Political News: ಬೆಳಗಾವಿಯ ಉದ್ಯಮಿಯೊಬ್ಬರನ್ನು ಅಪಹಿರಿಸಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದರಲ್ಲಿ ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಮಂಜುಳಾ ರಾಮನಗಟ್ಟಿ ಉದ್ಯಮಿಯೊಬ್ಬರನ್ನು ಕಿಡ್ನಾಪ್ ಮಾಡಿ ಹಿಂಡಲಗಾ ಜೈಲು ಸೇರಿದ್ದಾಳೆ.
ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಬಸವರಾಜ ಅಂಬಿ ಎನ್ನುವವರನ್ನು ಅಪಹರಿಸಿ 5ಕೋಟಿ ರೂಪಾಯಿ ಹಣಕ್ಕೆ ಮಂಜುಳಾ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಇನ್ನೂ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ನಿವಾಸಿಯಾಗಿರುವ ಮಂಜುಳಾ ಈ ಘಟನೆ ನಡೆದ ಬಳಿಕ ನಾಪತ್ತೆಯಾಗಿದ್ದಳು. ಪ್ರಕರಣದ ತನಿಖೆಗಿಳಿದ ಘಟಪ್ರಭಾ ಪೊಲೀಸರಿಗೆ ಕಿಡ್ನಾಪ್ ಕಿಂಗ್‌ಪಿನ್ ಮಂಜುಳಾ ಕಲಬುರಗಿಯಲ್ಲಿ ತಲೆ ಮರೆಸಿಕೊಂಡಿರುವ ಮಾಹಿತಿ ದೊರೆಯುತ್ತದೆ. ಬಳಿಕ ಇದೇ ಮಾಹಿತಿಯನ್ನು ಬೆನ್ನಟ್ಟಿ ಹೊರಟ ಪೊಲೀಸರು ಕೊನೆಗೆ ಮಂಜುಳಾ ರಾಮನಗಟ್ಟಿ ಹಾಗೂ ಗ್ಯಾಂಗ್‌ಅನ್ನು ಬಂಧಿಸಿದ್ದಾರೆ.
ಇನ್ನೂ ಈ ಪ್ರಕರಣದಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಪರಶುರಾಮ ಕಾಂಬಳೆ, ಯಮಕನಮರಡಿಯ ಯಲ್ಲೇಶ್ ವಾಲೀಕರ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖಾ ಹಂತದಲ್ಲಿರುವ ಈ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ಏಳಕ್ಕೆ ಏರಿದೆ. ಮಂಜುಳಾ, ಸಚಿವ ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಳು ಎನ್ನಲಾಗುತ್ತಿದೆ. ತನ್ನ ಮಗ ಈಶ್ವರ್ ರಾಮನಗಟ್ಟಿ ಮೂಲಕ ಉದ್ಯಮಿಯನ್ನು ಈ ಮಂಜುಳಾ ಕಿಡ್ನಾಪ್ ಮಾಡಿಸಿದ್ದಳು. ಅಲ್ಲದೆ ಸಿನಿಮೀಯ ರೀತಿಯಲ್ಲಿ ಕಳೆದ ಫೆಬ್ರವರಿ 20 ರಂದು ದಂಡಾಪುರ ಕ್ರಾಸ್ ಬಳಿ ಉದ್ಯಮಿ ಬಸವರಾಜ್ ಅವರನ್ನು ಆರೋಪಿಗಳು ಅಪಹರಿಸಿದ್ದರು.
ಈ ಕುರಿತು ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡಿದ್ದ ಘಟಪ್ರಭಾ ಪೊಲೀಸರು, ಗಂಭೀರವಾಗಿ ತನಿಖೆಯನ್ನು ಕೈಗೊಳ್ಳುವ ಮೂಲಕ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಅಲ್ಲದೆ ಉದ್ಯಮಿಯ ಕುಟುಂಬಸ್ಥರೂ ಸಹ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಅದೇನೇ ಇರಲಿ.. ಒಟ್ನಲ್ಲಿ… ಸಾಹುಕಾರ್ ಹೆಸರಲ್ಲಿ ಬೆಳಗಾಗುವಷ್ಟರಲ್ಲಿಯೇ ಕೋಟ್ಯಾಧಿಪತಿ, ಸಾಹುಕಾರ್ತಿ ಆಗಬೇಕೆಂತ ಕನಸು ಕಟ್ಟಿಕೊಂಡಿದ್ದ ಮಂಜುಳಾ ತನ್ನ ಹಣದಾಹದಿಂದ ಜೈಲು ಸೇರಿದ್ದು ಮಾತ್ರ ವಿಪರ್ಯಾಸ!.. ಅಲ್ಲದೆ ಈ ರೀತಿಯಲ್ಲಿ ತಮ್ಮ ಹೆಸರಿಗೆ ಕಳಂಕ ತರುವ ಐನಾತಿಗಳನ್ನೂ ಸಹ ಸಾಹುಕಾರರೂ ದೂರ ಇಟ್ಟಷ್ಟು ಅವರೂ ಸೇಫ್ ಆಗಿರುತ್ತಾರೆ ಅನ್ನೋದರಲ್ಲಿ ಅನುಮಾನವೇ ಇಲ್ಲ.