ನಿಮೋನಿಯಾ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತೆ ಎಚ್ಚರ!

Health Tips: ಮಗುವಿನ ಆರೈಕೆ ಹೇಗೆ ಮಾಡಬೇಕು. ಯಾವ ರೀತಿಯ ಆಹಾರ ನೀಡಬೇಕು, ಕಾಳಜಿ ಮಾಡಬೇಕು. ಮಗುವಿಗೆ ತಾಯಿಯ ಹಾಲು ಏಕೆ ಅಷ್ಟು ಮುಖ್ಯ ಅನ್ನೋ ಬಗ್ಗೆ ನಾವು ನಿಮಗೆ ಹಲವಾರು ಟಿಪ್ಸ್ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರು, ನಿಮೋನಿಯಾದಿಂದ ಮಕ್ಕಳನ್ನು ಹೇಗೆ ದೂರವಿಡಬಹುದು ಅನ್ನೋ ಬಗ್ಗೆ ವಿವರಿಸಿದ್ದಾರೆ.

ಈ ವಿಷಯದ ಬಗ್ಗೆ ವೈದ್ಯೆಯಾದ ಡಾ.ಸಹನಾ ದೇವದಾಸ್‌ ಅವರು ವಿವರಿಸಿದ್ದಾರೆ. ಮಕ್ಕಳನ್ನು ನಿಮೋನಿಯಾದಿಂದ ಕಾಪಾಡಬೇಕು ಅಂದ್ರೆ, ಅದಕ್ಕೆ 6 ತಿಂಗಳವರೆಗೂ ಎದದೆಹಾಲು ಉಣಿಸಬೇಕು. ಬಳಿಕ ಬೇರೆ ಬೇರೆ ಪೌಷ್ಟಿಕಾಂಶ ಭರಿತವಾದ ಆಹಾರದೊಂದಿಗೆ, 2 ವರ್ಷದವರೆಗೆ ಎದೆ ಹಾಲು ಕೊಡಬೇಕು. ಇದರಿಂದ ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ನಿಮೋನಿಯಾ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ಹಾಗಾಗಿ ಅಂಥ ರೋಗಗಳು ಮಗುವಿನ ದೇಹವನ್ನು ಸೇರಬಾರದು ಅಂದ್ರೆ, ಅದಕ್ಕೆ ರೋಗ ನಿರೋಧಕ ಶಕ್ತಿ ಇರಬೇಕು. ಇದು ತಾಯಿಯ ಹಾಲಿನಿಂದ ಮಗುವಿಗೆ ಸಿಗುತ್ತದೆ. ಆದ್ದರಿಂದಲೇ, ತಾಯಿ ನೀಡುವ ಎದೆ ಹಾಲು, ಮಗುವಿನ ಭವಿಷ್ಯವನ್ನು ಆರೋಗ್ಯಕರವಾಗಿ ಇರಿಸುತ್ತದೆ ಅಂತಾ ಹಿರಿಯರು ಹೇಳ್ತಾರೆ.

ಇನ್ನು ಮಗುವಿಗೆ ವಿಟಾಮಿನ್ ಎ ಹೆಚ್ಚಾಗಿರುವ ಆಹಾರವನ್ನು ನೀಡಬೇಕು. ಬೆಳಗ್ಗಿನ ತಿಳಿ ಬಿಸಿಲಿನಲ್ಲಿ ಹೋಗಿ, ಸೂರ್ಯನ ಬೆಳಕಿಗೆ ನಿಲ್ಲುವುದರಿಂದ, ದೇಹಕ್ಕೆ ವಿಟಾಮಿನ್ ಡಿ ಸಿಗುತ್ತದೆ. ಇದರಿಂದಲೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. 6 ತಿಂಗಳ ಬಳಿಕ, ಮಗುವಿಗೆ ಹಣ್ಣು, ತರಕಾರಿ, ಸೊಪ್ಪು, ಡ್ರೈಫ್ರೂಟ್ಸ್ ಎಲ್ಲವನ್ನೂ ತಿನ್ನಿಸಬೇಕು. ಹಣ್ಣಿನ ರಸ, ಬೇಯಿಸಿದ ತರಕಾರಿ, ಸೊಪ್ಪು, ಕಾಳನ್ನು ರುಬ್ಬಿ ಕೊಡಬೇಕು, ಡ್ರೈಫ್ರೂಟ್ಸ್ ನೆನೆಸಿ, ಅರೆದು ತಿನ್ನಿಸಬೇಕು. ಹೀಗೆ ಮಾಡುವುದರಿಂದ ಮಗು ಆರೋಗ್ಯಕರವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

About The Author