Tuesday, October 22, 2024

Latest Posts

ಮನೆಯಲ್ಲೇ ತಯಾರಿಸಬಹುದು ಹೊಟೇಲ್ ಸ್ಟೈಲ್ ಪಾಲಕ್ ಸೂಪ್..

- Advertisement -

ಪಾಲಕ್ ಸೊಪ್ಪನ್ನ ಕೆಲವರು ಇಷ್ಟಪಡಲ್ಲ. ಆದ್ರೆ ಪಾಲಕ್ ಸೊಪ್ಪು ಆರೋಗ್ಯಕರದ ಜೊತೆಗೆ ರುಚಿಕರವೂ ಹೌದು. ಪಾಲಕ್ ಸೊಪ್ಪಿನಿಂದ ಹಲವು ಖಾದ್ಯಗಳನ್ನ ತಯಾರಿಸಬಹುದು. ಪಾಲಕ್ ರೈಸ್, ಪಾಲಕ್ ಪಕೋಡ, ಪಾಲಕ್ ಪರೋಟ, ಪಾಲಕ್ ಇಡ್ಲಿ, ಪಾಲಕ್ ದೋಸಾ ಹೀಗೆ ಇತ್ಯಾದಿ ತಿಂಡಿಗಳನ್ನ ತಯಾರಿಸಬಹುದು. ಇದರ ಜೊತೆಗೆ ಸೂಪ್ ಕೂಡ ತಯಾರಿಸಬಹುದು. ಹಾಗಾಗಿ ಇಂದು ನಾವು ಹೊಟೇಲ್ ಸ್ಟೈಲ್ ಪಾಲಕ್ ಸೂಪ್ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ..

ಸಣ್ಣದಾಗಿ ಕತ್ತರಿಸಿದ ಪಾಲಕ್ ಒಂದು ಕಪ್, ಸಣ್ಣದಾಗಿ ಹೆಚ್ಚಿದ ಎರಡು ಈರುಳ್ಳಿ, ಸಣ್ಣದಾಗಿ ಹೆಚ್ಚಿದ ಎರಡು ಟೊಮೆಟೋ, 5 ಬೆಳ್ಳುಳ್ಳಿ ಎಸಳು, ಎರಡು ಪಲಾವ್ ಎಲೆ, 5ರಿಂದ 6 ಕಾಳುಮೆಣಸು, ಚಿಟಿಕೆ ಪೆಪ್ಪರ್ ಪೌಡರ್, ಒಂದು ಅಥವಾ ಎರಡು ಹಸಿ ಮೆಣಸು, ಅರ್ಧ ಕಪ್ ಹಾಲು, ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ಇವಿಷ್ಟು ಪಾಲಕ್ ಸೂಪ್ ಮಾಡಲು ಬೇಕಾಗುವ ಸಾಮಗ್ರಿ.

ಮೊದಲು ಕೊಂಚ ಬೆಣ್ಣೆ ಹಾಕಿ, ಚಿಕ್ಕದಾಗಿ ತುಂಡರಿಸಿದ ಅರ್ಧ ಬೆಳ್ಳುಳ್ಳಿಯನ್ನ ಹುರಿದುಕೊಂಡು, ಬದಿಗಿರಿಸಿ. ನಂತರ ಒಂದು ಪ್ಯಾನ್‌ಗೆ ಚೆನ್ನಾಗಿ ತೊಳೆದು, ಸಣ್ಣದಾಗಿ ಕತ್ತರಿಸಿದ ಪಾಲಕ್ ಸೊಪ್ಪು ಮತ್ತು ಬೆಣ್ಣೆ ಹಾಕಿ ಹುರಿದುಕೊಳ್ಳಿ. ಸೊಪ್ಪಿನ ಹಸಿ ವಾಸನೆ ಹೋಗಿ, ಪೂರ್ತಿಯಾಗಿ ಹುರಿದುಕೊಂಡ ಬಳಿಕ, ಅದನ್ನ ಬದಿಗಿರಿಸಿ. ನಂತರ ಅದೇ ಪ್ಯಾನ್‌ಗೆ ಮತ್ತೆ ಬೆಣ್ಣೆ ಅಥವಾ ಎಣ್ಣೆ ಹಾಕಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಕಾಳು ಮೆಣಸು, ಟೊಮೆಟೋ, ಈರುಳ್ಳಿ ಹಾಕಿ ಹುರಿದುಕೊಳ್ಳಿ.

ಈಗ ಹುರಿದುಕೊಂಡ ಸಾಮಗ್ರಿಯನ್ನ ಮಿಕ್ಸಿ ಜಾರ್‌ಗೆ ಹಾಕಿ, ನುಣ್ಣಗೆ ಪೇಸ್ಟ್ ತಯಾರಿಸಿ. ಈ ಪ್ಯಾನ್‌ಗೆ ಬೆಣ್ಣೆ ಹಾಕಿ, ಪಲಾವ್ ಎಲೆ ಹಾಕಿ, ಬಾಡಿಸಿ. ನಂತರ ತಯಾರಾದ ಪೇಸ್ಟ್ ಹಾಕಿ, ಸ್ವಲ್ಪ ನೀರು, ಹಾಲು ಹಾಕಿ, ಸೂಪ್ ಹದಕ್ಕೆ ಬರುವಂತೆ ಕುದಿಸಿ. ನಂತರದ ಇದಕ್ಕೆ ಉಪ್ಪು, ಪೆಪ್ಪರ್ ಪುಡಿ ಸೇರಿಸಿ. ಈಗ ಸೂಪ್ ರೆಡಿ. ಸೂಪನ್ನ ಸರ್ವ್ ಮಾಡುವಾಗ, ಮೊದಲೇ ಹುರಿದಿಟ್ಟುಕೊಂಡ ಬೆಳ್ಳುಳ್ಳಿ ಮತ್ತು ಬೆಣ್ಣೆ ಹಾಕಿ ಸವಿಯಲು ಕೊಡಿ.

- Advertisement -

Latest Posts

Don't Miss