ನೀವು ಆಲೂ ಪಕೋಡಾ, ಗೋಬಿ ಪಕೋಡಾ, ಈರುಳ್ಳಿ ಪಕೋಡಾ ಹೀಗೆ ತರಕಾರಿಗಳ ಪಕೋಡಾ ಟೇಸ್ಟ್ ಮಾಡಿರ್ತೀರಾ. ಆದ್ರೆ ನೀವು ಅವಲಕ್ಕಿ ಪಕೋಡಾ ತಿಂದಿರೋದು ತುಂಬಾ ಅಪರೂಪ. ಹಾಗಾಗಿ ನಾವಿಂದು ಅವಲಕ್ಕಿ ಪಕೋಡಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ನೋಡೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ದಪ್ಪ ಅವಲಕ್ಕಿ, 1 ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ, ಜಿಂಜರ್, ಹಸಿಮೆಣಸಿನ ಪೇಸ್ಟ್ ಕೊಂಚ ಅರಿಶಿನ, ಕೊಂಚ ಜೀರಿಗೆ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಕೊಂಚ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಅರ್ಧ ಸ್ಪೂನ್ ನಿಂಬೆರಸ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಅವಲಕ್ಕಿಯನ್ನ ಚೆನ್ನಾಗಿ ತೊಳೆಯಿರಿ. ಇದಕ್ಕೆ ಬೇಯಿಸಿದ ಆಲೂಗಡ್ಡೆ, ಜಿಂಜರ್, ಹಸಿಮೆಣಸಿನ ಪೇಸ್ಟ್, ಉಪ್ಪು, ಗರಂ ಮಸಾಲೆ, ಅರಿಶಿನ, ಧನಿಯಾ ಪುಡಿ, ಖಾರದ ಪುಡಿ, ಜೀರಿಗೆ, ಈರುಳ್ಳಿ, ನಿಂಬೆರಸ, ಕೊತ್ತೊಂಬರಿ ಸೊಪ್ಪು ಇವಿಷ್ಟನ್ನ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನು ಉಂಡೆ ಮಾಡಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಅವಲಕ್ಕಿ ಪಕೋಡಾ ರೆಡಿ. ಚಟ್ನಿ ಅಥವಾ ಸಾಸ್‌ನೊಂದಿಗೆ ಇದನ್ನ ಸವಿಯಿರಿ.