ಪ್ರಮೋದ್ ಶೆಟ್ಟಿಯವರು ಸುಪ್ರೀತಾರನ್ನ ಮದುವೆಯಾಗಬೇಕಂದ್ರೆ, ಒಂದೊಳ್ಳೆ ಕೆಲಸ ಹುಡುಕಬೇಕಿತ್ತು. ಸುಪ್ರೀತಾ ಅದಾಗಲೇ ಸಿರಿಯಲ್‌ನಲ್ಲಿ ನಟಿಸುತ್ತಿದ್ದರು. ಪ್ರಮೋದ್ ರಂಗಭೂಮಿಯಲ್ಲಿದ್ದರು. ಹಾಗಾಗಿ ಹೆಣ್ಣು ಕೇಳಬೇಕಾದರೆ, ಪ್ರಮೋದ್ ಸಿರಿಯಲ್ ಮಾಡಲೇಬೇಕಾಯಿತು. ಆಗ ಹೊಸ ಸಿರಿಯಲ್‌ಗಾಗಿ ಆಡಿಶನ್ ನಡೆಯಬೇಕಾದರೆ, ಸುಪ್ರೀತಾ ಪ್ರಮೋದ್ ಅವರ ಫೋಟೋವನ್ನ ಡೈರೆಕ್ಟರ್‌ಗೆ ಕಳಿಸಿದ್ದಾರೆ.
ಫೋಟೋ ನೋಡಿದ ಡೈರೆಕ್ಟರ್ ಪ್ರಮೋದ್‌ಗೆ ಕಾಲ್ ಮಾಡಿ ಕರೆದು, ಕೆಲ ಡೈಲಾಗ್ ಹೇಳಲು ಹೇಳಿದ್ಧಾರೆ. ಪ್ರಮೋದ್ ಡೈಲಾಗ್ ಹೇಳುತ್ತಿದ್ದಂತೆ, ಡೈರೆಕ್ಟರ್ ನೀವು ಈ ಪಾತ್ರಕ್ಕೆ ಫಿಕ್ಸ್ ಅಂತಾ ಹೇಳಿದ್ದಾರೆ. ಇಲ್ಲಿಯೂ ಕೂಡ ಪ್ರಮೋದ್ ಒಂದು ಚಾನ್ಸ್ ಕೊಡಿ ಅಂತಾ ಕೇಳುವ ಪರಿಸ್ಥಿತಿ ತರಿಸಿಕೊಳ್ಳದೇ, ಅವಕಾಶ ಗಿಟ್ಟಿಸಿಕೊಂಡರು. ಹೀಗೆ ಪ್ರಮೋದ್ ಸಿರಿಯಲ್ ಜರ್ನಿ ಶುರುವಾಯ್ತು. ಲಕುಮಿ ಅನ್ನುವ ಪಾತ್ರದಲ್ಲಿ ಪಾಪಣ್ಣ ಅನ್ನುವ ವಿಲನ್ ರೋಲ್‌ನಲ್ಲಿ ಪ್ರಮೋದ್ ಕಾಣಿಸಿಕೊಂಡಿದ್ದರು.
ಇದಾದ ಬಳಿಕ ಪ್ರಮೋದ್ ಎಷ್ಟು ಬ್ಯುಸಿ ಆದ್ರೂ ಅಂದ್ರೆ, ತಿಂಗಳಿಗೆ 5 ಸಿರಿಯಲ್ ಮಾಡೋಕ್ಕೆ ಶುರು ಮಾಡಿದ್ರು. ಇಡೀ ದಿನ ಶೂಟಿಂಗ್‌ನಲ್ಲೇ ಇರುವಂತಾಯಿತು. ಹೀಗೆ ಶೂಟಿಂಗ್ ಮಾಡಿ ಮಾಡಿ, ಪ್ರಮೋದ್‌ಗೆ ಬೇಜಾರು ಬಂದೋಹ್ತಂತೆ.. ಆಗ ಪ್ರಮೋದ್ ಸಿರಿಯಲ್ ಬಿಟ್ಟುಬಿಡಲು ನಿರ್ಧರಿಸಿದರು. ಇದನ್ನು ಸುಪ್ರೀತಾ ಅವರಿಗೂ ಹೇಳಿದ್ರು. ಮುಂದೇ ಏನ್ಮಾಡ್ತೀರಾ ಅಂತಾ ಕೇಳಿದ್ದಕ್ಕೆ, ವಾಪಸ್ ರಂಗಭೂಮಿಗೆ ಹೋಗ್ತೀನಿ ಅಂತಾ ಹೇಳಿದ್ರಂತೆ ಪ್ರಮೋದ್. ಅದಕ್ಕೆ ಸುಪ್ರೀತಾ ಕೂಡ ಓಕೆ ಅಂದ್ರು.