Recipe: ಇಂದು ನಾವು ಆರೋಗ್ಯಕರ ರೆಸಿಪಿಯಾದ ಪನೀರ್ ಕಾರ್ನ್ ಸಲಾಡ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಸ್ವೀಟ್ ಕಾರ್ನ್, ಪನೀರ್, ಕ್ಯಾರೇಟ್ ತುರಿ, ಕೊತ್ತೊಂಬರಿ ಸೊಪ್ಪು, ಉಪ್ಪು, ಸಕ್ಕರೆ, ನಿಂಬೆರಸ, ಖಾರ ಬೇಕಾಗಿದ್ದಲ್ಲಿ ಖಾರದ ಪುಡಿ ಅಥವಾ ಗರಂ ಮಸಾಲೆ ಪುಡಿ, ಚಾಟ್ ಮಸಾಲೆ. ಇವಿಷ್ಟು ಪನೀರ್ ಕಾರ್ನ್ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿ.
ಮಾಡುವ ವಿಧಾನ: ಮೊದಲು ಕಾರ್ನ್ ಕೊಂಚ ಬೇಯಿಸಿ. ಇನ್ನೊಂದು ಪ್ಯಾನ್‌ನಲ್ಲಿ ಕೊಂಚ ಉಪ್ಪು ಹಾಕಿ, ತುಪ್ಪದಲ್ಲಿ ಪನೀರ್ ಹುರಿದುಕೊಳ್ಳಿ. ಅದನ್ನು ಒಂದು ಮಿಕ್ಸಿಂಗ್ ಬೌಲ್‌ಗೆ ಹಾಕಿ. ಅದರೊಂದಿಗೆ, ಕ್ಯಾರೇಟ್ ತುರಿ, ತುರಿದ ಪನೀರ್, ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಸಕ್ಕರೆ, ಉಪ್ಪು, ನಿಂಬೆರಸ, ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ ಇವೆಲ್ಲವನ್ನೂ ಸೇರಿಸಿದರೆ, ಪನೀರ್ ಕಾರ್ನ ಸಲಾಡ್ ರೆಡಿ.




