ನವರಾತ್ರಿಯ ನಾಲ್ಕನೇಯ ದಿನ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಮಾಲ್ಫೋವಾ ಅನ್ನೋ ಸಿಹಿಯನ್ನು ದೇವಿಗೆ ನೈವೇದ್ಯವಾಗಿ ಇಡಲಾಗುತ್ತದೆ. ಹಾಗಾಗಿ ಇಂದು ನಾವು ಮಾಲ್ಪೋವಾವನ್ನು ಮಾಡೋದು ಹೇಗೆ..? ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..
ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ..
ಒಂದು ಕಪ್ ಮೈದಾ, ಅರ್ಧ ಕಪ್ ರವಾ, ಒಂದುವರೆ ಕಪ್ ಸಕ್ಕರೆ, ಕೊಂಚ ಏಲಕ್ಕಿ ಪುಡಿ, ಅರ್ಧ ಕಪ್ ಹಾಲು, ಕೊಂಚ ಕೇಸರಿ ದಳ (ಬೇಕಾದ್ದಲ್ಲಿ ಬಳಸಬಹುದು), ಕರಿಯಲು ತುಪ್ಪ. (ಎಣ್ಣೆಯೂ ಬಳಸಬಹುದು.)
ಮೊದಲು ಒಂದು ಬೌಲ್‌ನಲ್ಲಿ ಮೈದಾ, ರವಾ, ಕಾಲು ಕಪ್ ಸಕ್ಕರೆ, ಕೊಂಚ ಏಲಕ್ಕಿ ಪುಡಿ ಮತ್ತು ಹಾಲು ಬೆರೆಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇದು ದೋಸೆ ಹಿಟ್ಟಿನ ಹದಕ್ಕಿರಲಿ. ಅರ್ಧ ಗಂಟೆ ಬಿಟ್ಟು ಒಂದು ಕಪ್ ಸಕ್ಕರೆ ಮತ್ತು ಒಂದು ಕಪ್ ನೀರು ಹಾಕಿ ತಿಳಿಯಾಗಿರುವ ಸಕ್ಕರೆ ಪಾಕ ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಮತ್ತು ಕೇಸರಿ ದಳ ಬಳಸಿ. ನಂತರ ತುಪ್ಪ ಕಾಯಿಸಿ, ಅದರಲ್ಲಿ ವೃತ್ತಾಕಾರ ಬರುವಂತೆ, ಹಿಟ್ಟಿನಿಂದ ಮಾಲ್ಪೋವಾ ಮಾಡಬೇಕು.
ನವರಾತ್ರಿಯ ಮೂರನೇ ದಿನದ ಪ್ರಸಾದ ರೆಸಿಪಿ..
ಮಂದ ಉರಿಯಲ್ಲಿ ಬಂಗಾರದ ಬಣ್ಣ ಬರುವವರೆಗೂ ಕಾಯಿಸಿ. ಇದು ಪೂರಿ ಉಬ್ಬಿದಂತೆ ಉಬ್ಬುತ್ತದೆ. ನಂತರ ಇದನ್ನು ಸಕ್ಕರೆ ಪಾಕಕ್ಕೆ ಹಾಕಿ 10ರಿಂದ 15 ನಿಮಿಷ ಬಿಟ್ರೆ, ಮಾಲ್ಪೋವಾ ರೆಡಿ.