Saturday, July 27, 2024

Latest Posts

ಪೊಲೀಸರ ವಿಚಾರಣೆ- ದರ್ಶನ್ ಹೇಳಿಕೆ ಪ್ರತಿಕ್ರಿಯೆ

- Advertisement -

Sandalwood News: ರೇಣುಕಾಸ್ವಾಮಿ ಕೇಸ್ ಪ್ರಕರಣದಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆಯ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿರುವ ದರ್ಶನ್ ಅವರು, ರೇಣುಕಾಸ್ವಾಮಿ ಅವರಿಗೆ ಹೆದರಿಸಲು ಮಾತ್ರ ನಾನು ಹೇಳಿದ್ದು. ಆದರೆ, ಕೊಲೆ ಮಾಡುವಂತೆ ಹೇಳಿಲ್ಲ. ಕೊಲೆಯಾಗಿರುವ ವಿಚಾರ ನನಗೆ ಈಗ ಗೊತ್ತಿಗಿದೆ. ನಾನು ಯಾವುದೇ ಸುಪಾರಿಯನ್ನು ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣ ತನಿಖೆ ನಡೆಸಿದ್ದು, ಮೊದಲು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದರು. ಇವರನ್ನು ವಿಚಾರಣೆ ನಡೆಸಿದಾಗ ನಟ ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೆ ಘಟನೆ ನಡೆಯುವ ವೇಳೆ ಸ್ಥಳದಲ್ಲಿ ನಟ ದರ್ಶನ್ ಕೂಡ​ ಇದ್ದರು ಎಂಬ ಮಾಹಿತಿ ಪೊಲೀಸರಿಗೆ ತಿಳಿದಿದೆ. ಈ ಕೊಲೆ ಪ್ರಕರಣದಲ್ಲಿ​​ ನಟ ದರ್ಶನ್​ ಸೇರಿದಂತೆ 10 ಜನರನ್ನು ವಿಜಯನಗರ ಎಸಿಪಿ ಚಂದನ್​ ತಂಡ ಬಂಧಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮೈಸೂರಿನ ಱಡಿಸನ್​ ಹೋಟೆಲ್​ನಲ್ಲಿ ದರ್ಶನ್​ ಅರೆಸ್ಟ್ ಮಾಡಲಾಗಿದ್ದು ನಟ ದರ್ಶನ್ ಸೇರಿದಂತೆ ಪಟ್ಟಣಗೆರೆ ಜಯಣ್ಣ ಪುತ್ರ ವಿನಯ್​, ಕಿರಣ್, ಮಧು, ಲಕ್ಷ್ಮಣ್​, ಆನಂದ್​​, ರಾಘವೇಂದ್ರ ಸೇರಿ 10 ಜನರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ದರ್ಶನ್ ಗೆಳತಿ ಪವಿತ್ರಾಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Sandalwood News: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್

ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಕಾರಣ, ರೇಣುಕಾಸ್ವಾಮಿಯ ಕೊ*ಲೆ..?

ಮೋದಿ ಕ್ಯಾಬಿನೆಟ್ 3.0: ಯಾರಿಗೆ ಯಾವ ಖಾತೆ?

- Advertisement -

Latest Posts

Don't Miss