Health Tips: ಹಲವರಿಗೆ ಇಷ್ಟವಾಗುವ, ಎಲ್ಲ ವಯಸ್ಸಿನವರೂ ಚಪ್ಪರಿಸಿಕೊಂಡು, ಇಷ್ಟಪಟ್ಟು ತಿನ್ನುವ ಚಾಟ್ ಅಂದ್ರೆ ಪಾನೀಪುರಿ. ಆದರೆ ವೈದ್ಯರ ಪ್ರಕಾರ, ಎಲ್ಲಕ್ಕಿಂತ ಕೆಟ್ಟದಾದ ಚಾಟ್ ಅಂದ್ರೆ ಪಾನೀಪುರಿ. ಈ ಬಗ್ಗೆ ಡಾ.ಆಂಜೀನಪ್ಪ ಅವರೇ ವಿವರಿಸಿದ್ದಾರೆ ನೋಡಿ..
ವೈದ್ಯರು ಹೇಳುವ ಪ್ರಕಾರ, ಎಲ್ಲಕ್ಕಿಂತ ಕೆಟ್ಟ ತಿಂಡಿ ಅಂದ್ರೆ ಪಾನೀಪುರಿ. ಅದರಲ್ಲು ಅಲ್ಲಿ ಬಳಕೆ ಮಾಡುವ ಪಾನಿ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಅಂತಾರೆ ವೈದ್ಯರು. ಬೇರೆ ಚಾಟ್‌ಗಳು ಬಿಸಿ ಬಿಸಿಯಾಗಿರುವ ಕಾರಣ, ಅದರಿಂದ ಅಷ್ಟು ಆರೋಗ್ಯ ಹಾಳಾಗುವುದಿಲ್ಲ. ಆದರೆ ಪಾನೀಪುರಿಗೆ ಬಳಸುವ ಪಾನೀ ಡರ್ಟಿ ವಾಟರ್ ಆಗಿರುತ್ತದೆ. ಅಲ್ಲದೇ, ಮಾರಾಟಗಾರ ಅದರಲ್ಲಿ ಕೈ ಹಾಕಿ, ಮುಳುಗಿಸಿ, ನಿಮಗೆ ಪಾನೀಪುರಿ ಕೊಡುತ್ತಾನೆ. ಹಾಗಾಗಿ ಆ ಕೈಯಲ್ಲಿರುವ ಗಲೀಜು ಪಾನೀಗೆ ಸೇರುತ್ತದೆ. ಹಾಗಾಗಿ ಅದು ಡರ್ಟಿಯೆಸ್ಟ್ ವಾಟರ್ ಆಗಿರುತ್ತದೆ ಅಂತಾರೆ ವೈದ್ಯರು.
ಅದರಲ್ಲೂ ಕುದಿಸದ ನೀರನ್ನು ಬಳಸಿ ಮಾಡಿದ ಯಾವುದೇ ಪಾನೀಯ ಅಥವಾ ತಿಂಡಿ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ. ಇನ್ನು ಕೆಲ ಪಾನೀಪುರಿ ಮಾಡುವವರು ಸ್ಟೀಲ್ ಪ್ಲೇಟ್ ಬಳಸುತ್ತಾರೆ. ಅದನ್ನು ಸರಿಯಾಗಿ ತೊಳೆಯದೇ, ಬರೀ ನೀರಿನಲ್ಲಿ ಮುಳುಗಿಸಿ ಕೊಡುತ್ತಾರೆ. ಹಾಗಾಗಿ ವೈದ್ಯರು ಹೇಳುವುದೇನೆಂದರೆ, ಮನೆಯಿಂದ ನೀವೇ ನಿಮ್ಮ ಪ್ಲೇಟ್ ತೆಗೆದುಕೊಂಡು ಹೋಗಿ ಎನ್ನುತ್ತಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ವೀಡಿಯೋ ನೋಡಿ..