- Advertisement -
Kundagola News: ಕುಂದಗೋಳ : ತಾಲೂಕಿನ ದೇವನೂರು ಗ್ರಾಮದ ಬೆಣ್ಣೆ ಹಳ್ಳದ ಹತ್ತಿರ ಇಸ್ಪೀಟ್ ಅಡ್ಡೆಯ ಮೇಲೆ ಕುಂದಗೋಳ ಠಾಣೆಯ ಪೊಲೀಸರು ದಾಳಿ ಮಾಡಿದ್ದು, 9 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ದಾಳಿ ಕಾಲಕ್ಕೆ ದೇವನೂರು ಗ್ರಾಮದ ನಾಗರಾಜ, ಉಮೇಶ್, ಶಿವಾನಂದ್, ಅರುಣ್, ಈರಣ್ಣಗೌಡ, ಶಿವಪ್ಪ, ಮಾಬುಸಾಬ್, ಹಂಚಿನಾಳ ಗ್ರಾಮದ ಮಹಾಂತೇಶ, ಫಕ್ಕಿರೇಶ ಎಂಬಾತರನ್ನು ವಶಕ್ಕೆ ಪಡೆದು, ಸಾವಿರಾರು ರೂಪಾಯಿ ನಗದು, ಜೂಜಾಟಕ್ಕೆ ಬಳಕೆ ಮಾಡಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಯೋಧ್ಯೆ ರಾಮಮಂದಿರ ನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದ ತಾಂಜೇನಿಯಾದ ಕಿಲಿ ಪೌಲ್
ಭಾರತಕ್ಕೆ ಮೋದಿ ಅತ್ಯುತ್ತಮ ನಾಯಕನೆಂದು ಮತ್ತೊಮ್ಮೆ ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್
- Advertisement -