Thursday, April 24, 2025

Latest Posts

ಇಲ್ಲಿನ ಜನ ತಮ್ಮ ಮಕ್ಕಳನ್ನು ನಾಯಿಯೊಂದಿಗೆ ವಿವಾಹ ಮಾಡಿಸುತ್ತಾರೆ..

- Advertisement -

Spiritual: ಭಾರತದಲ್ಲಿ ಹಲವು ಕಡೆ ಚಿತ್ರ ವಿಚಿತ್ರ ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ ತಮ್ಮ ಮಕ್ಕಳನ್ನು ನಾಯಿಯ ಜೊತೆ ಮದುವೆ ಮಾಡಿಕೊಡುವ ಪದ್ಧತಿಯೂ ಒಂದು. ಇದು ಕೇಳಲು ವಿಚಿತ್ರವಾದರೂ, ನಿಜವಾಗಿ ನಡೆಯುತ್ತಿದೆ. ಹಾಗಾದ್ರೆ ಯಾಕೆ ಈ ಜನ ತಮ್ಮ ಮಕ್ಕಳಿಗೆ ನಾಯಿಯೊಂದಿಗೆ ವಿವಾಹ ಮಾಡುತ್ತಾರೆ..? ಇದರ ಹಿಂದಿರುವ ಕಾರಣವೇನು..? ಈ ಪದ್ಧತಿ ನಡೆಯುವುದಾದರೂ ಎಲ್ಲಿ..? ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

ಓರಿಸ್ಸಾ ಮತ್ತು ಜಾರ್ಖಂಡ್ ಸೇರಿ ಕೆಲ ಬುಡಕಟ್ಟು ಜನಾಂಗದವರು ತಮ್ಮ ಮಕ್ಕಳನ್ನು ನಾಯಿಯೊಂದಿಗೆ ಮದುವೆ ಮಾಡಿಸುತ್ತಾರೆ. ಆದರೆ ಎಲ್ಲ ಮಕ್ಕಳಿಗೂ ಮದುವೆ ಮಾಡಿಸುವುದಿಲ್ಲ. ಮೊದಲು ಮೇಲಿನ ಹಲ್ಲು ಯಾವ ಮಗುವಿಗೆ ಬಂದಿರುತ್ತದೆಯೋ, ಅಂಥ ಮಕ್ಕಳನ್ನು ಮಾತ್ರ ನಾಯಿಯೊಂದಿಗೆ ವಿವಾಹ ಮಾಡಿಸಲಾಗುತ್ತದೆ. ಏಕೆಂದರೆ, ಯಾವ ಮಗುವಿಗೆ ಮೇಲಿನ ಹಲ್ಲು ಮೊದಲು ಬರುತ್ತದೆಯೋ, ಅಂಥ ಮಕ್ಕಳು ಕೆಲ ದೋಷಗಳಿಗೆ ಈಡಾಗುತ್ತಾರೆ.  ಹಾಗೆ ಆಗಬಾರದು. ಮಕ್ಕಳಿಗೆ ಯಾವುದೇ ದೋಷ ತಗುಲಬಾರದು ಅನ್ನೋ ಕಾರಣಕ್ಕೆ, ಹೀಗೆ ಮದುವೆ ಮಾಡಿಸಲಾಗುತ್ತದೆ.

ಹಿಂದೂಗಳ ಹೊಸ ವರ್ಷಕ್ಕೂ ಮುನ್ನ, ಅಂದರೆ ಸಂಕ್ರಾಂತಿ ಅಥವಾ ಹೋಳಿ ಹಬ್ಬದಂದು ಇಂಥ ಮದುವೆಗೆ ಮುಹೂರ್ತ ನಿಗದಿ ಮಾಡಲಾಗುತ್ತದೆ. ಈ ದಿನ ಹಲವು ಮಕ್ಕಳಿಗೆ ಒಂದೇ ಬಾರಿಗೆ, ಅವರ ಸಂಪ್ರದಾಯದ ಪ್ರಕಾರ ನಾಯಿಯೊಂದಿಗೆ ಮದುವೆ ಮಾಡಿಸಲಾಗುತ್ತದೆ. ಹೆಣ್ಣು ಮಕ್ಕಳಿಗೆ ಗಂಡು ನಾಯಿಯೊಂದಿಗೆ ಮತ್ತು ಗಂಡು ಮಕ್ಕಳಿಗೆ ಹೆಣ್ಣು ನಾಯಿಯೊಂದಿಗೆ ಮದುವೆ ಮಾಡಿಸಲಾಗುತ್ತದೆ. ನಂತರ ಆ ಮಕ್ಕಳನ್ನು ಮನೆಗೆ ಕರೆದೊಯ್ದು, ಸಿಹಿ ಅಡಿಗೆ ಮಾಡಿ. ಊಟ ಬಡಿಸಲಾಗುತ್ತದೆ.

ಹಿಂದೂಗಳು ಚಾರ್ ಧಾಮ್ ಯಾತ್ರೆ ಮಾಡಲೇಬೇಕು ಅಂತಾ ಹೇಳೋದು ಯಾಕೆ..?

ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಸಿಗುತ್ತದೆ ಈ ಸೂಚನೆ..

ಈ ಪಾಪ ಮಾಡಿದ್ರೆ, ಪ್ರಾಣಿಗಳ ಯೋನಿಯಲ್ಲಿ ಜನ್ಮ ಸಿಗುತ್ತಂತೆ..

- Advertisement -

Latest Posts

Don't Miss