Bengaluru News: 10ನೇ ತರಗತಿ, ಸೆಕೆಂಡ್ ಪಿಯುಸಿ ಮುಗಿಸಿ, ಮುಂದಿನ ಭವಿಷ್ಯದ ಬಗ್ಗೆ ಯೋಚಿಸುತ್ತಿರುವ, ಯಾವ ಕೋರ್ಸ್ ಮಾಡುವುದು ಉತ್ತಮ ಅಂತಾ ಹುಡುಕುತ್ತಿರುವ ವಿದ್ಯಾರ್ಥಿಗಳಿಗಾಗಿಯೇ ಪಬ್ಲಿಕ್ ಟಿವಿ ಶಿಕ್ಷಣ ಮೇಳ ಆಯೋಜಿಸಿದೆ. ಬೆಂಗಳೂರಿನ ಅರಮನೆ ಮೈದಾನದ, ಗಾಯತ್ರಿ ವಿಹಾರದಲ್ಲಿ ಈ ಶಿಕ್ಷಣ ಮೇಳ ನಡೆಯುತ್ತಿದ್ದು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು, ಉಚಿತವಾಗಿ ಈ ಮೇಳದಲ್ಲಿ ಭಾಗಿಯಾಗಬಹುದು.
ಈ ಮೇಳದಲ್ಲಿ 120ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿದ್ದು, ನೀವು ಬೇಕಾದಷ್ಟು ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆಯಬಹುದು. ನಿಮಗೆ ಯಾವುದಾದರೂ ಕೋರ್ಸ್ ಇಷ್ಟವಾಗಿ ಅಡ್ಮಿಷನ್ ಮಾಡಿಸಿಕೊಳ್ಳಬೇಕು ಎಂದಲ್ಲಿ, ಸ್ಥಳದಲ್ಲೇ ಅಡ್ಮಿಷನ್ ಮಾಡಿಸಿಕೊಳ್ಳಬಹುದು. ಅಲ್ಲದೇ, ಸೆಮಿನಾರ್ ಕೂಡ ನಡೆಸಿ, ನಿಮಗೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಬೇರೆ ಬೇರೆ ಕಾರ್ಯಕ್ರಮವಿದ್ದು, ಮಕ್ಕಳಿಗೆ ಗೇಮ್ಸ್, ರಸಪ್ರಶ್ನೆ ಕಾರ್ಯಕ್ರಮ, ಸ್ಲೋ ಸೈಕಲ್ ರೇಸ್, ಪಿಕ್ ಆ್ಯಂಡ್ ಸ್ಪೀಚ್ ಸೇರಿ ಅನೇಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಗೆದ್ದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಬಹುಮಾನಗಳನ್ನು ಸಹ ನೀಡಲಾಗುತ್ತದೆ. ಲ್ಯಾಪ್‌ಟಾಪ್ ಬೈಸಿಕಲ್‌ನಂಥ ಗಿಫ್ಟ್ಗಳು ಸಿಗಲಿದೆ. ಸೆಕೆಂಡ್ ಪಿಯುಸಿಯಲ್ಲಿ ನೀವು ಅತ್ಯುತ್ತಮ ಅಂಕ ಗಳಿಸಿದ್ದಲ್ಲಿ, ರಿಸಲ್ಟ್ ಪ್ರತಿಯನ್ನು ನೀವು ತೋರಿಸಿದ್ದಲ್ಲಿ, ಅದಕ್ಕೂ ಬಹುಮಾನ ನೀಡಲಾಗುತ್ತದೆ.
ಇನ್ನು ಈ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ ನಡೆಯಲಿದ್ದು, ಆಫೀಸು ಕೆಲಸಕ್ಕೆ ಹೋಗುವವರು ಕೂಡ, ಆರಾಮವಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಕಾರ್ ಪಾರ್ಕಿಂಗ್‌ಗೆ ಕೂಡ ಜಾಗವಿದೆ. ಬೆಳಿಗ್ಗೆ 9 ಗಂಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಪ್ರವೇಶ ಕೂಡ ಉಚಿತವಿರಲಿದೆ. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಇದರ ಲಾಭ ಪಡೆದುಕೊಳ್ಳಬಹುದು.