Friday, September 20, 2024

Latest Posts

ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ತಯಾರಿಸುವುದು ಹೀಗೆ ನೋಡಿ..

- Advertisement -

ಕೂದಲು ಉದುರುವ ಸಮಸ್ಯೆಗೆ ಹಲವಾರು ಪರಿಹಾರಗಳಿದೆ. ಆ್ಯಲೋವೆರಾ ಜೆಲ್,  ತೆಂಗಿನ ಎಣ್ಣೆ, ಹರಳೆಣ್ಣೆ, ಇತ್ಯಾದಿ ಬಳಸಿ ನಾವು ಕೂದಲಿಗೆ ಪರಿಹಾರ ಕಂಡುಕೊಳ್ಳುತ್ತೇವೆ. ಆದ್ರೆ ಅವೆಲ್ಲಕ್ಕಿಂತ ಬೆಸ್ಟ್ ರೆಮಿಡಿ ಅಂದ್ರೆ ಈರುಳ್ಳಿ ಎಣ್ಣೆ. ಹಾಗಾದ್ರೆ ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ಬಳಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕೇವಲ 3 ವಸ್ತುವನ್ನು ಬಳಸಿ, ಈ ಎಫೆಕ್ಟಿವ್ ಹೇರ್ ಆಯ್ಲ್ ತಯಾರಿಸಿ..

ಎರಡು ಕೆಂಪು ಈರುಳ್ಳಿ, ಅರ್ಧ ಕಪ್ ತೆಂಗಿನ ಎಣ್ಣೆಯನ್ನ ಬ್ಲೆಂಡರ್‌ಗೆ ಹಾಕಿ, ಗ್ರೈಂಡ್ ಮಾಡಿ, ಸ್ಮೂತ್ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಪ್ಯಾಸನ್ ಬಿಸಿ ಮಾಡಿ, ಸಣ್ಣ ಉರಿಯಲ್ಲಿರಿಸಿ, ಈರುಳ್ಳಿ ಪೇಸ್ಟ್ ಹಾಕಿ, ಇದರೊಂದಿಗೆ ಒಂದು ಕಪ್ ತೆಂಗಿನ ಎಣ್ಣೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಇನ್ನರ್ಧ ಕಪ್ ತೆಂಗಿನ ಎಣ್ಣೆ ಸೇರಿಸಿ, ಚೆನ್ನಾಗಿ ಕಾಯಿಸಿ.

ಇದೊಂದು ವಸ್ತುವನ್ನು ಬಳಸಿ, 5 ಕ್ರೀಮ್ ತಯಾರಿಸಿ, ಚೆಂದ ಕಾಣಿಸಬಹುದು..

ಹಾಗಂತ ಈರುಳ್ಳಿ ಸುಟ್ಟು ಹೋಗಿ, ವಾಸನೆ ಬರುವ ರೀತಿ ಅಲ್ಲ. ಕಲರ್ ಚೇಂಜ್ ಆಗುವವರೆಗೂ ಚೆನ್ನಾಗಿ ಕುದಿಸಿ. ನಂತರ ತಣಿಯಲು ಬಿಡಿ. ಎಣ್ಣೆ ತಣ್ಣಗಾದ ಬಳಿಕ, ಸೋಸಿ ಗಾಜಿನ ಬಾಟಲಿಯಲ್ಲಿ ತುಂಬಿ, ತಲೆಸ್ನಾನ ಮಾಡುವ 1 ಗಂಟೆ ಮೊದಲು ಅಥವಾ ಒಂದು ದಿನ ಮೊದಲು ಬಳಸಿದರೂ ನಡೆಯುತ್ತದೆ. ಇದರಿಂದ ನೀವು ಉತ್ತಮ ರಿಸಲ್ಟ್ ಪಡೆಯಬಹುದು. ಇನ್ನು ನಿಮಗೆ ಈರುಳ್ಳಿ ಎಣ್ಣೆ ಬಳಸಿದರೆ, ಅಲರ್ಜಿ ಎಂದಾದಲ್ಲಿ, ವೈದ್ಯರ ಬಳಿ ವಿಚಾರಿಸಿ, ಬಳಸುವುದು ಉತ್ತಮ.

- Advertisement -

Latest Posts

Don't Miss