Sunday, May 26, 2024

Latest Posts

ಇಂಥ ಘಟನೆ ನಡೆಯಲು ಪೊಲೀಸ್ ಕಮಿಷನರ್‌ ಕಾರಣ: ಮೊದಲು ರಿಸೈನ್ ಕೊಟ್ಟು ಹೋಗಲಿ: ನಿರಂಜನ್ ಹಿರೇಮಠ್

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ, ಅಂಥದ್ದೇ ಇನ್ನೊಂದು ಘಟನೆ ನಡೆದಿದ್ದು, ಅಂಜಲಿ ಎಂಬ ಯುವತಿಯನ್ನು ಕೊಲೆ ಮಾಡಲಾಗಿದೆ.

ಹುಬ್ಬಳ್ಳಿ ಕಿಮ್ಸ್ ಶವಾಗಾರದ ಬಳಿ ಮಾತನಾಡಿರುವ ನೇಹಾ ತಂದೆ ನಿರಂಜನ್ ಹಿರೇಮಠ್, ಗೃಹಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನ ವಾರ್ಡ್ ನಲ್ಲಿ ಇಂತಹ ಘಟನೆಯಾಗಿರುವದನ್ನ ನಾನು ಖಂಡಿಸುತ್ತೇನೆ. ನನ್ನ ಮಗಳು ನೇಹಾ ಹತ್ಯೆ ಆಗಿ ಇನ್ನೂ ತಿಂಗಳು ಕಳೆದಿಲ್ಲ. ಸದ್ಯ ನನ್ನ ವಾರ್ಡ್ ನಲ್ಲಿ ಈ ರೀತಿ ಮತ್ತೆ ಘಟನೆ ಆಗಿದೆ. ನನ್ನ ಮಗಳು ಹತ್ಯೆಯಾದಾಗ ಹೇಳಿದ್ದೆ ಇನ್ನೊಂದು ಈ ತರ ಘಟನೆಯಾಗಬಾರದು ಅಂತ. ಆದ್ರೂ ಇಂತಹ ಘಟನೆ ನಡೆದಿದೆ ಇದಕ್ಕೆ ಇಲ್ಲಿನ ಪೊಲೀಸ್ ಕಮೀಷನರ್ ಕಾರಣ ಎಂದು ನಿರಂಜನ್ ಆರೋಪಿಸಿದ್ದಾರೆ.

ಅವರನ್ನ ಟ್ರಾನ್ಪಪರ್ ಮಾಡಿ ಅಂತ ಅವಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದೆ. ಅವರು ಇಲ್ಲಿ ಇದ್ದು ಎನು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಸರಿಯಾಗಿ ಕೆಲಸ ಮಾಡಲು ಇಷ್ಟ ಇಲ್ಲದಿದ್ದರೇ ರಾಜೀನಾಮೆ ಕೊಟ್ಟು ಹೋಗಿ. ಅಂಜಲಿ ಕೂಡ ನನ್ನ ಮಗಳು ಇದ್ದಹಾಗೇ. ನನ್ನ ಮಗಳು ನೇಹಾಳ ಹತ್ಯೆ ವಿಚಾರವಾಗಿ ಯಾವ ರೀತಿ ಹೋರಾಟ ನಡೆದಿತ್ತು ಅದೇ ರೀತಿ ಇವಳ ಹತ್ಯೆಯನ್ನ ಖಂಡಿಸಿ. ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಎಲ್ಲ ಕಡೆ ಯುವಕರು ಗಾಂಜಾ ಅಫೀಮು ಅಂತ ದಾರಿ ತಪ್ಪುತಿದ್ದಾರೆ. ಹೀಗಾಗಿ ಹುಬ್ಬಳ್ಳಿ ಪೊಲೀಸರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಇದ್ರಿಂದ ಇಂತಹ ಕೊಲೆಗಳು ನಡೆಯುತ್ತಿವೆ ಎಂದು ಸರ್ಕಾರ ಹಾಗೂ ಹುಬ್ಬಳ್ಳಿ ಪೊಲೀಸರ ವಿರುದ್ದ ನಿರಂಂಜನ್ ಆಕ್ರೋಶ ಹೊರಹಾಕಿದ್ದಾರೆ.

Divorce case: ಕುರ್‌ಕುರೆ ತಂದುಕೊಟ್ಟಿಲ್ಲವೆಂದು ಪತಿಗೆ ಡಿವೋರ್ಸ್ ಕೊಡಲು ರೆಡಿಯಾದ ಪತ್ನಿ

ನಟಿ ಛಾಯಾಸಿಂಗ್ ಮನೆಯಲ್ಲಿ ಕಳ್ಳತನ: ಮನೆಕೆಲಸದಾಕೆಯೇ ಮಾಡಿದ್ದಾ ಕಿತಾಪತಿ..?

ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ರಾಜಕೀಯ ಪ್ರೇರಿತವಾದುದ್ದು: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss