Monday, April 21, 2025

Latest Posts

ಪನೀರ್ ಸಮೋಸಾ ರೆಸಿಪಿ

- Advertisement -

Recipe: ಮನೆಯಲ್ಲಿ ಸಮೋಸಾ ಮಾಡಿ ಸವಿಯಬೇಕು ಅಂದ್ರೆ, ಬರೀ ಬಟಾಣಿ, ಆಲೂಗಡ್ಡೆಯಷ್ಟೇ ಅಲ್ಲದೇ, ಬೇರೆ ಬೇರೆ ವೆರೈಟಿ ಸಮೋಸಾವನ್ನೂ ಮಾಡಬಹುದು. ಹಾಗಾಗಿ ಇಂದು ನಾವು ಪನೀರ್ ಸಮೋಸಾ ಹೇಗೆ ಮಾಡುವುದು ಎಂದು ಹೇಳಲಿದ್ದೇವೆ.

200 ಗ್ರಾಂ ಪನೀರನ್ನು ತುರಿದುಕೊಳ್ಳಿ. ಗ್ಯಾಸ್ ಆನ್ ಮಾಡಿ, ಒಂದು ಪ್ಯಾನ್‌ ಇಟ್ಟು ಅದಕ್ಕೆ 1 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ ಪುಡಿ, 3 ಹಸಿಮೆಣಸಿನಕಾಯಿ, ಕೊಂಚ ತುರಿದ ಶುಂಠಿ, 1 ಸ್ಪೂನ್ ಕಾಳು ಮೆಣಸಿನ ಪುಡಿ, 1 ಸ್ಪೂನ್ ಖಾರದ ಪುಡಿ, ಅರ್ಧ ಸ್ಪೂನ್ ಗರಂ ಮಸಾಲೆ, 1 ಸ್ಪೂನ್ ಚಾಟ್ ಮಸಾಲೆ, ಇವಿಷ್ಟನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.

ಈಗ ತುರಿದಿಟ್ಟ ಪನೀರ್ ಜೊತೆ ಬೇಕಾದಷ್ಟು ಉಪ್ಪು, ಕೊತ್ತೊಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ, ಹೂರಣ ರೆಡಿ. ಈಗ 2 ಕಪ್ ಮೈದಾ, ಚಿಟಿಕೆ ಓಮ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಕಪ್ ತುಪ್ಪ, ಮತ್ತು ನೀರು ಸೇರಿಸಿ, ಸಮೋಸಾಕ್ಕೆ ಹಿಟ್ಟು ತಯಾರಿಸಿ. ಬಳಿಕ ಹಿಟ್ಟನ್ನು ಲಟ್ಟಿಸಿ, ಅದರಲ್ಲಿ ಹೂರಣ ತುಂಬಿಸಿ, ಕಾದ ಎಣ್ಣೆಯಲ್ಲಿ ಸಮೋಸಾವನ್ನು ಕರಿಯಿರಿ.

ಪ್ರಸವದ ಬಳಿಕ, ಯಾವ ರೀತಿ ದೇಹದಲ್ಲಿರುವ ಕೊಳೆಯನ್ನು ತೆಗೆದು ಹಾಕಬೇಕು..?

ಬಾರ್ಲಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು..?

ಬೊಜ್ಜು ಕರಗಲು ಈ ಸರಳ ಟಿಪ್ಸ್ ಉಪಯೋಗಿಸಿ ನೋಡಿ..

- Advertisement -

Latest Posts

Don't Miss