀಡುತ್ತಿದ್ದಾರೆ. ನಾನು ನಿಜವಾದ ಜನರ ಪ್ರೀತಿ ಗಳಿಸಿದ್ದೇನೆ. ಅದಕ್ಕಾಗಿಯೇ ನನ್ನ ಪರ ವಿಜಯಪುರದಲ್ಲಿ 20 ಸಾವಿರ ಜನರು ಸೇರಿ ಪ್ರತಿಭಟಿಸಿದ್ದಾರೆ. ವಿಜಯೇಂದ್ರ ಅವರಂತೆ ಬಾಡಿಗೆ ಜನರನ್ನು ಕರೆತರುವುದಿಲ್ಲ, ಹಾಗೆ ಬಂದವರು ಶಾಶ್ವತವಾಗಿ ಜೊತೆಗೆ ಇರುವುದಿಲ್ಲ ಎಂದು ಹರಿಹಾಯ್ದಿದ್ದಾರೆ. ಅಲ್ಲದೆ ಕಳೆದ ಚುನಾವಣೆಯಲ್ಲಿ ಸಿಟಿ ರವಿಯನ್ನು ತನ್ನ ಚೇಲಾ ನಿಲ್ಲಿಸಿ ಯಡಿಯೂರಪ್ಪ ಸೋಲಿಸಿದ್ದರು ಅಂತ ಯತ್ನಾಳ್‌ ಹೇಳಿದ್ದಾರೆ.

ರಾಜಣ್ಣ ಹನಿಟ್ರ್ಯಾಪ್‌ ಹಿಂದೆ ಕೈ ಮಹಾನಾಯಕ..

ಇನ್ನೂ ರಮೇಶ್‌ ಜಾರಕಿಹೊಳಿ ಅವರ ಸಿಡಿ ಬಿಡುಗಡೆ ಮಾಡಿದ್ದು ವಿಜಯೇಂದ್ರ ಹಾಗೂ ಕೈ ಮಹಾನಾಯಕ ಇದ್ದರು. ಈಗ ರಾಜಣ್ಣ ಅವರ ಹನಿಟ್ರ್ಯಾಪ್‌ನಲ್ಲೂ ಡಿಕೆ ಶಿವಕುಮಾರ್ ಕೈವಾಡವಿದೆ‌ ಎಂದು ಯತ್ನಾಳ್‌ ಹೊಸ ಬಾಂಬ್‌ ಸಿಡಿಸಿದ್ದಾರೆ. ವಿಜಯೇಂದ್ರ ಇರುವ ಬಗ್ಗೆ ಸ್ವತಃ ರಮೇಶ್‌ ಜಾರಕಿಹೊಳಿ ಅವರೇ ಹೇಳಿದ್ದಾರೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

- Advertisement -

Latest Posts

Don't Miss