Friday, November 22, 2024

Latest Posts

ಸಕ್ಕರೆ ಖಾಯಿಲೆ ಇದ್ದವರು ಈ 6 ಆಹಾರಗಳನ್ನು ಎಂದಿಗೂ ಸೇವಿಸಬಾರದು..

- Advertisement -

Health: ಸಕ್ಕರೆ ಖಾಯಿಲೆ ಅನ್ನೋದು ಎಷ್ಟು ಅಪಾಯಕಾರಿ ಖಾಯಿಲೆ ಎಂದರೆ, ಸಕ್ಕರೆ ಅಂಶ ಅಗತ್ಯಕ್ಕಿಂತ ಹೆಚ್ಚಾಗಿದ್ದಲ್ಲಿ, ಕಾಲು ಕತ್ತರಿಸುವ ಪರಿಸ್ಥಿತಿ ಬರುತ್ತದೆ. ಆದರೆ ಈಗ ಹಲವಾರು ಡಯಟ್, ಔಷಧಿಗಳು ಬಂದಿರುವ ಕಾರಣ, ಸ್ವಲ್ಪ ನಿಗಾ ವಹಿಸಿದರೂ, ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಆದರೆ ಸಕ್ಕರೆ ಖಾಯಿಲೆ ಉಳ್ಳವರು, ಕೆಲವು ಆಹಾರವನ್ನು ಸೇವಿಸಬಾರದು. ಯಾವುದು ಆ ಆಹಾರ ಅಂತಾ ತಿಳಿಯೋಣ ಬನ್ನಿ..

ಒಣದ್ರಾಕ್ಷಿ. ಡ್ರೈಫ್ರೂಟ್ಸ್ ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಸಕ್ಕರೆ ಖಾಯಿಲೆ ಉಳ್ಳವರು ಮಾತ್ರ ಒಣದ್ರಾಕ್ಷಿಯನ್ನು ಸೇವಿಸಬಾರದು. ಏಕೆಂದರೆ, ಇದು ಸಿಹಿಯಾಗಿರುತ್ತದೆ. ಒಣದ್ರಾಕ್ಷಿ ಸೇವನೆಯಿಂದ, ದೇಹದಲ್ಲಿ ಶುಗರ್ ಲೆವಲ್ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ಒಣದ್ರಾಕ್ಷಿ ಸೇವನೆ ಉತ್ತಮವಲ್ಲ.

ಆಲೂಗಡ್ಡೆ. ಆಲೂಗಡ್ಡೆಯಿಂದ ಮಾಡಿದ ಪಲ್ಯ, ಸಾಂಬಾರ್, ಚಿಪ್ಸ್, ಫ್ರೆಂಚ್‌ಫ್ರೈಸ್‌ನಂಥ ತಿಂಡಿಗಳನ್ನು ಸಕ್ಕರೆ ಖಾಯಿಲೆ ಇದ್ದವರು, ಅಗತ್ಯಕ್ಕಿಂತ ಹೆಚ್ಚು ಸೇವನೆ ಮಾಡಿದ್ದಲ್ಲಿ, ಸಂಧಿವಾತದಂಥ ಸಮಸ್ಯೆ ಅನುಭವಿಸಬೇಕಾಗುತ್ತದೆ. ಅಲ್ಲದೇ, ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಸಕ್ಕರೆ ಖಾಯಿಲೆ ಇದ್ದವರು ಆಲೂಗಡ್ಡೆಯನ್ನು ಕಡಿಮೆ ಬಳಕೆ ಮಾಡಿ.

ಚಿಕ್ಕುಹಣ್ಣು. ಚಿಕ್ಕು ಹಣ್ಣು ನ್ಯಾಚುರಲ್ ಆಗಿ ಸಿಹಿಯಾದ, ಸಖತ್‌ ಟೇಸ್ಟಿಯಾಗಿರುವ ಹಣ್ಣು. ಇದನ್ನು ಕಂಡ ತಕ್ಷಣ ತಿನ್ನಬೇಕು ಅನ್ನಿಸುವ ಹಣ್ಣು. ಆದರೆ ಸಕ್ಕರೆ ಖಾಯಿಲೆ ಉಳ್ಳವರು, ಇದರಿಂದ ದೂರವಿದ್ದಷ್ಟು ಉತ್ತಮ. ಚಿಕ್ಕು ಹಣ್ಣು ಸಿಹಿ ಇರುವ ಕಾರಣಕ್ಕೆ, ಇದು ದೇಹದಲ್ಲಿ ಸಕ್ಕರೆ ಅಂಶ ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮಗೆ ಚಿಕ್ಕು ತಿನ್ನಲೇಬೇಕು ಎನ್ನಿಸಿದ್ದಲ್ಲಿ, ಸಣ್ಣ ತುಂಡು ಸೇವಿಸಬಹುದು.

ಮೈದಾ ಮತ್ತು ಮೈದಾದಿಂದ ಮಾಡಿದ ತಿಂಡಿ. ಮೈದಾದಿಂದಲೇ ಹಲವು ಸ್ನ್ಯಾಕ್ಸ್‌ಗಳನ್ನು ಮಾಡ್ತಾರೆ. ಬ್ರೆಡ್‌ ಸಹ ಮೈದಾದಿಂದಲೇ ಮಾಡೋದು. ಹಾಗಾಗಿ ಸಕ್ಕರೆ ಖಾಯಿಲೆ ಉಳ್ಳವರು, ಮೈದಾ ಸೇವನೆ ಅಗತ್ಯಕ್ಕಿಂತ ಹೆಚ್ಚು ಮಾಡಿದ್ರೆ, ಸಕ್ಕರೆ ಅಂಶ ಹೆಚ್ಚಾಗುತ್ತದೆ. ಬರೀ ಶುಗರ್ ಇದ್ದವರು ಮಾತ್ರವಲ್ಲ, ಸಾಮಾನ್ಯರು ಕೂಡ ಮೈದಾ ಸೇವನೆ ಮಾಡುವುದನ್ನ ನಿಲ್ಲಿಸಬೇಕು. ಏಕೆಂದರೆ, ಇದರಲ್ಲಿ ಯಾವುದೇ ಪೌಷ್ಟಿಂಕಾಶಗಳು ಇರುವುದಿಲ್ಲ.

ಅನ್ನ. ಅದರಲ್ಲೂ ಬಿಳಿ ಅಕ್ಕಿಯಿಂದ ತಯಾರಿಸಿದ ಅನ್ನದಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್‌ಗಳು ಇರುತ್ತದೆ. ಈ ಕಾರಣಕ್ಕೆ, ಇದು ದೇಹದಲ್ಲಿ ಸಕ್ಕರೆ ಅಂಶ ಹೆಚ್ಚು ಆಗಲು ಕಾರಣವಾಗುತ್ತದೆ. ಆದ್ದರಿಂದ ಬಿಳಿ ಅನ್ನ, ಬಿಳಿ ಅನ್ನದಿಂದ ಮಾಡಿದ ಖಾದ್ಯಗಳನ್ನ ಶುಗರ್ ಇದ್ದವರು ಹೆಚ್ಚು ಸೇವಿಸಬಾರದು. ಅದರ ಬದಲು ಕೆಂಪಕ್ಕಿ ಅನ್ನ, ಕುಚಲಕ್ಕಿ ಅನ್ನದ ಸೇವನೆ ಅತ್ಯುತ್ತಮ.

ಫುಲ್ ಫ್ಯಾಟ್ ಮಿಲ್ಕ್. ದಪ್ಪವಿರುವ ಹಾಲು ಅಥವಾ ಎಮ್ಮೆಯ ಹಾಲು, ಜರ್ಸಿ ದನದ ಹಾಲುಗಳು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಇಂಥ ಹಾಲನ್ನ, ಶುಗರ್ ಇದ್ದವರು ಕಡಿಮೆ ಸೇವಿಸಬೇಕು. ಅಥವಾ ಸೇವಿಸಲೇಬಾರದು. ಅದರ ಬದಲು, ದೇಸಿ ಹಸುಗಳ ಹಾಲಿನ ಸೇವನೆ ಅತ್ಯುತ್ತಮ.

ನಿಮ್ಮ ಮೂಳೆಯ ಆರೋಗ್ಯ ಸರಿಯಾಗಿ ಇರಬೇಕೆಂದಲ್ಲಿ, ಈ ವ್ಯಾಯಾಮ ಮಾಡಿ..

ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?

ಪ್ರತಿದಿನ ಒಂದು ಸ್ಪೂನ್ ಚೀಯಾಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

- Advertisement -

Latest Posts

Don't Miss