ಪಾಕಿಸ್ತಾನ ಸಂಪೂರ್ಣ ಪಾಪರ್ ಆಗಿದೆ. ಪಾಕ್ನ ಪರಿಸ್ಥಿತಿ ಬಿಡಿಸಿ ಹೇಳಬೇಕಿಲ್ಲ. ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನ ಆರ್ಥಿಕವಾಗಿ ಜರ್ಝರಿತವಾಗಿದೆ. ಖಜಾನೆ ಖಾಲಿ ಖಾಲಿ ಯಾಗಿದ್ದು, ಅಲ್ಲಿನ ಜನರು ಒಂದೊಂತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟರ ಮಟ್ಟಿಗೆ ಪಾಕ್ನಲ್ಲಿ ಬೆಲೆ ಏರಿಕೆಯಾಗಿದೆ. ವಿದೇಶಿದಲ್ಲಿ ಸಾವಿರಾರು ಕೋಟಿ ಸಾಲ ಮಾಡಿರೋ ಪಾಕ್, ದೇಶದ ಪ್ರಮುಖ ಪಾರ್ಕ್, ಬಂಗಲೆಗಳನ್ನು ಅಡ ಇಟ್ಟಿದೆ. ಈ ಪಾಕ್ನ ಸ್ಥಿತಿ ಅದ್ಯಾವ ಮಟ್ಟಿಗೆ ತಲುಪಿದೆ ಅಂದ್ರೆ, ತಾನು ಬಜೆಟ್ ಮಂಡನೆ ಮಾಡೋದಕ್ಕೆ ಚೀನಾ ಸಹಕಾರ ಕೇಳಿದೆ. ಡ್ರ್ಯಾಗನ್ ರಾಷ್ಟ್ರ ಚೀನಾ ಗ್ರೀನ್ ಸಿಗ್ನಲ್ ಕೊಟ್ಟ ನಂತರ ಪಾಕ್ ಬಜೆಟ್ ಮಂಡಿಸೋಕೆ ಮುಂದಾಗಿದೆ.
ತೆರಿಗೆ ಹೆಚ್ಚಳದ ಪರಿಣಾಮ ಒಂದು ಲೀಟರ್ ಹಾಲಿನ ಬೆಲೆ 370 ರೂಪಾಯಿಗೆ ಏರಿಕೆಯಾಗಿದೆ.
ಫ್ರಾನ್ಸ್, ಆಸ್ಟ್ರೇಲಿಯಾಗಿಂತ ಪಾಕಿಸ್ತಾನದಲ್ಲಿ ಹಾಲಿನ ದರ ದುಬಾರಿಯಾಗಿದೆ. ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಮೊಹರಂ ಆಚರಣೆಯ ದಿನದಂದು ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಹಾಲಿನ ಬೆಲೆ ಹೆಚ್ಚಾಗಿದೆ. ಕುತೂಹಲಕಾರಿಯಾಗಿ, ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹಾಲಿಗಿಂತ ಹೆಚ್ಚಾಗಿದೆ. ಸದ್ಯ ಪಾಕ್ನ ಪ್ರಮುಖ ನಗರವಾದ ಕರಾಚಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 270 ರೂ. ಇದೆ. ಆದ್ರೆ, ಹಾಲಿನ ಬೆಲೆ 370 ರೂಪಾಯಿ ದಾಟಿದೆ.
ಇನ್ನು ಪಾಕಿಸ್ತಾನದ ಸಿಂಧ್ ಎನ್ನುವ ಪ್ರಾಂತ್ಯದ ಹಲವು ಬಾಗಗಳಲ್ಲಿ ಹಾಲು ಲೀಟರ್‌ಗೆ 300 ರೂ.ಗೆ ಮಾರಾಟ ಮಾಡಲಾಗುತ್ತದೆ ಎಂಬ ವರದಿಗಳಿವೆ. ಹಾಗೆಯೇ ಪಾಕಿಸ್ತಾನದ ರಾಜಧಾನಿ ಕರಾಚಿ ನಗರದಾದ್ಯಂತ ಹಾಲಿನ ಬೇಡಿಕೆ ತೀವ್ರವಾಗಿದ್ದು ಹಾಲು 370 ರೂ.ವರೆಗೆ ಮಾರಾಟವಾಗಿದೆ. ಮೊಹರಂ ಹಬ್ಬದ ಪವಿತ್ರ ಮಾಸದ ಮೆರವಣಿಗೆಯಲ್ಲಿ ಬಾಗವಹಿಸುವವರಿಗೆ ಹಾಲು, ಜ್ಯೂಸ್ ಮತ್ತು ತಣ್ಣೀರು ನೀಡಲು ನಗರದ ವಿವಿಧ ಭಾಗಗಳಲ್ಲಿ ಸಬೀಲ್‍ಗಳನ್ನು ಅಂದರೆ ಸ್ಟಾಲ್‍ಗಳನ್ನು ಇಡಲಾಗಿತ್ತು. ಅದ್ದರಿಂದ ಹಾಲಿಗೆ ಭಾರಿ ಬೇಡಿಕೆ ಇದೆ. ಹೆಚ್ಚಿದ ಬೇಡಿಕೆಯಿಂದಾಗಿ ಹಾಲಿನ ದರದಲ್ಲಿ ಏರಿಕೆಯಾಗಿದೆ.
ಇನ್ನು ಪಾಕಿಸ್ತಾನದ ಅಂಗಡಿ ಮಾಲಿಕರೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.”ನಾವು ಪ್ರತಿ ವರ್ಷ ಹಾಲಿನ ಅಂಗಡಿಯನ್ನು ಇಡುತ್ತಿದ್ದೆವು. ಆದರೆ ಹಾಲಿನ ಬೆಲೆಯ ಹೆಚ್ಚಳದಿಂದಾಗಿ ಈ ವರ್ಷ ಅದನ್ನು ಬಿಡಲು ಆಗಲಿಲ್ಲಾ” ಎಂದು ಹೇಳಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಅಂತಹ ವಿಪರೀತ ಬೆಲೆ ಏರಿಕೆಯನ್ನು ನೋಡಿಲ್ಲ ಅಂತ ಪಾಕ್ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್‍ನಲ್ಲಿ ಒಂದು ಲೀಟರ್ ಹಾಲಿನ ಬೆಲೆ 1.23 ಅಮೆರಿಕನ್ ಡಾಲರ್, ಆಸ್ಟ್ರೇಲಿಯಾ ಮೆಲ್ಬೋರ್ನ್‍ನಲ್ಲಿ 1.08 ಅಮೆರಿಕನ್ ಡಾಲರ್. ಕಳೆದ ವಾರ ಪಾಕಿಸ್ತಾನದಲ್ಲಿ ಹಾಲಿನ ಮೇಲೆ ಶೇಕಡಾ 18ರಷ್ಟು ತೆರಿಗೆ ಏರಿಕೆ ಮಾಡಲಾಗಿದೆ. ಪಾಕಿಸ್ತಾನ ಹಣಕಾಸು ಸಚಿವ ಮೊಹಮ್ಮದ್ ಔರಂಗಜೇಬ್ ಈ ಘೋಷಣೆ ಮಾಡಿದ್ದರು. ಇತ್ತ ಸಗಟು ಮಾರುಕಟ್ಟೆ ದರ ಕೂಡ ಹೆಚ್ಚಳವಾಗಿದೆ. ಹೀಗಾಗಿ ಸರಿಸುಮಾರು ಶೇಕಡಾ 25 ರಷ್ಟು ದರದಲ್ಲಿ ಏರಿಕೆಯಾಗಿದೆ. ಇದರ ಪರಿಣಾಮ ಹಾಲು 370 ರೂಪಾಯಿಗೆ ತಲುಪಿದೆ.
ತೆರಿಗೆ ಹೆಚ್ಚಳದಿಂದ ಹಾಲು ದುಬಾರಿಯಾಗಿದೆ. ಇದರ ಪರಿಣಾಮ ಹಣದುಬ್ಬರ ಪಾಕಿಸ್ತಾನದಲ್ಲಿ ತಾಂಡವವಾಡುತ್ತಿದೆ. ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶೇಕಡಾ 40 ರಷ್ಚು ಪಾಕಿಸ್ತಾನದ ಜನ ಕಡು ಬಡನತಕ್ಕೆ ತಳ್ಳಲ್ಪಟ್ಟಿದ್ದಾರೆ. ಪಾಕಿಸ್ತಾನದಲ್ಲೇ 5 ವರ್ಷ ಕೆಳಗಿನ ಶೇಕಡಾ 60 ರಷ್ಟು ಮಕ್ಕಳು ಅನೆಮಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಶೇಕಡಾ 40 ರಷ್ಟು ಮಕ್ಕಳು ಅಪೌಷ್ಠಿಕತೆ ಸೇರಿದಂತೆ ಇತರ ಕೆಲ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ಹಾಲಿನ ದರವೂ ಏರಿಕೆಯಾಗಿರುವುದರಿಂದ ಪಾಕಿಸ್ತಾನ ಪರಿಸ್ಥಿತಿ ಸಾವು ಬದುಕಿನ ನಡುವಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ ಷರತ್ತುಗಳಂತೆ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಿ ಸಾಲ ಪಡೆಯಲು ಮುಂದಾಗಿರುವ ಪಾಕಿಸ್ತಾನ ಇತ್ತೀಚೆಗೆ ವಾರ್ಷಿಕ ಬಜೆಟ್ ಮಂಡಿಸಿದೆ. ಈ ವೇಳೆ ಒಟ್ಟಾರೆ ಶೇಕಡಾ 40 ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ಪಾಕಿಸ್ತಾನದ ಇತಿಹಾಸದಲ್ಲಿ ಈ ಪೈಕಿ ತೆರಿಗೆ ಏರಿಕೆ ಮಾಡಿಲ್ಲ. ಇದರ ಪರಿಣಾಮ ನೇರವಾಗಿ ಜನಸಾಮಾನ್ಯರ ಮೇಲೆ ತಟ್ಟಿದೆ.
ಇತ್ತೀಚೆಗೆ ಕಡಿತಗೊಳಿಸಿದ್ದ ತೈಲ ಬೆಲೆ ಮೇಲಿನ ತೆರಿಗೆಯನ್ನು ಮತ್ತೆ ಏರಿಕೆ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಪೆಟ್ರೋಲ್ ದರವನ್ನು 7.45 ರೂಪಾಯಿ ಏರಿಕೆ ಮಾಡಿದ್ದರ, ಡೀಸೆಲ್ ದರವನ್ನು 9.56 ರೂಪಾಯಿ ಏರಿಕೆ ಮಾಡಲಾಗಿದೆ. ಸದ್ಯ ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ ಬೆಲೆ 277 ರೂಪಾಯಿ ಆಗಿದೆ.