Wednesday, January 15, 2025

Latest Posts

ಪಾನೀಪುರಿಗೆ ಬೇಕಾಗುವ ಜೀರಾಪಾನಿ ಟೇಸ್ಟಿಯಾಗಿರಬೇಕಾ..? ಹಾಗಾದ್ರೆ ಹೀಗೆ ತಯಾರಿಸಿ..

- Advertisement -

ನೀವು ಟಾರ್ಚ್ ಹಾಕಿ ಹುಡುಕಿದ್ರೂನು, ಪಾನಿಪುರಿ ಅಂದ್ರೆ ನನಗಿಷ್ಟಾ ಆಗಲ್ಲ ಅಂತಾ ಹೇಳುವವರು ನಿಮಗೆ ಎಲ್ಲೂ ಸಿಗಲ್ಲ ಬಿಡಿ. ಯಾಕಂದ್ರೆ ಪಾನಿಪುರಿಗೆ ಅಷ್ಟು ಫ್ಯಾನ್ಸ್ ಇದ್ದಾರೆ. ಪಾನಿಪುರಿ ಟೇಸ್ಟಿಯಾಗಬೇಕು ಅಂದ್ರೆ, ಅದಕ್ಕೆ ಬಳಸೋ, ಜೀರಾಪಾನಿ ರುಚಿ ಸಖತ್ ಆಗಿರ್ಬೇಕು. ಆಗಲೇ ಪಾನಿಪುರಿ ರುಚಿಯಾಗೋದು. ಹಾಗಾಗಿ ನಾವಿಂದು ಜೀರಾಪಾನಿ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: ಒಂದು ಕಪ್ ಕೊತ್ತೊಂಬರಿ ಸೊಪ್ಪು, ಅರ್ಧ ಕಪ್ ಪುದೀನಾ, 2 ಸಣ್ಣ ತುಂಡು ಹಸಿ ಶುಂಠಿ, 4 ಹಸಿ ಮೆಣಸು, ಹಸಿ ಮೆಣಸು ನಿಮಗೆ ಬೇಕಾದಷ್ಟು ಖಾರಕ್ಕೆ ತಕ್ಕಂತೆ ಬಳಸಿ, ಅರ್ಧ ಸ್ಪೂನ್ ಕಪ್ಪುಪ್ಪು, ಚಿಟಿಕೆ ಪೆಪ್ಪರ್ ಪುಡಿ, ಚಿಟಿಕೆ ಚಾಟ್ ಮಸಾಲೆ ಪುಡಿ, ಅರ್ಧ ಚಮಚ ಹುರಿದು ಪುಡಿ ಮಾಡಿದ ಜೀರಿಗೆ, ಚಿಟಿಕೆ ಹಿಂಗು, ಎರಡು ಸ್ಪೂನ್ ರೆಡಿಮೇಡ್ ಪಾನಿಪುರಿ ಮಸಾಲೆ, ಎರಡು ಸ್ಪೂನ್ ನಿಂಬೆ ರಸ,  ರುಚಿಗೆ ತಕ್ಕಷ್ಟು ಉಪ್ಪು, ಕೊಂಚ ಸಕ್ಕರೆ, ನಾಲ್ಕು ಐಸ್‌ ಕ್ಯೂಬ್ಸ್.

ಮಾಡುವ ವಿಧಾನ: ಮೊದಲು ಕೊತ್ತೊಂಬರಿ ಸೊಪ್ಪು, ಪುದೀನಾ, ಶುಂಠಿ, ಹಸಿಮೆಣಸಿನಕಾಯಿ ಸೇರಿಸಿ, ಮಿಕ್ಸಿಜಾರ್‌ಗೆ ಹಾಕಿ, ಚೆನ್ನಾಗಿ ಪೇಸ್ಟ್ ತಯಾರಿಸಿ. ಇದನ್ನು ಒಂದು ಬೌಲ್‌ಗೆ ಹಾಕಿ, ಇದಕ್ಕೆ ನಾಲ್ಕು ಕಪ್ ತಣ್ಣಗಿನ ನೀರು ಹಾಕಿ. ಈಗ ಇದಕ್ಕೆ ಕಪ್ಪುಪ್ಪು, ಚಿಟಿಕೆ ಪೆಪ್ಪರ್ ಪುಡಿ, ಚಿಟಿಕೆ ಚಾಟ್ ಮಸಾಲೆ ಪುಡಿ, ಅರ್ಧ ಚಮಚ ಹುರಿದು ಪುಡಿ ಮಾಡಿದ ಜೀರಿಗೆ, ಚಿಟಿಕೆ ಹಿಂಗು, ಎರಡು ಸ್ಪೂನ್ ರೆಡಿಮೇಡ್ ಪಾನಿಪುರಿ ಮಸಾಲೆ, ಎರಡು ಸ್ಪೂನ್ ನಿಂಬೆ ರಸ, ಉಪ್ಪು ಸೇರಿಸಿ ಮಿಕ್ಸ್ ಮಾಡಿ.

ನೀವು ಇದನ್ನು ಹೀಗೆ ಸವಿಯಬಹುದು. ಇಲ್ಲವಾದಲ್ಲಿ ಗಾಳಿಸಿ ಬಳಸಬಹುದು. ಇದಾದ ಬಳಿಕ ಇದಕ್ಕೆ ಐಸ್‌ಕ್ಯೂಬ್ಸ್, ಒಂದು ಸ್ಪೂನ್ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿದ್ರೆ, ಟೇಸ್ಟಿ ಜೀರಾ ಪಾನಿ ರೆಡಿ.

- Advertisement -

Latest Posts

Don't Miss