Recipe: ಆಲೂವನ್ನ ಬಳಸಿ ಮನೆಯಲ್ಲಿ ಟೇಸ್ಟಿಯಾಗಿರುವ ಚಾಟ್ ತಯಾರಿಸಬಹುದು. ಹಾಗಾದ್ರೆ ಈ ಚಾಟ್ ತಯಾರಿಸಲು ಏನೇನು ಸಾಮಗ್ರಿ ಬೇಕು. ಇದನ್ನು ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಮೊದಲು ಚಾಟ್‌ಗೆ ಬೇಕಾದ ಚಟ್ನಿ ತಯಾರಿಸಬೇಕು. ಗ್ಯಾಸ್ ಆನ್ ಮಾಡಿ ಪಾತ್ರೆ ಇರಿಸಿ ಇದಕ್ಕೆ ಎರಡು ಕಪ್ ನೀರು, 1 ಕಪ್ ಸಕ್ಕರೆ, 4 ಟೇಬಲ್ ಸ್ಪೂನ್ ಆಮ್ಚುರ್ ಪೌಡರ್, 1 ಟೇಬಲ್ ಸ್ಪೂನ್ ಜೀರಿಗೆ ಪುಡಿ, 1 ಟೇಬಲ್ ಸ್ಪೂನ್ ಖಾರದ ಪುಡಿ, ರುಚಿಗೆ ತಕ್ಕಷ್ಟು ಸೇಂಧವ ಲವಣ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಚೆನ್ನಾಗಿ ಕುದಿಸಬೇಕು. ಹೀಗೆ ಕುದಿಯುವಾಗ, ಸೌಟ್‌ನಿಂದ ಮಿಕ್ಸ್ ಮಾಡುತ್ತಿದ್ದರೆ, ಚಟ್ನಿ ತಳ ಹಿಡಿಯುವುದಿಲ್ಲ.
ಈ ಮಿಶ್ರಣ ಥಿಕ್ ಆದ ಬಳಿಕ, ಗ್ಯಾಸ್ ಆಫ್ ಮಾಡಿ. ಈಗ ಎಣ್ಣೆ ಕಾಯಲು ಇಟ್ಟು, ಎಣ್ಣೆ ಕಾದ ಬಳಿಕ, 5 ಸಿಪ್ಪೆ ತೆಗೆದು ಕತ್ತರಿಸಿದ ಆಲೂಗಡ್ಡೆಯನ್ನು ಎಣ್ಣೆಯಲ್ಲಿ ಕರಿಯಬೇಕು. ಹೀಗೆ ಎರಡು ಬಾರಿ ಆಲೂವನ್ನು ಕರಿಯಬೇಕು. ಆಗ ಆಲೂ ಕ್ರಿಸ್ಪಿಯಾಗುತ್ತದೆ. ಈಗ ಒಂದು ಬೌಲ್‌ಗೆ ಈ ಆಲೂಗಡ್ಡೆ, ರೆಡಿ ಮಾಡಿಕೊಂಡ ಚಟ್ನಿಯಲ್ಲಿ ಎರಡು ಸ್ಪೂನ್ ಚಟ್ನಿ, ಎರಡು ಸ್ಪೂನ್ ಮೊಸರು, ಸೇವ್, ದಾಳಿಂಬೆ, ಈರುಳ್ಳಿ, ಕೊತ್ತೊಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದ್ರೆ, ಆಲೂ ಚಾಟ್ ರೆಡಿ.
ಗೋಧಿ ಬಳಕೆಯಿಂದ ಆರೋಗ್ಯಕ್ಕಾಗುವ ಲಾಭವೇನು..? ಅತಿಯಾಗಿ ಚಪಾತಿ ತಿಂದರೆ ಏನಾಗತ್ತೆ..?

