Friday, April 18, 2025

Latest Posts

ಚಪಾತಿ, ದೋಸೆಗೆ ಗುಡ್ ಕಾಂಬಿನೇಷನ್ ಈ ಪಪ್ಪಾಯಿ ಜ್ಯಾಮ್..

- Advertisement -

ಮನೆಯಲ್ಲಿ ಚಪಾತಿ, ದೋಸೆ ಮಾಡಿದಾಗ, ಪ್ರತೀ ಸಲವೂ ಪಲ್ಯ ಮಾಡೋದು ಕಷ್ಟವಾಗಬಹುದು. ಈ ಸಮಯದಲ್ಲಿ ಚಟ್ನಿ ಪುಡಿ, ಅಥವಾ ಜ್ಯಾಮ್ ಏನಾದ್ರೂ ಇದ್ರೆ ಸಹಾಯವಾಗತ್ತೆ. ಹಾಗಾಗಿ ನಾವಿಂದು ಮನೆಯಲ್ಲೇ ಪಪ್ಪಾಯಿ ಜ್ಯಾಮ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..

ಈ ಬಾರಿ ದೀಪಾವಳಿಗೆ ತಯಾರಿಸಿ ಬೇಸನ್ ಲಡ್ಡು..

ಬೇಕಾಗುವ ಸಾಮಗ್ರಿ: ಒಂದು ಕಪ್ ಹಣ್ಣಾದ ಪಪ್ಪಾಯಿ, ¾ ಕಪ್ ಸಕ್ಕರೆ, ಅರ್ಧ ನಿಂಬೆ ಹಣ್ಣಿನ ರಸ..

ಮಾಡುವ ವಿಧಾನ: ಮೊದಲು ಪಪ್ಪಾಯಿಯನ್ನು ಮಿಕ್ಸಿ ಜಾರ್‌ಗೆ ಹಾಕಿ, ಸ್ಮೂತ್ ಆಗಿ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಗ್ಯಾಸ್ ಆನ್ ಮಾಡಿ ಪ್ಯಾನ್ ಇರಿಸಿ. ಅದರಲ್ಲಿ ಪಪ್ಪಾಯಿ ಪೇಸ್ಟ್ ಹಾಕಿ. ಈ ಪೇಸ್ಟ್ ಚೆನ್ನಾಗಿ ಕುದಿ ಬರಿಸಬೇಕು. ಹೀಗೆ ಕುದಿಯುವಾಗ ಮಧ್ಯೆ ಮಧ್ಯೆ ಮಿಶ್ರಣ ತಳ ತಾಗದಂತೆ, ಸೌಟಿಂದ ಕೈಯಾಡಿಸಬೇಕು.

ನಿಮ್ಮ ಸ್ಕಿನ್ ಗ್ಲೋ ಆಗಲು ಮಲಗುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ..

ಕುದಿ ಬಂದ ಬಳಿಕ ಇದಕ್ಕೆ ಸಕ್ಕರೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಈ ವೇಳೆ ಯಾವುದೇ ಕಾರಣಕ್ಕೂ ಮಿಶ್ರಣ ತಳ ಹಿಡಿಯುವಂತಿಲ್ಲ. ಹಾಗೇನಾದರೂ ಆದರೆ, ಜ್ಯಾಮ್ ಟೇಸ್ಟ್ ಹಾಳಾಗುತ್ತದೆ. ಹಾಗಾಗಿ ಅದನ್ನ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ಸಕ್ಕರೆ ಕರಗಿ, ಮಿಕ್ಸ್ ಆದ ಮೇಲೆ, ಅರ್ಧ ನಿಂಬೆ ಹಣ್ಣಿನ ರಸ ಸೇರಿಸಿ. ಕೊನೆಗೆ ಬೇಕಾದಲ್ಲಿ ಏಲಕ್ಕಿ ಪುಡಿ ಸೇರಿಸಿ. ಈಗ ಪಪ್ಪಾಯಿ ಜ್ಯಾಮ್ ರೆಡಿ.

- Advertisement -

Latest Posts

Don't Miss