Friday, April 18, 2025

Latest Posts

ಪಿಜ್ಜಾ ಸಮೋಸಾ ರೆಸಿಪಿ

- Advertisement -

Recipe: ಸಮೋಸಾ ಎಂದರೆ ನಮಗೆಲ್ಲ ನೆನಪಿಗೆ ಬರೋದು ಆಲೂ ಸಮೋಸಾ. ಆದರೆ ಇಂದಿನ ಕಾಲದಲ್ಲಿ ವೆರೈಟಿ ವೆರೈಟಿ ಸಮೋಸ ಮಾರುಕಟ್ಟೆಗೆ ಬಂದಿದೆ. ನೂಡಲ್ಸ್ ಸಮೋಸಾ, ಪನೀರ್ ಸಮೋಸಾ, ಈರುಳ್ಳಿ ಸಮೋಸಾ ಹೀಗೆ ತರಹೇವಾರಿ ಸಮೋಸಾ ಮಾರಾಟ ಮಾಡಲಾಗುತ್ತಿದೆ. ಇಂದು ನಾವು ಇದೇ ರೀತಿ ಪಿಜ್ಜಾ ಸಮೋಸಾ ಮನೆಯಲ್ಲೇ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.

ಅರ್ಧ ಕಪ್ ಮೈದಾ, ಕಾಲು ಕಪ್ ರವಾ, ಅರ್ಧ ಸ್ಪೂನ್ ವೋಮ, ಚಿಟಿಕೆ ಸಕ್ಕರೆ ಪುಡಿ, ಕಾಲು ಕಪ್ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಇವಿಷ್ಟನ್ನು ಹಾಕಿ ಸಮೋಸಾ ಹಿಟ್ಟು ಕಲಿಸಿ.

ಪ್ಯಾನ್ ಬಿಸಿ ಮಾಡಿ, 2 ಎಣ್ಣೆ, 2 ಸ್ಪೂನ್ ಬೆಳ್ಳುಳ್ಳಿ, 1 ನೀರುಳ್ಳಿ, 1 ಕ್ಯಾಪ್ಸಿಕಂ, ಇವಿಷ್ಟನ್ನು ಹಾಕಿ ಚೆನ್ನಾಗಿ ಹುರಿಯಿರಿ. ಅರ್ಧ ಸ್ಪೂನ್ ಚಿಲ್ಲಿ ಫ್ಲೇಕ್ಸ್, ಅರ್ಧ ಸ್ಪೂನ್ ಆರ್ಗ್ಯಾನೋ ಹಾಕಿ ಮಿಕ್ಸ್ ಮಾಡಿ. ಈಗ 1 ಟೇಬಲ್ ಸ್ಪೂನ್ ಟೊಮೆಟೋ ಸಾಸ್, ಸಣ್ಣದಾಗಿ ಕಟ್ ಮಾಡಿದ ಚೀಸ್, ಚಿಟಿಕೆ ಬ್ಲ್ಯಾಕ್ ಪೆಪ್ಪರ್ ಪುಡಿ, ಚಿಟಿಕೆ ಉಪ್ಪು ಇವಿಷ್ಟನ್ನು ಸೇರಿಸಿ. ಈಗ ಫಿಲ್ಲಿಂಗ್ ರೆಡಿ.

ಸಮೋಸಾ ಮಾಡುವ ರೀತಿ, ಹಿಟ್ಟನ್ನು ಕಲಿಸಿ, ಅದರೊಳಗೆ ಈ ಫಿಲ್ಲಿಂಗ್ಸ್ ತುಂಬಿಸಿ, ಕಾದ ಎಣ್ಣೆಯಲ್ಲಿ ಕರೆದರೆ, ಪಿಜ್ಜಾ ಸಮೋಸಾ ರೆಡಿ.

Chawli Leaves : ಕೆಂಪು ದಂಡಿನ ಸೊಪ್ಪಿನ ಆರೋಗ್ಯಕರ ಪ್ರಯೋಜನಗಳೇನು ಗೊತ್ತಾ…?!

ಶ್ರೀಮಂತಿಕೆಗಾಗಿ ಚಾಣಕ್ಯನ 3 ರೂಲ್ಸ್ ತಿಳಿದುಕೊಳ್ಳಿ..

ವ್ಯಾಪಾರ ಅಭಿವೃದ್ಧಿಗೆ ಈ 4 ರೂಲ್ಸ್..

- Advertisement -

Latest Posts

Don't Miss