ನಾವು ಈಗಾಗಲೇ ನಿಮಗೆ ಅಕ್ಕಿಹಿಟ್ಟಿನಿಂದ ತಯಾರಿಸಲ್ಪಡುವ ಹಲವು ಕ್ರಿಸ್ಪಿ ಸ್ನ್ಯಾಕ್ಸ್ ಬಗ್ಗೆ ಹೇಳಿದ್ದೇವೆ. ಇಂದು ಆಲೂಗಡ್ಡೆ ಮತ್ತು ಅಕ್ಕಿ ಹಿಟ್ಟು ಬಳಸಿ, ಯಾವ ಸ್ನ್ಯಾಕ್ಸ್ ತಯಾರು ಮಾಡಬಹುದು..? ಅದನ್ನು ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ, 3 ಹಸಿಮೆಣಸು, 6 ಎಸಳು ಬೆಳ್ಳುಳ್ಳಿ, 2 ಬೇಯಿಸಿ, ಮ್ಯಾಶ್ ಮಾಡಿದ ಆಲೂ, 1 ಸ್ಪೂನ್ ಚಿಲ್ಲಿ ಫ್ಲೇಕ್ಸ್, ಅರ್ಧ ಸ್ಪೂನ್ ಗರಂ ಮಸಾಲೆ ಪುಡಿ, ಅರ್ಧ ಸ್ಪೂನ್ ಚಾಟ್ ಮಸಾಲೆ, ಅರ್ಧ ಸ್ಪೂನ್ ಜೀರಿಗೆ, ಕಾಲು ಸ್ಪೂನ್ ಬೇಕಿಂಗ್ ಸೋಡಾ, ಕೊಂಚ ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಅಕ್ಕಿಯನ್ನ ಕ್ಲೀನ್ ಮಾಡಿ, 2 ಗಂಟೆ ನೆನೆಸಿ. ಮತ್ತೊಮ್ಮೆ ಕ್ಲೀನ್ ಮಾಡಿ, ಮಿಕ್ಸಿ ಜಾರ್‌ಗೆ ಹಾಕಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಸೇರಿಸಿ, ಸ್ಮೂತ್ ಪೇಸ್ಟ್ ಮಾಡಿ. ಇದಕ್ಕೆ ಬೇಯಿಸಿ, ಮ್ಯಾಶ್ ಮಾಡಿದ ಆಲೂ, ಚಿಲ್ಲಿ ಫ್ಲೇಕ್ಸ್, ಜೀರಿಗೆ, ಗರಂ ಮಸಾಲೆ, ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಬೇಕಿಂಗ್ ಸೋಡಾ, ಉಪ್ಪು ಇವಿಷ್ಟನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ, ವಡಾ ರೀತಿ ಕರಿಯಿರಿ.