Friday, November 22, 2024

Latest Posts

ಸಕ್ಕರೆ ಖಾಯಿಲೆ ಇರುವವರೂ ಈ ಹಣ್ಣುಗಳನ್ನು ತಿನ್ನಬಹುದು..

- Advertisement -

Health tips: ಸಕ್ಕರೆ ಖಾಯಿಲೆ ಇರುವವರಿಗೆ ಕೆಲವು ಹಣ್ಣುಗಳನ್ನು ಸಹ ತಿನ್ನಬಾರದು ಅಂತಾ ಹೇಳಲಾಗುತ್ತದೆ. ಏಕೆಂದರೆ, ಆ ಹಣ್ಣುಗಳ ಸೇವನೆಯಿಂದ ಶುಗರ್ ಹೆಚ್ಚುತ್ತದೆ. ಮಾವಿನ ಹಣ್ಣು, ಹಲಸಿನ ಹಣ್ಣು ಸೇವನೆ ಮಾಡಿದರೆ, ಸಕ್ಕರೆ ಖಾಯಿಲೆ ಹೆಚ್ಚುತ್ತದೆ. ಹಾಗಾದ್ರೆ ಸಕ್ಕರೆ ಖಾಯಿಲೆ ಇದ್ದವರು, ಯಾವ ಹಣ್ಣುಗಳ ಸೇವನೆ ಮಾಡಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ನೇರಳೆ ಹಣ್ಣು. ನೇರಳೆ ಹಣ್ಣಿನ ಬೀಜದ ಪುಡಿಯನ್ನು ಸಕ್ಕರೆ ಖಾಯಿಲೆ ಇದ್ದವರಿಗೆ ಔಷಧವಾಗಿ ನೀಡುತ್‌ತಾರೆ. ಅದೇ ರೀತಿ ನೇರಳೆಹಣ್ಣು ಕೂಡ ಶುಗರ್ ಇದ್ದವರಿಗೆ ಉತ್ತಮ ಹಣ್ಣಾಗಿದೆ.

ಬಟರ್ ಫ್ರೂಟ್. ಬಟರ್‌ ಫ್ರೂಟ್ ಸಲಾಡ್ ಮಾಡಿ ತಿನ್ನಬಹುದು. ಅಥವಾ ಮಿಲ್ಕ್ ಶೇಕ್ ಮಾಡಿ ಕುಡಿಯಬಹುದು. ಇದು ಶುಗರ್ ಇದ್ದವರಿಗೆ ಉತ್ತಮ ಆಹಾರ.

ಪಿಯರ್ಸ್ ಹಣ್ಣು. ಕೊಂಚ ಆ್ಯಪಲ್ ರುಚಿಯನ್ನೇ ಹೊಂದಿರುವ ಪಿಯರ್‌ಸ್ ಹಣ್ಣು ಧಾರಾಳವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಶುಗರ ಇದ್ದವರು ಇದರ ಸೇವನೆ ಮಾಡಬಹುದು.

ಮೊಸಂಬಿ. ಜ್ವರ ಬಂದವರು, ಬೇರೆ ಬೇರೆ ಖಾಯಿಲೆಯಿಂದ ಬಳಸುತ್ತಿರುವವರು ಯಾರೂ ಬೇಕಾದರೂ ಸೇವಿಸಬಹುದಾದ ಹಣ್ಣು ಎಂದರೆ ಮೊಸಂಬಿ. ಮೊಸಂಬಿ ಹಣ್ಣಿನ ರಸ ತೆಗೆದು ಕುಡಿಯುವ ಬದಲು, ಹಣ್ಣನ್ನೇ ತಿಂದರೆ, ನಾರಿನಂಶ ಹೆಚ್ಚಾಗಿ ಸಿಗುತ್ತದೆ.

ಪಪ್ಪಾಯಿ. ಪಪ್ಪಾಯಿ ಎಷ್ಟು ರುಚಿಕರವೋ, ಅಷ್ಟೇ ಆರೋಗ್ಯಕರ ಹಣ್ಣು. ಇದರ ಸೇವನೆಯಿಂದ ಸೌಂದರ್ಯ, ಆರೋಗ್ಯ ಅಭಿವೃದ್ಧಿ ಎರಡೂ ಆಗುತ್ತದೆ. ಪಪ್ಪಾಯಿ ಹಣ್ಣನ್ನು ಸಕ್ಕರೆ ಖಾಯಿಲೆ ಇದ್ದವರು ಮಿತವಾಗಿ ತಿನ್ನಬಹುದು.

ಕಿವಿ ಫ್ರೂಟ್. ಕಿವಿ ಫ್ರೂಟ್ ಎಷ್ಟು ಉತ್ತಮ ಹಣ್ಣು ಅನ್ನೋದು ಎಲ್ಲರಿಗೂ ಗೊತ್ತು. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ, ಶುಗರ್ ಇದ್ದವರು ಇದರ ಸೇವನೆ ಮಾಡಿದರೆ, ಶುಗರ್ ಕಂಟ್ರೋಲಿಗೆ ಬರುತ್ತದೆ.

ಜಂಬು ನೇರಳೆ ಹಣ್ಣು. ಇದರಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಇದು ಅಷ್ಟು ಸಿಹಿಯಾಗಿ ಇರುವುದಿಲ್ಲ. ಆದರೂ ರುಚಿಯಾಗಿರುತ್ತದೆ. ದಿನಕ್ಕೆ ಎರಡು ಜಂಬು ನೇರಳೆ ಹಣ್ಣು ತಿನ್‌ನಬಹುದು. ಇದು ಮಧುಮೇಹಿಗಳ ಆರೋಗ್ಯಕ್ಕೆ ಉತ್ತಮವಾಗಿದೆ.

ಮೂಗುತಿ ಹಾಕುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

ಮಗುವಾದ ಬಳಿಕ ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ..

40 ವಯಸ್ಸಾದ ಬಳಿಕ ಗರ್ಭಿಣಿಯಾದರೆ, ಯಾವೆಲ್ಲ ಸಮಸ್ಯೆಗಳು ಬರುತ್ತದೆ..?

- Advertisement -

Latest Posts

Don't Miss