ನಟಿ ಪಾಯಲ್ ಚಂಗಪ್ಪ, ತಮ್ಮ ಸಿನಿ ಜರ್ನಿ ಬಗ್ಗೆ, ಅಮೃತಾಂಜನ್ ಸಿನಿಮಾ ಬಗ್ಗೆ, ತಾವು ಸಿನಿಮಾ ಇಂಡಸ್ಟ್ರಿಗೆ ಬಂದ ಬಗ್ಗೆ, ತಮಗೆ ಮದುವೆಯಾಗುವ ಹುಡುಗನಲ್ಲಿರಬೇಕಾದ ಗುಣಗಳ ಬಗ್ಗೆ ಮಾತನಾಡಿದ್ದಾರೆ. ಇಷ್ಟೇ ಅಲ್ಲದೇ, ಪಾಯಲ್‌ಗೆ ಎಷ್ಟು ಜನ ಪ್ರಪೋಸ್ ಮಾಡಿದ್ದಾರೆ. ಅವರಿ ಹಿಂದೆ ಎಷ್ಟು ಹುಡುಗರು ಬಿದ್ದಿದ್ದಾರೆ ಅನ್ನೋ ಬಗ್ಗೆಯೂ ಪಾಯಲ್ ಸಿಕ್ರೇಟ್ ರಿವೀಲ್ ಮಾಡಿದ್ದಾರೆ.
ಈ ಬಗ್ಗೆ ಪಾಯಲ್ ತುಂಬಾ ಫನ್ನಿ ವಿಷಯವನ್ನ ಹೇಳಿದ್ದಾರೆ. ಇವರಿಗೆ 7ನೇ ಕ್ಲಾಸ್ ಹುಡುಗ ಪ್ರಪೋಸ್ ಮಾಡಿದ್ನಂತೆ. ನಾನು ನಿನ್ನ ಅಕ್ಕ ಇದ್ದಂಗೆ ಕಣೋ ಅಂತಾ ಹೇಳಿದ್ರೂ, ಪರ್ವಾಗಿಲ್ಲಾ ಅಂದಿದ್ನಂತೆ ಆ ಹುಡುಗ. ಇನ್ನು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿರುವ ಪಾಾಯಲ್, ಕನ್ನಡ ಸಿನಿಮಾ ಬಗ್ಗೆ ಕೆಲವರಿಗೆ ಕೀಳರಿಮೆ ಇತ್ತು. ಅದು ಸುಳ್ಳು ಅನ್ನೋದನ್ನ ಪ್ರಶಾಂತ್ ನೀಲ್ ಸರ್ ಮತ್ತು ಯಶ್ ಸರ್ ಸಾಬೀತು ಪಡಿಸಿದ್ದಾರೆ ಅಂತಾ ಹೆಮ್ಮೆ ಪಟ್ಟಿದ್ದಾರೆ ಪಾಯಲ್.
ಅಲ್ಲದೇ ನಾನು ಕೆಜಿಎಫ್ ಸಿನಿಮಾ ನೋಡುತ್ತಿದ್ದಾಗ, ಶ್ರೀನಿಧಿ ಶೆಟ್ಟಿಯವರ ನಟನೆ ನೋಡಿ, ನಾನಲ್ಲಿ ಇರಬಾರದಿತ್ತಾ ಅಂತಾ ಅನ್ನಿಸ್ತಾ ಇತ್ತು. ನನಗೆ ಯಶ್ ಸರ್ ಫೇವರಿಟ್ ಆಗಿರುವುದರಿಂದ, ನಾನು ಅವರ ಜೊತೆ ಅಂಥಾದ್ದೊಂದು ಸಿನಿಮಾದಲ್ಲಿ ನಟಿಸೋಕ್ಕೆ ಇಷ್ಟಪಡ್ತೀನಿ. ಆದಷ್ಟು ಬೇಗ ನಾನು ಪ್ಯಾನ್ ಇಂಡಿಯನ್ ಸಿನಿಮಾದಲ್ಲಿ ನಟಿಸೋ ಹಾಗೆ ಆಗಲಿ ಅಂತಾ ವಿಶ್ ಮಾಡಿದ್ದಾರೆ ಪಾಯಲ್.