ಜಾರ್ಖಂಡ್: ಮದುವೆ ಊಟದಲ್ಲಿ ಹಲ್ಲಿ ಬಿದ್ದದ್ದನ್ನು ಕಂಡ ಅತಿಥಿಗಳು ಭಯಭೀತರಾಗಿ ಅಸ್ವಸ್ಥಗೊಂಡ ಪ್ರಕರಣ ಜಾರ್ಖಂಡ್ ನಲ್ಲಿ ನಡೆದಿದೆ.
ಇಲ್ಲಿನ ದುಮ್ಕಾ ಜಿಲ್ಲೆಯಲ್ಲಿ ಈ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಇವತ್ತು ಬಂದಿದ್ದ ಅತಿಥಿಗಳು ವಿವಾಹ ಶಾಸ್ತ್ರ ಬಳಿಕ ಊಟಕ್ಕೆ ಕುಳಿತಿದ್ರು. ಈ ವೇಳೆ ವ್ಯಕ್ತಿಯೊಬ್ಬರಿಗೆ ಬಡಿಸಿದ್ದ ಊಟದಲ್ಲಿ ಹಲ್ಲಿ ಬಿದ್ದಿರೋದು ಪತ್ತೆಯಾಯ್ತು. ಇದನ್ನು ನೋಡಿ ಗಾಬರಿಗೊಂಡ ಸುಮಾರು 70ಕ್ಕೂ ಅಧಿಕ ಮಂದಿ ಏಕಾಏಕಿ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಇದರಿಂದ ಮದುವೆ ಮನೆಯಲ್ಲಿ ಭಾರೀ ಗದ್ದಲ ಏರ್ಪಟ್ಟಿತ್ತು. ಕೂಡಲೇ ಅಸ್ವಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯ್ತು.
ಇನ್ನು ಚಿಕಿತ್ಸೆ ನೀಡಿದ ವೈದ್ಯರು ಹಲ್ಲಿ ಬಿದ್ದ ಊಟ ಸೇವಿಸಿದ್ದಕ್ಕೆ ಅತಿಥಿಗಳು ಅಸ್ವಸ್ಥರಾಗಿಲ್ಲ. ಬದಲಾಗಿ ಮಾನಸಿಕ ಪರಿಣಾಮದಿಂದ ಒಬ್ಬರನ್ನು ನೋಡಿ ಮತ್ತೊಬ್ಬರು ವಾಂತಿ ಮಾಡಿಕೊಂಡಿದ್ದು ಹೇಳಿದ್ದು ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ಸ್ಪಷ್ಟಪಡಿಸಿದ ಬಳಿಕ ಮದುವೆ ಊಟ ಸೇವಿಸಿದ್ದ ಇತರರು ನೆಮ್ಮದಿಯ ನಿಟ್ಟುಸಿರುಬಿಡುವಂತಾಯ್ತು.
ನಿಮ್ ಹತ್ರ 10 ರೂಪಾಯಿ ಕಾಯಿನ್ ಇದೆಯಾ. ಡೋಂಟ್ ವರಿ. ಮಿಸ್ ಮಾಡದೇ ಈ ವಿಡಿಯೋ ನೋಡಿ