Thursday, November 27, 2025

Latest Posts

ಇದು ಪೆನ್ಸಿಲ್ ಮತ್ತು ರಬ್ಬರ್ ಕಥೆ..

- Advertisement -

ಪೆನ್ಸಿಲ್ನಿಂದ ನಾವು ಬರೆಯುತ್ತೇವೆ. ಮತ್ತು ರಬ್ಬರ್‌ನಿಂದ ತಪ್ಪಾದ ಅಕ್ಷರವನ್ನು ನಾವು ಅಳಿಸುತ್ತೇವೆ. ಬದುಕು ಅನ್ನೋದು ಪೆನ್ಸಿಲ್‌ ಇದ್ದ ಹಾಗೆ. ಅಲ್ಲಿ ತಪ್ಪಾಗುತ್ತದೆ. ಆದ ತಪ್ಪನ್ನ ರಬ್ಬರ್ ರೀತಿ ಅಳಿಸಿ ಹಾಕಿ, ಹೊಸತಾಗಿ ಬರೆಯುವುದೇ ಜಾಣತನ. ಇಂದು ನಾವು ಈ ಪೆನ್ಸಿಲ್ ಮತ್ತು ರಬ್ಬರ್‌ಗೆ ಸಂಬಂಧ ಪಟ್ಟ ಕಥೆಯೊಂದನ್ನ ಹೇಳಲಿದ್ದೇವೆ.

ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?

ಪೆನ್ಸಿಲ್ ರಬ್ಬರ್ ಬಳಿ ಕ್ಷಮೆ ಕೇಳುತ್ತದೆ. ಅದಕ್ಕೆ ರಬ್ಬರ್, ಯಾಕೆ ನೀನು ನನ್ನ ಬಳಿ ಕ್ಷಮೆ ಕೇಳುತ್ತಿದ್ದಿ..? ನೀನೇನು ತಪ್ಪು ಮಾಡಿದ್ದಿ..? ಎಂದು ಕೇಳುತ್ತದೆ. ಅದಕ್ಕೆ ಪೆನ್ಸಿಲ್, ನನ್ನಿಂದಾಗಿ ನಿನಗೆ ಅದೆಷ್ಟು ನೋವಾಗುತ್ತದೆ..? ನಾನು ತಪ್ಪು ತಪ್ಪು ಬರೆದಾಗೆಲ್ಲ, ಜನ ನಿನ್ನನ್ನು ಬಳಸಿ, ನಿನ್ನ ಚರ್ಮವನ್ನು ಸುಲಿಯುತ್ತಾರೆ. ಆಗ ನಿನಗೆ ನೋವಾಗುತ್ತದೆ. ನನ್ನಿಂದಾಗಿ ನೀನು ಕ್ಷಣ ಕ್ಷಣಕ್ಕೂ ಸಣ್ಣದಾಗುತ್ತಾ ಹೋಗುತ್ತಿ. ಹಾಗಾಗಿ ನಿನ್ನ ಬಳಿ ನಾನು ಕ್ಷಮೆ ಕೇಳಿದೆ ಎಂದು ಹೇಳುತ್ತದೆ.

ಅದಕ್ಕೆ ರಬ್ಬರ್, ಹೌದು ಅದು ನಿಜ. ಆದರೆ ನನಗೇನೂ ಬೇಸರವಿಲ್ಲ. ಅದು ನನ್ನ ಕೆಲಸ. ನಾನು ಮಾಡಲೇಬೇಕು. ನಿನ್ನ ತಪ್ಪನ್ನು ಅಳಿಸಿಹಾಕಲೆಂದೇ ನನ್ನನ್ನು ಸೃಷ್ಟಿಸಿದ್ದಾರೆ. ಒಂದಲ್ಲ ಒಂದು ದಿನ ನಾನು ಹೀಗೆ ಕರಗಿ ಹೋಗುತ್ತದೆ. ನನ್ನ ಸ್ಥಳಕ್ಕೆ ಇನ್ನೊಂದು ರಬ್ಬರ್ ಬರುತ್ತದೆ. ಈ ಸತ್ಯ ನನಗೆ ಈಗಾಗಲೇ ಗೊತ್ತಿದೆ. ಹಾಗಾಗಿ ನನ್ನ ಕೆಲಸದ ಬಗ್ಗೆ ನನಗೆ ಖುಷಿ ಇದೆ. ಹಾಗಾಗಿ ನೀನು ಈ ಬಗ್ಗೆ ಚಿಂತಿಸಬೇಡ. ನೀನು ಹೀಗೆ ಬೇರಸವಾಗಿರುವುದನ್ನ ನೋಡಲು ನನಗೆ ಬೇಸರವಾಗುತ್ತದೆ ಎಂದು ಹೇಳುತ್ತದೆ.

ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ (OIL PULLING) ಏನು ಲಾಭ..?

ಇಲ್ಲಿ ಪೆನ್ಸಿಲ್ ಎಂದರೆ ಮಕ್ಕಳು, ರಬ್ಬರ್ ಎಂದರೆ ಅಪ್ಪ ಅಮ್ಮ. ಪೆನ್ಸಿಲ್ ಮಾಡುವ ತಪ್ಪನ್ನು ರಬ್ಬರ್ ಅಳಿಸಿ ಹಾಕುತ್ತದೆ. ಅಂತೆಯೇ, ಮಕ್ಕಳು ಮಾಡಿದ ತಪ್ಪನ್ನು ಅಪ್ಪ ಅಮ್ಮ ತಿದ್ದುತ್ತಾರೆ. ನಿಮ್ಮ ಆರೈಕೆ ಮಾಡುತ್ತ, ಅವರಿಗೆ ವಯಸ್ಸಾಗುತ್ತದೆ. ಆದರೆ ಕೊನೆಯವರೆಗೂ ನಿಮ್ಮ ಒಳಿತನ್ನೇ ಬಯಸುತ್ತಾರೆ. ಕೊನೆಯವರೆಗೂ ನಿಮ್ಮ ತಪ್ಪನ್ನು ತಿದ್ದುತ್ತಲೇ ಇರುತ್ತಾರೆ. ಹಾಗಾಗಿ ನಿಮ್ಮ ತಂದೆ ತಾಯಿಯನ್ನು ಗೌರವಿಸಿ.

ಜಿಮ್ ಹೋಗುವುದರಿಂದ ಆಗುವ ನಷ್ಟವೇನು ಗೊತ್ತಾ..?

- Advertisement -

Latest Posts

Don't Miss